ಮಾಜಿ ಕಾರ್ಪೊರೇಟರ್ ಕದಿರೇಶ್ ಹತ್ಯೆ, ಇಬ್ಬರು ಶರಣು

ಬೆಂಗಳೂರು, ಫೆಬ್ರವರಿ 13 : ಮಾಜಿ ಕಾರ್ಪೊರೇಟರ್ ಕದಿರೇಶ್ ಹತ್ಯೆ ಪ್ರಕರಣದ ಇಬ್ಬರು ಆರೋಪಿಗಳು ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಕೋರ್ಟ್ ಆರೋಪಿಗಳನ್ನು 10ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದೆ.

ಹತ್ಯೆ ಪ್ರಕರಣದ ಆರೋಪಿಗಳಾದ ನವೀನ್ ಮತ್ತು ವಿನಯ್ ಸೋಮವಾರ ಮಧ್ಯಾಹ್ನ 24ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಶರಣಾದರು. ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 15 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದರು. ಕೋರ್ಟ್ 10 ದಿನಗಳ ಪೊಲೀಸರ ವಶಕ್ಕೆ ನೀಡಿ ಆದೇಶ ಹೊರಡಿಸಿತು.

ಫೆ.7ರಂದು ಛಲವಾದಿಪಾಳ್ಯದ ಬಿಜೆಪಿ ಕಾರ್ಪೊರೇಟರ್ ರೇಖಾ ಕದಿರೇಶ್ ಪತಿ ಕದಿರೇಶ್ ಅವರನ್ನು ನವೀನ್, ವಿನಯ್ ಮತ್ತು ಇತರ ಇಬ್ಬರು ಆರೋಪಿಗಳು ಹತ್ಯೆ ಮಾಡಿದ್ದರು.

Kadiresh murder case, two accused surrendered before court

ಬಳಿಕ ತಿರುಪತಿಗೆ ಪರಾರಿಯಾಗಿದ್ದರು. ಆರೋಪಿಗಳ ಬಂಧನಕ್ಕೆ 4 ಪೊಲೀಸ್ ತಂಡಗಳನ್ನು ರಚನೆ ಮಾಡಲಾಗಿತ್ತು. ಕಾಟನ್ ಪೇಟೆ ಪೊಲೀಸರು ಪ್ರಕರಣದ ತನಿಖೆಯನ್ನು ನಡೆಸುತ್ತಿದ್ದರು.

ವಕೀಲರ ಕೋಟ್ ಧರಿಸಿ ಪ್ರವೇಶ : ನ್ಯಾಯಾಲಯದಲ್ಲಿ ಪೊಲೀಸರ ಕಾವಲು ಇದ್ದರೂ ಆರೋಪಿಗಳು ಹಾಜರಾಗುವ ತನಕ ಪೊಲೀಸರಿಗೆ ಪತ್ತೆ ಹಚ್ಚಲು ಸಾಧ್ಯವಾಗಲಿಲಿಲ್ಲ. ವಕೀಲರ ಕೋಟ್ ಧರಿಸಿ ಆರೋಪಿಗಳು ನ್ಯಾಯಾಲಯ ಪ್ರವೇಶಿಸಿದ್ದರು.

ಈ ಹತ್ಯೆ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ಭಾಗಿಯಾಗಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ. ಅವರನ್ನು ಬಂಧಿಸಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+