ಸಂಕ್ರಾಂತಿ ಸಂಭ್ರಮದೊಂದಿಗೆ ಕಡಲೆಕಾಯಿ ಪರಿಷೆ ಆಚರಿಸಿ

ಬೆಂಗಳೂರು, ಜ.14 : ಸಂಕ್ರಾಂತಿ ಹಬ್ಬದ ಸಂಭ್ರಮದೊಂದಿಗೆ ನೀವು ಕಡಲೆಕಾಯಿ ಪರಿಷೆಯಲ್ಲಿ ಪಾಲ್ಗೊಳ್ಳಬಹುದು. ಹೌದು, ಜ.15ರಂದು ನೈಸ್ ಕಾರಿಡಾರ್ ವೃತ್ತದ ಸಮೀಪ ಕಡೆಲೆ ಕಾಯಿ ಪರಿಷೆ ನಡೆಯಲಿದೆ. ಇಲ್ಲಿ ಉಚಿತವಾಗಿ ಕಡಲೆಕಾಯಿ ವಿತರಣೆ ಮಾಡಲಾಗುತ್ತದೆ.

ನೈಸ್ ಕಾರಿಡಾರ್ ವೃತ್ತ ಸಮೀಪದ ಚನ್ನವೀರಯ್ಯನಪಾಳ್ಯ, ವರಾಹಸಂದ್ರ, ಸೋಂಪುರದಲ್ಲಿ ಜ.15ರಂದು ಆರನೇ ವರ್ಷದ 6ನೇ ವರ್ಷದ ಕಡಲೆಕಾಯಿ ಪರಿಷೆ ನಡೆಯಲಿದೆ. ಸೋಂಪುರದ ರಸ್ತೆ ಬದಿಗಳಲ್ಲಿ ಕಬ್ಬು, ಕಡಲೆಕಾಯಿ, ಗೆಣಸಿನೊಂದಿಗೆ ರೈತರು ಪರಿಷೆಗೆ ಸಜ್ಜಾಗಿದ್ದಾರೆ. [ಸಂಕ್ರಾಂತಿಗೆ ತಟ್ಟದ ಬೆಲೆ ಏರಿಕೆ ಬಿಸಿ, ಗ್ರಾಹಕರಿಗೆ ಫುಲ್ ಖುಷಿ]

Kadalekai Parishe

ಚೋಳರ ಕಾಲದ ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಆರು ವರ್ಷಗಳಿಂದ ಸಂಕ್ರಾಂತಿ ಹಬ್ಬದೊಂದಿಗೆ ಕಡಲೆಕಾಯಿ ಪರಿಷೆಯನ್ನೂ ಆಚರಿಸಲಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಎಂ.ರುದ್ರೇಶ್ ಹೇಳಿದ್ದಾರೆ. ರಾಮನಗರ, ಮಾಗಡಿ, ಕನಕಪುರ, ಪಾವಗಡ, ಹೊಸೂರು, ಅನಂತಪುರ ಮುಂತಾದ ಕಡೆಗಳಿಂದ ರೈತರು ಪರಿಷೆಗಾಗಿ ಆಗಮಿಸಲಿದ್ದಾರೆ. [ಜ.14, 15ರಂದು ಹಳ್ಳಿಮನೆಯಲ್ಲಿ ಸಂಕ್ರಾಂತಿ ಹಬ್ಬದೂಟ]

ಉಚಿತ ಕಡಲೆಕಾಯಿ : ಉಚಿತವಾಗಿ ಕಡೆಲೆ ಕಾಯಿ ನೀಡುವುದು ಈ ಪರಿಷೆಯ ವಿಶೇಷ. ಪರಿಷೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ತಲಾ 2 ಸೇರು ಕಡೆಲೆಕಾಯಿ, ಒಂದು ಜೊತೆ ಕಬ್ಬಿನ ಜಲ್ಲೆಯನ್ನು ಉಚಿತವಾಗಿ ನೀಡಲಾಗುತ್ತದೆ. [ಬಸವನಗುಡಿ ಕಡಲೆಕಾಯಿ ಪರಿಷೆ ಚಿತ್ರಗಳು]

ಮೊದಲ ಎರಡು ವರ್ಷದ ಸೇರು ಕಡಲೆಕಾಯಿಗೆ 2 ರೂ. ನಿಗದಿ ಮಾಡಲಾಗಿತ್ತು. ನಂತರ ಉಚಿತವಾಗಿ ಕಡಲೆಕಾಯಿ ನೀಡಲು ಆರಂಭಿಸಲಾಗಿದೆ ಎಂದು ಎಂ.ರುದ್ರೇಶ್ ಮಾಹಿತಿ ನೀಡಿದರು. ಪರಿಷೆಯೊಂದಿಗೆ ಗ್ರಾಮ ದೇವತೆಗಳ ಉತ್ಸವವನ್ನು ಆಚರಿಸಲಾಗುತ್ತಿದೆ.

ಬಸ್ ವ್ಯವಸ್ಥೆ : ಪರಿಷೆಗಾಗಿ ಬರುವ ಜನರಿಗಾಗಿ ಹೆಚ್ಚುವರಿ ಬಿಎಂಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ. ತಲಘಟ್ಟಪುರ, ಕನಕಪುರ ರಸ್ತೆ, ಮೈಸೂರು ರಸ್ತೆ, ಕೆಂಗೇರಿ, ಹೊಸಕೆರೆಹಳ್ಳಿ ಸಮೀಪದಿಂದ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ.

ಅಂದಹಾಗೆ ಈ ಬಾರಿಯ ಪರಿಷೆಯಲ್ಲಿ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದಗೌಡ, ಶಾಸಕ ಅಶೋಕ್ ಖೇಣಿ, ಸಂಸದೆ ಶೋಭಾ ಕರಂದ್ಲಾಜೆ, ನಟ,ನಿರ್ದೇಶಕ ವಿ.ರವಿಚಂದ್ರನ್, ನಟ ಶ್ರೀನಗರ ಕಿಟ್ಟಿ ಪಾಲ್ಗೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+