ದೇವೇಗೌಡರ ನೇತೃತ್ವದಲ್ಲಿ ಜುಲೈ 3ಕ್ಕೆ ಅಲ್ಪಸಂಖ್ಯಾತರ ಸಭೆ
ಬೆಂಗಳೂರು, ಜುಲೈ 02: ಇಬ್ಬರು ಶಾಸಕರು ರಾಜೀನಾಮೆ, ಕೆಲವು ಶಾಸಕರ ಮೈತ್ರಿ ವಿರೋಧಿ ಹೇಳಿಕೆಗಳಿಂದ ಒಂದೆಡೆ ಸರ್ಕಾರ ಪತನಗೊಳ್ಳುವ ಆತಂಕ ಇದ್ದರೆ, ಮತ್ತೊಂದೆಡೆ ದೇವೇಗೌಡ ಅವರು ಇದಾವುದಕ್ಕೂ ತಲೆ ಕೆಡೆಸಿಕೊಳ್ಳದೆ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ.
ದೇವೇಗೌಡ ಅವರ ನೇತೃತ್ವದಲ್ಲಿ ನಾಳೆ ಅಲ್ಪಸಂಖ್ಯಾತರ ಸಭೆ ನಡೆಸುತ್ತಿದ್ದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆ ದೃಷ್ಟಿಯಿಂದ ಈ ಸಭೆಯನ್ನು ನಡೆಸಲಾಗುತ್ತಿದೆ.
ಲೋಕಸಭೆ ಚುನಾವಣೆ ಫಲಿತಾಂಶ ಬಂದಂದಿನಿಂದಲೂ ದೇವೇಗೌಡ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆಯ ಗುರಿಯೊಂದನ್ನು ಮಾತ್ರವೇ ದೇವೇಗೌಡ ಅವರು ಇರಿಸಿಕೊಂಡಿದ್ದಾರೆ.

ಸತತ ಸಭೆಗಳನ್ನು ನಡೆಸುತ್ತಿರುವ ದೇವೇಗೌಡ ಅವರು, ನಿನ್ನೆಯಷ್ಟೆ ಜೆಡಿಎಸ್‌ನ ಎಲ್ಲ ಶಾಸಕರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ ಎನ್ನಲಾಗಿದೆ.
ಈ ಸಭೆಗೂ ಮುನ್ನಾ ಸೋತವರ ಸಭೆಯನ್ನು ದೇವೇಗೌಡ ಅವರು ಮಾಡಿದ್ದರು. ಅದರ ನಂತರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳ ಸಭೆಯನ್ನು ಮಾಡಿದ್ದರು.












Click it and Unblock the Notifications