ಬೆಂಗಳೂರು ರಸ್ತೆಗೆ ಇಳಿಯಲಿವೆ 90 ಎಲೆಕ್ಟ್ರಿಕ್ ಬಸ್‌

ಬೆಂಗಳೂರು, ನವೆಂಬರ್ 26: ಬಿಎಂಟಿಸಿ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಸಂಚಾರಕ್ಕೆ ಸಂತಸ ವ್ಯಕ್ತಪಡಿಸಿದೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಕಂಪನಿಯ ಬಸ್ ನಗರದ ರಸ್ತೆಯಲ್ಲಿ ಪಾಯೋಗಿಕ ಸಂಚಾರವನ್ನು ಪೂರ್ಣಗೊಳಿಸಿದೆ.

ಈಗ ಬಿಎಂಟಿಸಿ ಮತ್ತೊಂದು ಕಂಪನಿಯ ಬಸ್‌ನ ಪ್ರಾಯೋಗಿಕ ಸಂಚಾರಕ್ಕೆ ಎದುರು ನೋಡುತ್ತಿದೆ. ಜೆಬಿಎಂ ಗ್ರೂಪ್ 90 ಎಲೆಕ್ಟ್ರಿಕ್ ಬಸ್‌ಗಳನ್ನು ಬಿಎಂಟಿಸಿಗೆ ನೀಡಲು ಬಿಡ್ ಮಾಡಿದೆ. ಬಿಡ್ ಮಾಡಿದ ಕಂಪನಿಗಳಲ್ಲಿಯೇ ಕಡಿಮೆ ದರ ಹೇಳಿರುವುದು ಜೆಬಿಎಂ ಗ್ರೂಪ್.

ಜೆಬಿಎಂ ಗ್ರೂಪ್‌ನ ಬಸ್‌ಗಳು ಒಮ್ಮೆ ಬ್ಯಾಟರಿ ಚಾರ್ಜ್ ಮಾಡಿದರೆ 120 ಕಿ. ಮೀ. ತನಕ ಬಸ್‌ಗಳು ಸಂಚಾರ ನಡೆಸಲಿವೆ. ಗಂಟೆಗೆ 80 ಕಿ. ಮೀ. ವೇಗದಲ್ಲಿ ಬಸ್‌ಗಳು ಸಾಗಲಿವೆ.

JBM Group To Supply 90 Electric Buses To BMTC

ಈ ತಿಂಗಳ ಆರಂಭದಲ್ಲಿ ತೆರೆಯಲಾದ ಬಿಡ್‌ನಲ್ಲಿ ಜೆಬಿಎಂ ಗ್ರೂಪ್ ಪಾಲ್ಗೊಂಡಿತ್ತು. 90 ಬಸ್‌ಗಳ ನಿರ್ವಹಣೆ, ಓಡಿಸಲು ಕಡಿಮೆ ಮೊತ್ತವನ್ನು ಗ್ರೂಪ್ ಬಿಡ್ ಮಾಡಿದೆ. ಡಿಸೆಂಬರ್‌ನಲ್ಲಿ ನಡೆಯುವ ಬಿಎಂಟಿಸಿ ಸಭೆಯಲ್ಲಿ ಬಸ್ ಸಂಚಾರದ ಬಗ್ಗೆ ಅಂತಿಮ ತೀರ್ಮಾನವಾದಲಿದೆ.

ಬೆಂಗಳೂರು ಸ್ಮಾರ್ಟ್‌ ಸಿಟಿ ಯೋಜನೆ ಅನುದಾನದಲ್ಲಿ90 ಬಸ್‌ಗಳನ್ನು ಖರೀದಿ ಮಾಡಲಾಗುತ್ತದೆ. ಮೆಟ್ರೋ ಸಂಚಾರ ನಡೆಸುವ ಮಾರ್ಗದಲ್ಲಿ ಬಸ್‌ಗಳನ್ನು ಓಡಿಸಲು ತೀರ್ಮಾನಿಸಲಾಗಿದೆ.

ಜೆಬಿಎಂ ಗ್ರೂಪ್‌ಗಳ ಬಸ್‌ಗಳು 9 ಮೀಟರ್ ಇದ್ದು, ಮಿನಿ ಬಸ್ ಮಾದರಿಯಲ್ಲಿ ಇರುತ್ತದೆ. 31 ಜನರು ಇದರಲ್ಲಿ ಪ್ರಯಾಣಿಸಬಹುದಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ 6 ತಿಂಗಳಿನಲ್ಲಿ ಬಸ್‌ಗಳು ಬೆಂಗಳೂರು ರಸ್ತೆಯಲ್ಲಿರುತ್ತದೆ.

ಟೆಂಡರ್ ಆಹ್ವಾನ ನೀಡುವಾಗ ಬಿಎಂಟಿಸಿ ಸಂಸ್ಥೆಯೇ ಬಸ್‌ಗಳ ನಿರ್ವಹಣೆ ನೋಡಿಕೊಳ್ಳಬೇಕು, ಚಾಲಕನನ್ನ ಒದಗಿಸಬೇಕು ಎಂಬ ಷರತ್ತು ಹಾಕಿದೆ. ಪ್ರತಿ ದಿನ 200 ಕಿ. ಮೀ. ಬಸ್ ಸಂಚಾರ ನಡೆಸಲು ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+