ಸ್ಯಾಂಡಲ್ ವುಡ್ ಐಟಿ ಶಾಕ್: ಇಂದೂ ಮುಂದುವರಿದ ಕಾರ್ಯಾಚರಣೆ!
ಬೆಂಗಳೂರು, ಜನವರಿ 04: ಕನ್ನಡ ಚಿತ್ರರಂಗದ ಹೆಸರಾಂತ ನಟರ ಮನೆ ಮೇಲೆ ಗುರುವಾರ ನಡೆದ ಆದಾಯ ತೆರಿಗೆ ಅಧಿಕಾರಿಗಳ ದಾಳಿ ಪ್ರಕರಣ ಇನ್ನೂ ತಣ್ಣಗಾಗಿಲ್ಲ. ಐಟಿ ಅಧಿಕಾರಿಗಳು ಶುಕ್ರವಾರ ಸಹ ತಮ್ಮ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಮನೆಯಲ್ಲಿರುವವರು ನಿನ್ನೆಯಿಂದ ಗೃಹಬಂಧನ ಅನುಭವಿಸಬೇಕಾದ ಸ್ಥಿತಿ ತಲೆದೂರಿದೆ.
ಗುರುವಾರ ಬೆಳಿಗ್ಗೆಯೇ ನಟ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್, ಸುದೀಪ್, ನಟ ಯಶ್, ರಾಧಿಕಾ ಪಂಡಿತ್, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ವಿಜಯ್ ಕಿರಗಂದೂರ್, ಸಿ.ಆರ್.ಮನೋಹರ್, ಜಯಣ್ಣ ಅವರುಗಳ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಬುಧವಾರವೇ ಕೋರ್ಟ್ ನಿಂದ ವಾರಂಟ್ ಪಡೆದಿದ್ದ ಐಟಿ ಅಧಿಕಾರಿಗಳು 200 ಐಟಿ ಅಧಿಕಾರಿಗಳ 30 ತಂಡಗಳನ್ನು ರಚಿಸಿಕೊಂಡು ಕನ್ನಡ ಚಿತ್ರರಂಗವನ್ನೇ ಗುರಿ ಮಾಡಿಕೊಂಡು ಗುರುವಾರ ದಾಳಿ ನಡೆಸಿತ್ತು.

ಪುನೀತ್ ರಾಜ್‌ಕುಮಾರ್ ಅವರ ಸದಾಶಿವನಗರ ಮನೆ, ಮಾನ್ಯತಾ ಟೆಕ್ ಪಾರ್ಕ್‌ನ ಶಿವರಾಜ್ ಕುಮಾರ್ ಮನೆ, ಜೆ.ಇ.ನಗರದ ಸುದೀಪ್ ಮನೆ, ಕತ್ರಿಗುಪ್ಪೆಯ ಯಶ್ ಮನೆ ಅವರ ಪತ್ನಿ ರಾಧಿಕ ಪಂಡಿತ್ ಮನೆ ಮೇಲೆ ದಾಳಿ ನಡೆಸಲಾಗಿತ್ತು.












Click it and Unblock the Notifications