ಕಂಬನಿಯ ಕುಯಿಲು ಆಧಾರಿತ ಚಿಗರಿಗಂಗಳ ಚೆಲುವೆ ನಾಟಕ ನೋಡಿ
ಬೆಂಗಳೂರು, ಅಕ್ಟೋಬರ್ 17: ಕನ್ನಡ ಸಾಹಿತಿ ತ. ರಾ. ಸುಬ್ಬರಾಯರ ಐತಿಹಾಸಿಕ ಕಾದಂಬರಿ 'ಕಂಬನಿಯ ಕುಯಿಲು' ರಂಗರೂಪ ಪಡೆದು 'ಚಿಗರಿಗಂಗಳ ಚೆಲುವೆ' ಎಂಬ ಹೆಸರಿನಲ್ಲಿ ಪ್ರದರ್ಶನಕ್ಕೆ ಸಿದ್ಧವಾಗಿದೆ. ಕಲಾ ವಿಲಾಸಿ ತಂಡ ಅಭಿನಯಿಸಿರುವ ಈ ನಾಟಕದ ಮೊದಲ ಪ್ರದರ್ಶನದ ಅಕ್ಟೋಬರ್ 19ರಂದು ನಡೆಯಲಿದೆ.
ಪ್ರದರ್ಶನದ ವಿವರಗಳು :
ನಾಟಕ : ಚಿಗರಿಗಂಗಳ ಚೆಲುವೆ
ಆಧಾರ : ತ. ರಾ. ಸು ಅವರ 'ಕಂಬನಿಯ ಕುಯಿಲು'
ರಂಗರೂಪ ನಿರ್ದೇಶನ : ಸಿದ್ದರಾಮು ಕೆ.ಎಸ್
ಸಂಗೀತ ನಿರ್ದೇಶನ: ಸತ್ಯ ರಾಧಾಕೃಷ್ಣ
ದಿನಾಂಕ : 19-ಅಕ್ಟೋಬರ್-2019, ಶನಿವಾರ
ಸಮಯ : ಸಂಜೆ 7.30. ಅವಧಿ : 90 ನಿಮಿಷ
ಸ್ಥಳ : ಕೆ.ಇ.ಎ ಪ್ರಭಾತ್ ರಂಗಮಂದಿರ ಬಸವೇಶ್ವರ ನಗರ. ಮ್ಯಾಕ್ಸ್ ಮುಲ್ಲರ್ ಶಾಲೆಯ ಹತ್ತಿರ.
ಅಭಿನಯಿಸುವ ತಂಡ : ಕಲಾವಿಲಾಸಿ ಬೆಂಗಳೂರು
ಟಿಕೆಟ್ ದರ : 100/-
"ಕಂಬನಿಯ ಕುಯಿಲು ಕಾದಂಬರಿಯ ಕಥಾವಸ್ತುವನ್ನು ಈ ರೀತಿಯ ಚಿಗರಿಗಂಗಳ ಚೆಲುವೆಯ ದೃಷ್ಟಿಯಲ್ಲಿ ವ್ಯಾಖ್ಯಾನಿಸಿ ನೋಡುಗರ ಮುಂದೆ ತರುವ ಪ್ರಯತ್ನವನ್ನು ಈ ಪ್ರಯೋಗದಲ್ಲಿ ಮಾಡಲಾಗಿದೆ" ಎಂದು ಕಲಾವಿಲಾಸಿ ತಂಡದವರು ತಿಳಿಸಿದ್ದಾರೆ.

ನಾಟಕದ ಕುರಿತು
'ಚಿಗರಿಗಂಗಳ ಚೆಲುವೆ' ತ.ರಾ.ಸು(ತಳುಕು ರಾಮಸ್ವಾಮಯ್ಯ ಸುಬ್ಬರಾಯ) ಅವರು ಚಿತ್ರದುರ್ಗದ ಇತಿಹಾಸದ ಕುರಿತು ರಚಿಸಿರುವ ಸರಣಿ ಕಾದಂಬರಿಗಳಲ್ಲಿ ಮೊದಲ ಕಾದಂಬರಿಯಾದ 'ಕಂಬನಿಯ ಕುಯಿಲು' ಕಾದಂಬರಿಯನ್ನು ಆಧರಿಸಿದ ನಾಟಕವಾಗಿರುತ್ತದೆ.

ಮದಕರಿ ನಾಯಕರ ಅಕಾಲ ಮರಣ ನಂತರ
ಚಿತ್ರದುರ್ಗವನ್ನು ಸುಮಾರು ಇನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ ರಾಜವಂಶಗಳ ಪೈಕಿ ಎರಡನೇ ಮದಕರಿ ನಾಯಕರ ಅಕಾಲ ಮರಣ ನಂತರ ಮುಂದಿನ ರಾಜಕುಮಾರರನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ, ಅರಮನೆಯವರ ಮತ್ತು ಸೇನೆಯವರ ನಡುವೆ ತಲೆದೋರುವ ಭಿನ್ನಾಭಿಪ್ರಾಯಗಳೇ ನಾಟಕದ ಪ್ರಮುಖ ವಸ್ತು. ಈ ಇಡೀ ಗೊಂದಲಮಯ ವಾತಾವಾರಣದಲ್ಲಿ ಆಡಳಿತದಲ್ಲಿ ಇದ್ದವರೇ ಅಲ್ಲದೆ ದುರ್ಗದಲ್ಲಿ ಸಾಮಾನ್ಯವಾಗಿ ಬದುಕುತ್ತಿದ್ದ ಕುಟುಂಬಗಳೂ ಕೂಡ ಈ ಒಡಕಿನ ಪರಿಣಾಮವನ್ನು ಎದುರಿಸಬೇಕಾಗಿ ಬರುತ್ತದೆ.

ಚಿಗರಿಗಂಗಳ ಚೆಲುವೆ-ಪದದ ಮೂಲ
ಚಿಗರಿಗಂಗಳ ಚೆಲುವೆ, ವರಕವಿ ಬೇಂದ್ರೆ ಅವರ ಸಖೀಗೀತ ಕವನ ಸಂಕಲನದಲ್ಲಿ ಬರುವ ಕವಿತೆ. ಇಲ್ಲಿ ಬೇಂದ್ರೆ ಅವರು ಭೂಮಿಯನ್ನು ಚಿಗರಿಗಂಗಳ ಚೆಲುವೆ ಎನ್ನುತ್ತಾರೆ. ಪಕ್ಷಿ, ಪಶು, ಮಾನವ ಎಲ್ಲವನ್ನೂ ಜೀವವೆಂದು ಬಗೆಯದೆ ಜಡವಾಗಿ ಭಾವಿಸಿ ಭೂಮಿತಾಯಿಯನ್ನು ಹಿಂಸೆಗೊಳಿಸುವ ಯುಗಯುಗಗಳ ಗೋಳನ್ನು ಬೇಂದ್ರೆಯವರು ಈ ಪದ್ಯದ ಮೂಲಕ ವ್ಯಕ್ತಪಡಿಸುತ್ತಾರೆ. ಮನುಷ್ಯನ ಕ್ರೌರ್ಯಭರಿತ ದಾಹಕ್ಕೆ ಬಲಿಯಾಗಿ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಪ್ರತೀ ಹಸುಜೀವವೂ ನಮಗೆ ಚಿಗರಿಗಂಗಳ ಚೆಲುವೆಯಾಗಿ ಈ ಪದ್ಯದ ಭಾವದಲ್ಲಿ ಕಾಣಿಸಿಕೊಳ್ಳುತ್ತವೆ.

ಕಲಾವಿಲಾಸಿ ಕುರಿತು
ಕಲಾವಿಲಾಸಿ 2018 ಜೂನ್ ತಿಂಗಳಿನಲ್ಲಿ ರಂಗಭೂಮಿ ಮತ್ತು ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುವ ಆಶಯದಿಂದ ಕಾರ್ಯಾರಂಭ ಮಾಡಿದ ಕಲಾ ತಂಡ. ತಂಡದ ಮೊದಲ ನಾಟಕವಾಗಿ ಖ್ಯಾತ ಸಾಹಿತಿ ಬೀಚಿಯವರ ಜೀವನವನ್ನು ಆಧರಿಸಿದ 'ಮಾನಸ ಪುತ್ರ' ಎಂಬ ನಾಟಕವನ್ನು ಬಸವರಾಜ ಎಮ್ಮಿಯವರ ಅವರ ನಿರ್ದೇಶನದಲ್ಲಿ ರಂಗದ ಮೇಲೆ ತಂದು ನಿರಂತರ ಪ್ರದರ್ಶನ ನೀಡಲಾಗುತ್ತಿದೆ. ಇದಲ್ಲದೇ ಆಟಾಮಾಟ ಧಾರವಾಡ ತಂಡದ ಪ್ರಮುಖ ನಾಟಕಗಳಾದ 'ಮತ್ತೊಬ್ಬ ಮಾಯಿ', 'ಮೋಹನ ಸ್ವಾಮಿ' ಮತ್ತು 'ನುಲಿಯ ಚಂದಯ್ಯ' ನಾಟಕಗಳ ಪ್ರದರ್ಶನಗಳನ್ನು ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಚಿಗರಿಗಂಗಳ ಚೆಲುವೆ ಕಲಾವಿಲಾಸಿ ತಂಡದ ಎರಡನೇ ನಾಟಕ.
-
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
LPG Crisis: ಎಲ್ಪಿಜಿ ಬಿಕ್ಕಟ್ಟಿನ ಸುಳಿಯಲ್ಲಿ ಭಾರತದ ಪ್ರಮುಖ ನಗರಗಳು: ದರ್ಶಿನಿಗಳು ಬಂದ್, ಪಿಜಿಗಳಲ್ಲಿ ಮೆನು ಚೇಂಜ್ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್












Click it and Unblock the Notifications