ಬೆಂಗಳೂರು 'ಕಂಬಳ': ಟ್ರ್ಯಾಕ್ ನಿರ್ಮಾಣ, ಪರೀಕ್ಷೆ ಸೇರಿದಂತೆ ಸಿದ್ಧತೆಗಳು ಹೇಗಿವೆ?

ಬೆಂಗಳೂರು, ಅಕ್ಟೋಬರ್ 19: ಕೆಸರಿನಲ್ಲಿ ಕೋಣ (ಎಮ್ಮೆ) ಓಡಿಸುವ 'ಕಂಬಳ' ಹಬ್ಬವು ನವೆಂಬರ್ 25 ಮತ್ತು 26ರಂದು ಬೆಂಗಳೂರಿನಲ್ಲಿ ನಡೆಯಲಿವೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಿಂದ ಸುಮಾರು 125 ಜೋಡಿ ಎಮ್ಮೆಗಳು ಮತ್ತು ಜಾಕಿಗಳು ನಗರಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಸಂಬಂಧ ಅಗತ್ಯ ಸಿದ್ಧತೆಗಳು ನಡೆದಿವೆ. ಹಾಗಾದರೆ ಹೇಗಿರಲಿದೆ ಕಂಬಳ ಕಾರ್ಯಕ್ರಮ ತಿಳಿಯಿರಿ.

ಕಂಬಳ ಸಂಘಟನಾ ಸಮಿತಿಯ ಸದಸ್ಯ ಹಾಗೂ ಖ್ಯಾತ ಚಲನಚಿತ್ರ ಸಂಗೀತ ಸಂಯೋಜಕ ಗುರುಕಿರಣ್ ಅವರು ಮಾತನಾಡಿ, ರೇಸ್‌ಗಾಗಿ 14 ಅಡಿ ಆಳಕ್ಕೆ, ಸುಮಾರು 140 ಮೀಟರ್‌ ಉದ್ದದ ಟ್ರ್ಯಾಕ್‌ ಅಗೆಯಲಾಗಿದೆ. ಟ್ರ್ಯಾಕ್‌ಗೆ ಮರಳು, ಮಣ್ಣು ತುಂಬುವ ಕೆಲಸ ಪ್ರಗತಿಯಲ್ಲಿದೆ. ಬೆಂಗಳೂರಿನ ಮಣ್ಣು ನೀರು ಹೀರಿಕೊಳ್ಳಲು ಹೆಚ್ಚು ಕಾಲಾವಕಾಶ ಬೇಕಿದ್ದರಿಂದ ಮಣ್ಣಿನ ಪರೀಕ್ಷೆ ನಡೆಸುತ್ತಿದ್ದೇವೆ. ಬೋರ್‌ವೆಲ್ ಕೊರೆಸಲಾಗಿದೆ ಎಂದು ತಿಳಿಸಿದರೆಂದು 'ನ್ಯೂಸ್ ನೈನ್' ವರದಿ ಮಾಡಿದೆ.

kambala-fest-on-november-25-26th

ಕಂಬಳ ಕಾರ್ಯಕ್ರಮ ಸಂಬಂಧ ಎಮ್ಮೆಗಳು ಕರಾವಳಿ ಭಾಗದಿಂದ ಮೊದಲು ಹಾಸನಕ್ಕೆ ಬರಲಿವೆ. ಅಲ್ಲಿಂದ ಕ್ರಮೇಣ ಬೆಂಗಳೂರು ತಲುಪಲಿವೆ. ಬಹುದೂರದ ಪ್ರದೇಶಗಳಿಗೆ ಒಮ್ಮೆಲೆ ಎಮ್ಮೆಗಳನ್ನು ಟ್ರಕ್‌ನಲ್ಲಿ ತಂದಾಗ ಅವುಗಳಿಗೆ ಆಯಾಸವಾಗಬಾರದು ಎಂದು ಹೀಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಆಟಕ್ಕೂ ಮುನ್ನ ಎಮ್ಮೆಗಳಿಗೆ ವಿಶ್ರಾಂತಿ

ಇನ್ನೂ ಎಮ್ಮೆಗಳು ಸ್ಫರ್ಧೆಯಲ್ಲಿ ಭಾಗವಹಿಸುವುದಕ್ಕೆ ಮೊದಲು ಸಾಕಷ್ಟು ವಿಶ್ರಾಂತಿ ಪಡೆಯಬೇಕಿರುತ್ತದೆ. ಆದ್ದರಿಂದ ಓಟದ ಎರಡು ದಿನಗಳ ಮೊದಲು ಮಾತ್ರವೇ ಬೆಂಗಳೂರಿಗೆ ತಲುಪಿಸಲು ವ್ಯವಸ್ಥೆ ಮಾಡಿದೆ ಎಂದು ಮಾಲೀಕರು ವಿವರಿಸಿದ್ದಾರೆ.

ಕರಾವಳಿಗೆ ಭಾಗದ ಜಿಲ್ಲೆಗಳಿಗೆ ಸೀಮಿತವಾಗಿದ್ದ ಎಮ್ಮೆಗಳ ಓಟ/ಕಂಬಳ ಹಬ್ಬವು ಇದೀಗ ಬೇರೆ ಜಿಲ್ಲೆಗಳಿಗೆ ವಿಸ್ತರಣೆ ಆಗುತ್ತಿದೆ. ಈ ಕುರಿತು ಮಾತನಾಡಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಬೆಂಗಳೂರು ಕಂಬಳ ಸಮಿತಿಯನ್ನು ಕರೆದ ನಂತರ ಈ ಬಾರಿ ಕಂಬಳವನ್ನು ಬೆಂಗಳೂರಿನಲ್ಲಿ ಆರಂಭಿಸಲಾಗುತ್ತಿದೆ.

kambala-fest-on-november-25-26th

ಎರಡು ವಿಧದ ಸ್ಥಳಗಳಲ್ಲಿ ಕಂಬಳ ಆಯೋಜನೆ

ಕರಾವಳಿ ತಾಲೂಕುಗಳಲ್ಲಿ ಪ್ರತಿ ಭತ್ತದ ಕೊಯ್ಲಿನ ಬಳಿಕ ಜಮೀನುಗಳಲ್ಲಿ ನೀರು ಮತ್ತು ಕೆಸರು ತುಂಬಿಸಿ ರೇಸಿಂಗ್ ಟ್ರ್ಯಾಕ್ ಮಾಡಿ ಎಮ್ಮೆಗಳನ್ನು ಸುತ್ತಿನ ಪ್ರಕಾರ ಓಡಿಸಲಾಗುತ್ತದೆ. ವಿಜೇತರಿಗೆ ಹಣ್ಣು ಮತ್ತು ತರಕಾರಿಗಳನ್ನು ಬಹುಮಾನವಾಗಿ ನೀಡಲಾಗುತ್ತಿತ್ತು, ಆದರೆ ಈಗ ಅವರಿಗೆ ಚಿನ್ನ ಮತ್ತು ನಗದು ನೀಡಿ ಗೌರವಿಸಲಾಗುತ್ತಾ ಬರಲಾಗಿದೆ.

ಇನ್ನೂ ಈ ಕಂಬಳವನ್ನು 'ಸಾಂಪ್ರದಾಯಿಕವಾದವು ಭತ್ತದ ಗದ್ದೆಗಳಲ್ಲಿ ನಡೆಯುತ್ತದೆ' ಮತ್ತೊಂದು ಆಧುನಿಕವಾಗಿ ರೇಸಿಂಗ್ ಟ್ರ್ಯಾಕ್‌ಗಳನ್ನು ಪರಿವರ್ತಿಸಿ ಮೈದಾನದಲ್ಲಿ ನಡೆಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಪ್ರಾಣಿಗಳಿಗೆ ಇಂತಹ ಕ್ರೀಡೆಗಳಹಿಂದ ಹಿಂಸೆ ಆಗುತ್ತದೆ ಎಂದು ಹೇಳಿಎ ಸುಪ್ರೀಂ ಕೋರ್ಟ್ 2014 ರಲ್ಲಿ ಈ ಕಂಬಳ ಕ್ರೀಡೆಯನ್ನು ಸುಪ್ರಿಂ ಕೋರ್ಟ್ ನಿಷೇಧ ಮಾಡಿತ್ತು. ರಾಜಕೀಯ ಸೇರಿದಂತೆ ಸಾರ್ವಜನಿಕ ಒತ್ತಡದ ಬಲವಾಗಿ ಈ ಕ್ರೀಡೆ 2017ರಲ್ಲಿ ಕಾನೂನುಬದ್ಧಗೊಳಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+