Weekend Special Train: ಕಲಬುರಗಿ-ಬೆಂಗಳೂರು ವಾರಾಂತ್ಯದ ವಿಶೇಷ ರೈಲು ಸೇವೆ ವಿಸ್ತರಣೆ
Weekend Special Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ವಿಶೇಷ ರೈಲುಗಳ ಸೇವೆಯನ್ನು ನೀಡುತ್ತಲಿರುತ್ತದೆ. ಇದೀಗ ಮುಂಬರುವ ಮಕರ ಸಂಕ್ರಾಂತಿ ಹಾಗೂ ಹೋಳಿ ಹಬ್ಬಗಳ ವೇಳೆ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ವಾರಂತ್ಯ ವಿಶೇಷ ರೈಲು ಸೇವೆ ವಿಸ್ತರಣೆ ಮಾಡಿದೆ. ಹಾಗಾದ್ರೆ, ದಿನಾಂಕಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಮುಂಬರುವ ಮಕರ ಸಂಕ್ರಾಂತಿ ಹಾಗೂ ಹೋಳಿ ಹಬ್ಬಗಳ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಹಿನ್ನೆಲೆ, ಕಲಬುರಗಿ-ಬೆಂಗಳೂರು ಕ್ಯಾಂಟೋನ್ಮೆಂಟ್ ವಾರಾಂತ್ಯದ ವಿಶೇಷ ರೈಲುಗಳ ಸೇವೆಯನ್ನು ಹೆಚ್ಚುವರಿಯಾಗಿ 16 ಟ್ರಿಪ್‌ಗಳಿಗೆ ಹೆಚ್ಚಿಸಲು ರೈಲ್ವೇ ಇಲಾಖೆ ನಿರ್ಧರಿಸಿದೆ.

ಯಾವಾಗಿನಿಂದ ಆರಂಭ?: ಕಲಬುರಗಿ-ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವಿನ ವಾರಾಂತ್ಯದ ವಿಶೇಷ ರೈಲುಗಳಿಗೆ ಈ ವಿಸ್ತರಣೆ ಅನ್ವಯ ಆಗಲಿದೆ. ಮೊದಲು ಡಿಸೆಂಬರ್ 2025ರ ಅಂತ್ಯವರೆಗೆ ಮಾತ್ರ ಕಾರ್ಯನಿರ್ವಹಿಸಲು ನಿರ್ಧರಿಸಲಾಗಿತ್ತು. ಇದೀಗ ಈ ರೈಲು ಸೇವೆಗಳು ಫೆಬ್ರವರಿ ಅಂತ್ಯ ಹಾಗೂ ಮಾರ್ಚ್ 2026ರ ಆರಂಭದವರೆಗೆ ಮುಂದುವರೆಸಿದೆ.
ವಿಶೇಷ ರೈಲುಗಳ ವಿವರ: ರೈಲು ಸಂಖ್ಯೆ 06207 ಬೆಂಗಳೂರು ಕ್ಯಾಂಟೋನ್ಮೆಂಟ್-ಕಲಬುರಗಿ ವಾರಾಂತ್ಯದ ವಿಶೇಷ ರೈಲು ಸೇವೆ ಜನವರಿ 3ರಿಂದ ಆರಂಭವಾಗಿದೆ. ಇದು ಫೆಬ್ರವರಿ 28ರವರೆಗೆ ಪ್ರತೀ ಶನಿವಾರ ಸಂಚರಿಸಲಿದೆ. 8 ಹೆಚ್ಚುವರಿ ಟ್ರಿಪ್‌ಗಳನ್ನು ಹೊಂದಿದೆ. ಅದೇ ರೀತಿ, ರೈಲು ಸಂಖ್ಯೆ 06208 ಕಲಬುರಗಿ-ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ವಿಶೇಷ ರೈಲು ಸೇವೆ ಜನವರಿ 4ರಿಂದ ಆರಂಭವಾಗಿದೆ. ಇದು ಮಾರ್ಚ್ 1ರ ವರೆಗೆ ಪ್ರತಿ ಭಾನುವಾರ ಸಂಚರಿಸಲಿದ್ದು, ಇದರಿಂದ ಕೂಡ 8 ಹೆಚ್ಚುವರಿ ಟ್ರಿಪ್‌ಗಳು ಲಭ್ಯವಾಗಲಿವೆ.
ಎಲ್ಲೆಲ್ಲಿ ನಿಲುಗಡೆ?: ಈ ವಿಶೇಷ ರೈಲುಗಳ ಸಂಯೋಜನೆ ಹಾಗೂ ನಿಲ್ದಾಣಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಮಧ್ಯದಲ್ಲಿ ಸೆಂಟ್ರಲ್ ರೈಲ್ವೆಯ ಸೋಲಾಪುರ ವಿಭಾಗದ ಕಲಬುರಗಿ ಮತ್ತು ಶಾಹಾಬಾದ್ ನಿಲ್ದಾಣಗಳಲ್ಲಿ ಈ ರೈಲುಗಳು ನಿಲುಗಡೆ ಹೊಂದಿರಲಿವೆ.
ಟಿಕೆಟ್ ಬುಕಿಂಗ್ ಬಗ್ಗೆ ಮಾಹಿತಿ: ವಿಶೇಷ ದರದಲ್ಲಿ ಸಂಚರಿಸುವ ರೈಲುಗಳಿಗೆ ಎಲ್ಲಾ ಕಂಪ್ಯೂಟರೈಸ್‌ಡ್ ಕಾಯ್ದಿರಿಸುವ ಕೇಂದ್ರಗಳು ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು. ಕಾಯ್ದಿರಿಸದ ಬೋಗಿಗಳ ಟಿಕೆಟ್‌ಗಳನ್ನು ನಿಲ್ದಾಣಗಳ ಕೌಂಟರ್‌ಗಳಲ್ಲಿ ಹಾಗೂ ಯುಟಿಎಸ್ ಮೊಬೈಲ್ ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದು. ಅನಾನುಕೂಲತೆಯನ್ನು ತಪ್ಪಿಸಲು ಪ್ರಯಾಣಿಕರು ಮಾನ್ಯ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವಂತೆ ಸಲಹೆ ನೀಡಲಾಗಿದೆ.
ವಿವರವಾದ ರೈಲು ಸಮಯ ಹಾಗೂ ಇತರೆ ಮಾಹಿತಿಗಾಗಿ ಪ್ರಯಾಣಿಕರು ಭಾರತೀಯ ರೈಲ್ವೆ ವಿಚಾರಣಾ ಪೋರ್ಟಲ್‌ಗೆ ಭೇಟಿ ನೀಡಬಹುದು ಅಥವಾ ರೇಲ್‌ಒನ್ (RailOne) ಮತ್ತು ಎನ್‌ಟಿಇಎಸ್ (NTES) ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಬಹುದು. ಹೀಗೆ ಭಾರತೀಯ ರಲ್ವೆ ಹಬ್ಬಗಳ ಸಮಯದಲ್ಲಿ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಅನುಕೂಲ ಆಗುವ ದೃಷ್ಟಿಯಿಂದ ವಿಶೇಷ ರೈಲು ಸೇವೆಯನ್ನು ಒದಗಿಸುತ್ತಾ ಬಂದಿದೆ.
ಸಾಮಾನ್ಯವಾಗಿ ಹಬ್ಬಗಳ ಸಮಯದಲ್ಲಿ ನಗರ ಪ್ರದೇಶಗಳಿಂದ ತನ್ನ ಊರಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಿಗಳು, ನಿವಾಸಿಗಳು ತಮ್ಮ ಊರುಗಳಿಗೆ ಪ್ರಯಾಣಿಸುತ್ತಾರೆ. ಈ ವೇಳೆ ಇದನ್ನೇ ಬಂಡವಾಳ ಮಾಡಿಕೊಂಡು ಖಾಸಗಿ ಬಸ್‌ಗಳದ್ದೇ ದರ್ಬಾರ್ ಆಗಿರುತ್ತದೆ. ದರ ದುಪಟ್ಟು ಮಾಡುವ ಮೂಲಕ ಪ್ರಯಾಣಿಕರ ಬಳಿ ಹೆಚ್ಚು ಹಣ ಪೀಕುತ್ತವೆ. ಆದ್ದರಿಂದ ಕಡಿಮೆ ಪ್ರಯಾಣ ದರ ಹಾಗೂ ಆರಾಮದಾಯಕ ಪ್ರಯಾಣ ಹಿನ್ನೆಲೆ ಬಹುತೇಕ ಮಂದಿ ರೈಲಿನಲ್ಲೇ ಪ್ರಯಾಣ ಮಾಡಲು ಇಷ್ಟಪಡುತ್ತಾರೆ. ಆದ್ದರಿಂದ ಹಬ್ಬಗಳ ಸಮಯದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡೇ ಭಾರತೀಯ ರೈಲ್ವೆ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹೆಚ್ಚುವರಿ ರೈಲುಗಳ ಸೇವೆ ಕಲ್ಪಿಸುತ್ತಾ ಬಂದಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications