ತರಳಬಾಳು ಕೇಂದ್ರದಿಂದ ಗೋಪಾಲಕೃಷ್ಣ ಅಡಿಗರ ಹುಟ್ಟುಹಬ್ಬ
ಬೆಂಗಳೂರು,ಫೆ.21: ಕನ್ನಡ ಸಾಹಿತ್ಯ ಲೋಕದ ಯುಗ ಪ್ರವರ್ತಕ ಕವಿ ದಿವಂಗತ ಮೊಗೇರಿ ಗೋಪಾಲಕೃಷ್ಣ ಅಡಿಗರ 98ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ತರಳಬಾಳು ಕೇಂದ್ರ ಹಾಗೂ ಶಿವರಾಮ ಕಾರಂತ ವೇದಿಕೆ ಮುಂದಾಗಿದೆ.
ಫೆ.22ರಂದು ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಹೆಸರಾಂತ ಲೇಖಕರು, ಪತ್ರಕರ್ತರು ಅಡಿಗರ ರಚಿಸಿದ ಕವನಗಳನ್ನು ವಾಚಿಸಲಿದ್ದಾರೆ.
ಅಡಿಗರ ಬಗ್ಗೆ ಪ್ರಾಸ್ತಾವಿಕ ನುಡಿ, ಆಶಯ ನುಡಿ ಜೊತೆಗೆ ಕಾವ್ಯ ವಾಚನದ ಕಂಪನ್ನು ಜನರು ಆಸ್ವಾದಿಸಬಹುದು ಎಂದು ಆರ್ ಟಿ ನಗರದ ಶಿವರಾಮ ಕಾರಂತ ವೇದಿಕೆಯ ಕಾರ್ಯದರ್ಶಿ ಡಿ. ಎಚ್ ಎಂ ವೀರಶೇಖರ ಸ್ವಾಮಿ, ಆಧ್ಯಕ್ಷರಾದ ಚಂದ್ರಶೇಖರ ಚಡಗ ಅವರು ಹೇಳಿದ್ದಾರೆ.

ಕಾರ್ಯಕ್ರಮ ವಿವರ:
ಸ್ಥಳ: ತರಳಬಾಳು ಗ್ರಂಥಾಲಯ, ತರಳಬಾಳು ಕೇಂದ್ರ ಎರಡನೇ ಮಹಡಿ,
ಆರ್ ಟಿ ನಗರ, ಬೆಂಗಳೂರು- 560 032.
ದಿನಾಂಕ: 22/02/2015
ಸಮಯ: ಬೆಳಗ್ಗೆ 10.30ರಿಂದ
ಸಂಪರ್ಕ ವಾಣಿ: 93437 66994, 98451 32136
ಉದ್ಘಾಟನೆ: ಕಾಗೋಡು ತಿಮ್ಮಪ್ಪ, ಕರ್ನಾಟಕ ವಿಧಾನಸಭಾಧ್ಯಕ್ಷ
ಪ್ರಾಸ್ತಾವಿಕ ನುಡಿ: ಬಿ.ಬಿ ಕೆದಿಲಾಯ, ಖ್ಯಾತ ವಿಮರ್ಶಕರು
ಆಶಯ ನುಡಿ: ಎನ್ ವಿದ್ಯಾಶಂಕರ, ಖ್ಯಾತ ಲೇಖಕರು.
ಅಡಿಗರ ಕಾವ್ಯ ವಾಚಿಕೆ
* ಜೋಗಿ, ಲೇಖಕರು, ಪತ್ರಕರ್ತರು
* ಸಚ್ಚಿದಾನಂದ ಹೆಗಡೆ, ಖ್ಯಾತ ಲೇಖಕರು
* ಶೂದ್ರ ಶ್ರೀನಿವಾಸ, ಖ್ಯಾತ ಲೇಖಕರು
ಅಧ್ಯಕ್ಷತೆ: ಎಸ್. ಆರ್ ವಿಜಯಶಂಕರ, ಖ್ಯಾತ ವಿಮರ್ಶಕರು.
ಒನ್ ಇಂಡಿಯಾ ಸುದ್ದಿ












Click it and Unblock the Notifications