ಬೆಂಗಳೂರಲ್ಲಿ ನಿರ್ಮಾಪಕ ಗೋವರ್ಧನ ಮೂರ್ತಿ ಬಂಧನ
ಬೆಂಗಳೂರು, ಜ. 22 : ನಿರ್ಮಾಪಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ, ಗೋವರ್ಧನ ಮೂರ್ತಿ ಅವರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಯುವತಿ ಮೇಲೆ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವರ್ಧನ ಮೂರ್ತಿ ಅವರನ್ನು ಬೆಂಗಳೂರಿನ ಅಶೋಕನಗರ ಪೊಲೀಸರು ಬಂಧಿಸಿದ್ದಾರೆ.
'ಗೋವರ್ಧನ ಮೂರ್ತಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ, ಮದುವೆ ಮಾಡಿಕೊಳ್ಳುವಂತೆ ತಿಳಿಸಿದರೂ ಆತ ನಿರಾಕರಿಸುತ್ತಿದ್ದಾನೆ' ಎಂದು ಮಹಾರಾಷ್ಟ್ರದ ರತ್ನಗಿರಿ ಮೂಲದ 20 ವರ್ಷ ವಯಸ್ಸಿನ ಯುವತಿ ಬಳ್ಳಾರಿಯಲ್ಲಿ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದ್ದಳು. [ಗೋವರ್ಧನ ಮೂರ್ತಿ ವಿರುದ್ಧ ಅತ್ಯಾಚಾರದ ಆರೋಪ]

ತನಗೆ ಜೀವ ಬೆದರಿಕೆ ಇರುವುದರಿಂದ ಬಳ್ಳಾರಿಯಲ್ಲಿ ಇದ್ದೇನೆ ಎಂದು ಹೇಳಿದ್ದ ಯುವತಿ ಪೊಲೀಸ್ ಠಾಣೆಗೆದ ದೂರು ನೀಡಿದ್ದಳು. ನಂತರ ದೂರು ಬೆಂಗಳೂರಿಗೆ ವರ್ಗಾವಣೆಗೊಂಡಿತ್ತು. ದೂರಿನ ಅನ್ವಯ ಅಶೋಕ ನಗರ ಪೊಲೀಸರು ಬುಧವಾರ ರಾತ್ರಿ ಗೋವರ್ಧನ ಮೂರ್ತಿ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. [ಗೋವರ್ಧನ್ ಮೂರ್ತಿ ವಿರುದ್ಧ ಕೊಲೆ ಪ್ರಕರಣ]
ಯುವತಿ ಹೇಳಿದ್ದಿಷ್ಟು : 'ಬೆಂಗಳೂರಿನ ರಿಚ್‌ಮಂಡ್ ವೃತ್ತದ ಬಳಿಯ ಬಾರ್‌ನಲ್ಲಿ ನಾನು ಕೆಲಸ ಮಾಡುತ್ತಿದ್ದೆ. ಆಗ ಗೋವರ್ಧನ ಮೂರ್ತಿ ಪರಿಚಯವಾಗಿತ್ತು. ಬೆದರಿಕೆ ಒಡ್ಡಿ ತನ್ನ ತೋಟದ ಮನೆಗ ಕರೆಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ' ಎಂದು ಯುವತಿ ಆರೋಪಿಸಿದ್ದಾರೆ.
'ನನ್ನ ಪರಿಚಯವಾದ ಮೇಲೆ ನನ್ನ ಮೇಲೆ ಗೋವರ್ಧನಮೂರ್ತಿ ಆಸೆ ಆತ ಪಟ್ಟಿದ್ದ. ತೋಟದ ಮನೆಗೆ ಬರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಸುರೇಶ್ ಎಂಬ ವ್ಯಕ್ತಿಯ ಬೆದರಿಕೆಗೆ ಮಣಿದು ಬೆಂಗಳೂರು ಹೊರ ವಲಯದಲ್ಲಿದ್ದ ಅವರ ತೋಟದ ಮನೆಗೆ ತೆರಳಿದ್ದ ನನ್ನ ಮೇಲೆ ನಾಲ್ಕು ಬಾರಿ ಅತ್ಯಾಚಾರ ನಡೆದಿದೆ' ಎಂದು ಯುವತಿ ಆರೋಪಿಸಿದ್ದಾಳೆ.
'ಮದುವೆ ಮಾಡಿಕೊಳ್ಳುವಂತೆ ತಿಳಿಸಿದರೂ ಆತ ನಿರಾಕರಿಸುತ್ತಿದ್ದಾನೆ' ಎಂದು ಯುವತಿ ಬಳ್ಳಾರಿಯಲ್ಲಿ ಪೊಲೀಸರಿಗೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಯ ಕಾರ್ಯಕರ್ತರ ನೆರವಿನೊಂದಿಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಗೋವರ್ಧನ ಮೂರ್ತಿಯನ್ನು ಬಂಧಿಸಲಾಗಿದೆ.
ಅಂದಹಾಗೆ ಗೋವರ್ಧನ ಮೂರ್ತಿ ಅವರು ನಟ ವಿನೋದ್ ಕುಮಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಗೋವರ್ಧನ ಮೂರ್ತಿ ಸೇರಿದಂತೆ ಏಳು ಮಂದಿ ಆರೋಪಿಗಳನ್ನು ನಗರದ ಸೆಷನ್ಸ್ ನ್ಯಾಯಾಲಯ 2012ರಲ್ಲಿ ಖುಲಾಸೆಗೊಳಿಸಿ ಆದೇಶ ನೀಡಿತ್ತು.












Click it and Unblock the Notifications