ಏ.18ರಿಂದ ಜೆಟ್ ಏರ್‌ವೇಸ್‌ನ ಎಲ್ಲಾ ವಿಮಾನಗಳ ಹಾರಾಟ ತಾತ್ಕಾಲಿಕ ಸ್ಥಗಿತ?
ಮುಂಬೈ, ಏ.16: ಆರ್ಥಿಕವಾಗಿ ನಷ್ಟ ಅನುಭವಿಸುತ್ತಿರುವ ಜೆಟ್ ಏರ್‌ವೇಸ್ ತನ್ನ ಎಲ್ಲಾ ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜೆಟ್ ಏರ್ ವೇಸ್ 8 ಸಾವಿರ ಕೋಟಿ ರೂ ಸಾಲ ಹೊಂದಿದೆ. ಇದೀಗ 10ಕ್ಕೂ ಕಡಿಮೆ ವಿಮಾನಗಳ ಹಾರಾಟ ನಡೆಸುತ್ತಿದೆ.
ಸಾಲ ಮರುಪಾವತಿ ಮಾಡಲು ಯೋಜನೆ ರೂಪಿಸಬೇಕಿದೆ. ಏ.18ರಿಂದ ಜೆಟ್ ಏರ್‌ವೇಸ್‌ನ ಎಲ್ಲಾ ವಿಮಾನಗಳ ಹಾರಾಟ ಸ್ಥಗಿತಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸುಮಾರು 16 ಸಾವಿರಕ್ಕೂ ಹೆಚ್ಚು ನೌಕರರ ಭವಿಷ್ಯ ಅತಂತ್ರವಾಗಿದೆ.

ಈ ನೌಕರರ ಗೋಳು ಹೇಳತೀರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲ ಸಿಬ್ಬಂದಿಗೆ ಇಎಂಐ ಚಿಂತೆಯಾದರೆ ಇನ್ನೂ ಕೆಲವರಿಗೆ ಮಕ್ಕಳ ಭವಿಷ್ಯದ ಚಿಂತೆ ಕಾಡಿದೆ ಮಕ್ಕಳ ಶಾಲಾ ಶುಲ್ಕವನ್ನು ಭರಿಸುವುದು ಕಷ್ಟವಾಗಿದೆ.
ಜೆಟ್ ಏರ್‌ವೇಸ್ ಸಿಬ್ಬಂದಿಗಳ ಕುಟುಂಬ ಬೀದಿಗೆ ಬರುವ ಹಂತದಲ್ಲಿದೆ. ಯಾವುದೇ ಬೇಡಿಕೆಗಳನ್ನು ಪೂರೈಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ, ಕಳೆದ ಮೂರ್ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಕೆಲಸ ಮಾಡುತ್ತಿದ್ದಾರೆ.
ತಕ್ಷಣಕ್ಕೆ ಬೇರೆ ಕಡೆಗೆ ಕೆಲಸವೂ ಸಿಗುವುದಿಲ್ಲ ಏನು ಮಾಡಬೇಕು ಎನ್ನುವುದು ಅವರ ಪ್ರಶ್ನೆಯಾಗಿದೆ.












Click it and Unblock the Notifications