'ಐಟಿ ಕಂಪನಿಗಳು ಬೆಂಗಳೂರಿಗೆ ಮಾಡಿದ್ದೇನೂ ಇಲ್ಲ'

ಬೆಂಗಳೂರು, ನ.12: 'ಮಾಹಿತಿ ತಂತ್ರಜ್ಞಾನ ಕಂಪನಿಗಳು ಬೆಂಗಳೂರಿಗೆ ವಿಶ್ವ ಭೂಪಟದಲ್ಲಿ ಸ್ಥಾನ ಕಲ್ಪಿಸಿರಬಹುದು. ಆದರೆ ಅದರಿಂದ ಬೆಂಗಳೂರಿಗೆ ಅಂತ ಅಂಥಾ ಪ್ರಯೋಜನವೇನೂ ಆಗಿಲ್ಲ. ಹೇಳಬೇಕು ಅಂದರೆ ಐಟಿ ಕಂಪನಿಗಳು ಬೆಂಗಳೂರಿಗೆ ಹೆಚ್ಚಿನದೇನೂ ಮಾಡಿಲ್ಲ' ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಹೇಳಿದ್ದಾರೆ.

information technology (IT) ಕಂಪನಿಗಳು ಬೆಂಗಳೂರು ಅಭಿವೃದ್ಧಿಗೆ ಮಾಡಿದ್ದೇನೂ ಇಲ್ಲ. ಆದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಎಲ್ಲ ಮೂಲಸೌಕರ್ಯವನ್ನೂ ಒದಗಿಸುತ್ತಿದೆ. ಆದರೆ (ಐಟಿ ಕಂಪನಿಗಳು) ಅವು ನಮಗೆ (ಬೆಂಗಳೂರಿಗೆ) ನೀಡಿದ್ದೇನೂ ಇಲ್ಲ' ಎಂದು ಬಿಎಸ್ ಸತ್ಯನಾರಾಯಣ ತಮ್ಮ ಮನದಾಳದ ನೋವನ್ನು ಹೊರಹಾಕಿದ್ದಾರೆ.

ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (KASSIA) ಮಂಗಳವಾರ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೇಯರ್ ಸತ್ಯ ಮಾತು ಹೇಳಿದ್ದಾರೆ. IT ಕಂಪನಿಗಳು ಮತ್ತು ಬೆಂಗಳೂರು ಅಭಿವೃದ್ಧಿ ಬಗ್ಗೆ ರಾಜಧಾನಿಯ ಮಹಾಪೌರರು ಇನ್ನೂ ಅನೇಕ ಸತ್ಯಗಳನ್ನು ಹೇಳಿದ್ದಾರೆ... ಮುಂದೆ ಓದಿ.

ಮೇಯರ್ ಕಟ್ಟೆ ಸತ್ಯನಾರಾಯಣ ವಿಷಾದ

ಮೇಯರ್ ಕಟ್ಟೆ ಸತ್ಯನಾರಾಯಣ ವಿಷಾದ

ಇದುವರೆಗೂ ಯಾರೂ ನೀಡದ ಕೊಡುಗೆಯನ್ನು ಅವರು ನೀಡಬಹುದಿತ್ತು. ಆದರೆ ಯಾರೂ ಮುಂದೆಬರುತ್ತಿಲ್ಲ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ವಿಷಾದಿಸಿದರು. ಫ್ಲೈ ಓವರ್, ಪಾದಚಾರಿ ರಸ್ತೆ, ಸ್ಕೈವಾಕ್ ಇವೇ ಮುಂತಾದ ಸಣ್ಣಪುಟ್ಟ ಯೋಜನೆಗಳನ್ನು ಐಟಿ ಕಂಪನಿಗಳು ಮನಸ್ಸು ಮಾಡಿದರೆ ಮಾಡಬಹುದು. ಆದರೆ ಎಂದು ಮೇಯರ್ ಕಟ್ಟೆ ಸತ್ಯನಾರಾಯಣ ಪೆಚ್ಚುಮೋರೆ ಹಾಕಿಕೊಂಡರು.

ಪಾರ್ಕು, ಶಾಲೆ ಆಟದ ಮೈದಾನಗಳ ಪಾಲನೆ

ಪಾರ್ಕು, ಶಾಲೆ ಆಟದ ಮೈದಾನಗಳ ಪಾಲನೆ

ನಾಗರಿಕ ಸೌಲಭ್ಯಗಳಾದ ಪಾರ್ಕುಗಳ ಪಾಲನೆ, ಶಾಲೆಗಳ ಪೋಷಣೆ ಮತ್ತು ಆಟದ ಮೈದಾನಗಳ ಪಾಲನೆ ಮಾಡುವಂತೆ ಕೋರಿ ಬಯೋಟೆಕ್ನಾಲಜಿ ಕಂಪನಿಗಳೂ ಸೇರಿದಂತೆ ಸುಮಾರು 250 ಐಟಿ ಕಂಪನಿಗಳು, ದೊಡ್ಡ ದೊಡ್ಡ ಹೋಟೆಲುಗಳು ದೊಡ್ಡ ದೊಡ್ಡ ಕಾಲೇಜುಗಳ ಆಡಳಿತ ಮಂಡಳಿಯನ್ನು ಸದ್ಯದಲ್ಲೇ ಸಂಪರ್ಕಿಸುವೆ ಎಂದು ಸತ್ಯ ಹೇಳಿದರು.

ಇನ್ನು NGOಗಳಿಗೆ ಮಣೆ ಹಾಕುವುದಿಲ್ಲ

ಇನ್ನು NGOಗಳಿಗೆ ಮಣೆ ಹಾಕುವುದಿಲ್ಲ

Infosys Foundation ಮೂಲಕ Bangalore Agenda Task Force ತಲೆಯೆತ್ತಿತು. ಆದರೆ ಅದು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಈ ಬಾರಿ NGOಗಳಿಗೆ ಮಣೆ ಹಾಕುವುದಿಲ್ಲ. ಅಧಿಕೃತವಾಗಿ ಸರಕಾರವೇ ಐಟಿ ಕಂಪನಿಗಳ ಸಾಮಾಜಿಕ ಯೋಜನೆಗಳ ಉಸ್ತುವಾರಿ ನೋಡಿಕೊಳ್ಳಲಿದೆ. ನವೆಂಬರ್ ಅಂತ್ಯಕ್ಕೆ ಇಂತಹ ಬೃಹತ್ ಯೋಜನೆಗಳಿಗೆ ಮುಂದಾಗುವುದಾಗಿ ಕಟ್ಟೆ ಸತ್ಯ ತಿಳಿಸಿದರು.

Over to Bangalore IT companies

Over to Bangalore IT companies

ನೋಡಿ BBMPಗೆ ಇರುವ ಆದಾಯ ಮೂಲ ತೆರಿಗೆ ಸಂಗ್ರಹವೊಂದೇ. ಆದರೆ ಬೃಹತ್ ಆಸ್ತಿ ತೆರಿಗೆಯ ಜಾಗಗಳಾದ ರಾಜರಾಜೇಶ್ವರಿ ನಗರ, ಮಹದೇಪುರ ಮತ್ತು ಬೊಮ್ಮನಹಳ್ಳಿ ವಲಯಗಳು ನಮ್ಮ ವ್ಯಾಪ್ತಿಯಿಂದ ಹೊರಗಿವೆ. ಇಲ್ಲಿಂದಲೇ ಕನಿಷ್ಠ 1,000 ಕೋಟಿ ರೂ. ತೆರಿಗೆ ಸಂಗ್ರಹಿಸಬಹುದಾಗಿದೆ' ಎಂದು ಕಟ್ಟೆ ಸತ್ಯ ವ್ಯಥೆ ಪಟ್ಟರು. Over to Bangalore IT companies...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+