ಎಸ್ಸೆಂ ಕೃಷ್ಣರನ್ನು ಲೇವಡಿ ಮಾಡಿದ ಇಬ್ರಾಹಿಂಗೆ ಜಗ್ಗೇಶ್ ತಿರುಗೇಟು
ನಂಜನಗೂಡಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 4ರಂದು ಆಗಮಿಸಿದ್ದ ಇಬ್ರಾಹಿಂ, ಹುಲ್ಲಹಳ್ಳಿಯಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಎಸ್.ಎಂ. ಕೃಷ್ಣ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದನ್ನು ಟೀಕಿಸಿದ್ದರು.
ಬೆಂಗಳೂರು, ಏಪ್ರಿಲ್ 4: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಟೀಕಿಸಿದ ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರಿಗೆ ಬಿಜೆಪಿ ನಾಯಕ ಹಾಗೂ ಚಿತ್ರ ನಟ ಜಗ್ಗೇಶ್ ತಿರುಗೇಟು ನೀಡಿದ್ದಾರೆ.
ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಳ್ಳುವ ಅವರು, ಇಬ್ರಾಹಿಂ ಅವರನ್ನು ಉದ್ದೇಶಿಸಿ, ''ವೈಯಕ್ತಿಕ ನಿರ್ಧಾರಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಡ! ದೇವೇಗೌಡರ ಹೊಗಳಿ ಮಂತ್ರಿಯಾಗಿದ್ದವರು ಈಗ ಮುಖ್ಯಂತ್ರಿ ಸಿದ್ದರಾಮಯ್ಯ ಅವರಿಗೆ ಜಾಲರ ಹಾಕಿದ್ದೀರಿ. ಇನ್ನೊಬ್ಬರನ್ನು ಟೀಕಿಸಬೇಡಿ'' ಎಂದು ಹೇಳಿದ್ದಾರೆ.[84ರ ಪ್ರಾಯದಲ್ಲಿ ಮದುವೆ ಆಗೋಕೆ ಸಾಧ್ಯವೇ: ಕೃಷ್ಣಗೆ ಇಬ್ರಾಹಿಂ ಲೇವಡಿ]

ನಂಜನಗೂಡಿನಲ್ಲಿ ಚುನಾವಣಾ ಪ್ರಚಾರಕ್ಕಾಗಿ ಏಪ್ರಿಲ್ 4ರಂದು ಆಗಮಿಸಿದ್ದ ಇಬ್ರಾಹಿಂ, ಹುಲ್ಲಹಳ್ಳಿಯಲ್ಲಿ ನಡೆಯುತ್ತಿದ್ದ ಬಹಿರಂಗ ಸಭೆಯಲ್ಲಿ ಮಾತನಾಡುತ್ತಾ ಎಸ್.ಎಂ. ಕೃಷ್ಣ ಅವರು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದನ್ನು ಟೀಕಿಸಿದ್ದರು. ''84ರ ವಯಸ್ಸಿನ ಹಿರಿಯರು ಕಿರಿಯರಿಗೆ ಮದುವೆ ಮಾಡಬೇಕು. ಅದನ್ನು ಬಿಟ್ಟು ತಾವೇ ಮದುವೆ ಆಗ್ತೀನಿ ಅಂತ ಹೊರಡೋದು ಸರಿಯಲ್ಲ'' ಎಂದು ಲೇವಡಿ ಮಾಡಿದ್ದರು.
ವೈಯಕ್ತಿಕನಿರ್ದಾರಕ್ಕೆ ಯಾವದೊಣ್ಣೆನಾಯಕನ ಅಪ್ಪಣೆ ಬೇಡ!ದೇವೆಗೌಡರಹೋಗಳಿ ಮಂತ್ರಿಯಾಗಿ! ಸಿದ್ದರಾಮಣ್ಣಂಗೆ ಜಾಲರಹಾಕೋ ನೀವು!ಇನ್ನೊಬ್ಬರ ಟೀಕೆಬೇಡ #bjpkarnataka #BSYBJP https://t.co/Qw9NIyaKzQ
— ನವರಸನಾಯಕ ಜಗ್ಗೇಶ್ (@Jaggesh2) April 4, 2017












Click it and Unblock the Notifications