ದೆಹಲಿಯಲ್ಲಿ ಅನರ್ಹ ಶಾಸಕರ ಜೊತೆ ಇರುವ ಜೆಡಿಎಸ್ ಎಂಎಲ್‌ಸಿ ಪುಟ್ಟಣ್ಣ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 22: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಅಮಿತ್ ಶಾ ಜೊತೆ ಶುಕ್ರವಾರ (ಆಗಸ್ಟ್ 23)ರಂದು ಮಾತುಕತೆ ನಡೆಸುವುದಾಗಿ ಜೆಡಿಎಸ್ ಎಂಎಲ್‌ಸಿ ಸಿ ಪುಟ್ಟಣ್ಣ ತಿಳಿಸಿದ್ದಾರೆ.
ಅನರ್ಹ ಶಾಸಕರಿಗೆ ಸಾಕಷ್ಟು ಗೊಂದಲಗಳಿವೆ ಅದನ್ನು ಬಗೆಹರಿಸಲೇಬೇಕು. ಯಾಕೆಂದರೆ ಚುನಾವಣೆಯಲ್ಲಿ ಗೆದ್ದಿರುವವರನ್ನು ಬಿಟ್ಟು ಸೋತಿರುವವರಿಗೆ ಸಚಿವ ಸ್ಥಾನವನ್ನು ನೀಡಿದ್ದಾರೆ. ಸರ್ಕಾರ ರಚನೆಗಿಂತ ಮೊದಲು ಹೇಳಿದ್ದೇ ಬೇರೆ ಈಗ ಆಗುತ್ತಿರುವುದೇ ಬೇರೆ ಎಂದು ಬೇಸರ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಮೇಲೆ ನಂಬಿಕೆ ಇದೆ, ಬಿಜೆಪಿ ಜೊತೆಗೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನೂ ಕೂಡ ಕರೆದುಕೊಂಡು ಕರೆದುಕೊಂಡು ಹೋಗಬೇಕು ಎನ್ನುವುದು ನಮ್ಮ ಮನವಿ. ಮಹೇಶ್ ಕುಮಟಳ್ಳಿ ಎದುರು ಸೋತವರಿಗೆ ಸಚಿವ ಸ್ಥಾನ ನೀಡಿದರೆ ಅವರಿಗೆ ಬೇಸರವಾಗುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಜೀನಾಮೆ ವೇಳೆ ನಮ್ಮ ಜೊತೆ ಮಾತುಕತೆ ನಡೆಸಿದವರೇ ಬೇರೆ, ಈಗ ನಾವೇ ಮಾಡಿಸಿದ್ದು ಎಂದು ಓಡಾಡುತ್ತಿರುವವರೇ ಬೇರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.











Click it and Unblock the Notifications