ಸಚಿನ್‌ಗೆ ಯೋಗ ಕಲಿಸಿದ ಬೆಂಗಳೂರಿನ ಡಾ. ಓಂಕಾರ್ ಸಂದರ್ಶನ
ಇಡೀ ವಿಶ್ವಕ್ಕೆ ಅಂತಾರಾಷ್ಟ್ರೀಯ ಯೋಗ ದಿನದ ಸಂಭ್ರಮ. ಈ ಸಂದರ್ಭದಲ್ಲಿ ಯೋಗ ಗುರುಗಳನ್ನು ನೆನಪು ಮಾಡಿಕೊಳ್ಳಲೇಬೇಕು. ಬೆಂಗಳೂರಿನ ಯೋಗಗುರು ಡಾ. ಎಸ್ ಎನ್ ಓಂಕಾರ್ ಅವರನ್ನು ಒನ್ ಇಂಡಿಯಾ ಯೋಗ ದಿನದ ಸಂದರ್ಭ ಸಂದರ್ಶನ ಮಾಡಿದೆ.
ಒಂಕಾರ್ ಸದ್ಯ ಇಂಡಿಯನ್ ಇನ್ ಸ್ಟಿಟ್ಯೂಟ್ ನ ಏರೋಸ್ಪೇಸ್ ವಿಭಾಗದಲ್ಲಿ ಮುಖ್ಯ ಇಂಜಿನಿಯ್ ಆಗಿ ಕೆಲಸ ಮಾಡುತ್ತಿದ್ದಾರೆ. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ , ಗೋಡೆ ರಾಹುಲ್ ದ್ರಾವಿಡ್, ಪಿಟಿ ಉಷಾ ಸೇರಿದಂತೆ ಅನೇಕ ಕ್ರೀಡಾಪಟುಗಳ ಯೋಗ ಗುರುವಾಗಿಯೂ ಓಂಕಾರ್ ಸಾಧನೆ ಮಾಡಿದ್ದಾರೆ. ಓಂಕಾರ್ ಅವರು ಯೋಗ ಬಗ್ಗೆ ಇಟ್ಟುಕೊಂಡ ಪರಿಕಲ್ಪನೆಯನ್ನು ಅವರ ಮಾತುಗಳಲ್ಲೇ ಕೇಳಿ...[ಇಚ್ಛಾಶಕ್ತಿ ಪ್ರಚೋದಿಸಲು ಶಾಸ್ತ್ರಬದ್ಧ ಯೋಗಾಸನ, ಪ್ರಾಣಾಯಾಮ]

'ಕಳೆದ ನಾಲ್ಕು ದಶಕಗಳಿಂದ ಯೋಗ ಸಾಧನೆಯಲ್ಲಿ ತೊಡಗಿದ್ದೇನೆ. ಅನೇಕರಿಗೆ ಮಾರ್ಗದರ್ಶನ ಮಾಡಿದ್ದೇನೆ. ಯೋಗ ಇಂದಿನಷ್ಟು ಪ್ರಖ್ಯಾತವಿರದ ಕಾಲದಲ್ಲಿ ನಾನು ಯೋಗದ ಮಹತ್ವ ಅರಿತು ಅದರೆಡೆಗೆ ಆಕರ್ಷಿತನಾಗಿದ್ದೆ.
ನಾನು ಯೋಗದ ಆಸನ, ಪ್ರಾಣಾಯಾಮ ಮತ್ತು ಪತಂಜಲಿ ಯೋಗ ಸೂತ್ರವನ್ನು ಜನರಿಗೆ ಹೇಳಿಕೊಡುತ್ತಿದ್ದೇನೆ. ಯೋಗ ವಿಜ್ಞಾನವಲ್ಲ, ಯೋಗ ವಿಜ್ಞಾನವನ್ನು ಮೀರಿದ್ದು. ನಾನು ಮೂಲತಃ ವಿಜ್ಞಾನದ ವ್ಯಕ್ತಿಯಾಗಿದ್ದರಿಂದ ಯೋಗವನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮಾಡಲು ಸಾಧ್ಯವಾಯಿತು.[ಯಾವ ರೋಗಗಳಿಗೆ ಯಾವ ಯೋಗಾಸನ ಉಪಯುಕ್ತ]
"ಓಂ" ಶಬ್ದದ ಆಳವನ್ನು ಅರಿತರೆ ಅದರ ಮಹತ್ವ ನಮಗೆ ತನ್ನಿಂದ ತಾನೇ ಗೊತ್ತಾಗುತ್ತದೆ. ಸೂರ್ಯ ನಮಸ್ಕಾರ ಅಥವಾ ಇನ್ನಿತರ ವೇಳೆಯಲ್ಲಿ 'ಓಂ' ಬಳಕೆಯನ್ನು ಸೀಮಿತ ಮಾಡುವುದು ಸರಿಯಲ್ಲ. ನಮ್ಮ ದೇಹ ಮತ್ತು ಮನಸ್ಸನ್ನು ಶುದ್ಧ ಮಾಡಲು ಕಾರಣವಾಗುವ ಶಬ್ದಕ್ಕೆ ಬೇರೆಯ ಬಣ್ಣ ಹಚ್ಚುವುದು ಸರಿ ಕಾಣುವುದಿಲ್ಲ.[ಸ್ಮಾರ್ಟ್ ಫೋನ್‌ನ ಬಳಕೆದಾರರಿಗಾಗಿ 'ಸ್ಮಾರ್ಟ್' ಯೋಗ!]

ನಾನು ಬ್ರೀಜೇಶ್ ಪಟೇಲ್ ಅಕಾಡೆಮಿಗೆ ಯೋಗ ಕೋಚ್ ಆಗಿ ನೇಮಕವಾದೆ. ಅದಾದ ಮೇಲೆ ಕರ್ನಾಟಕ ಕ್ರಿಕೆಟ್ ಮಂಡಳಿ ನನ್ನನ್ನು ಯೋಗ ಕೋಚ್ ಎಂದು ನೇಮಕ ಮಾಡಿಕೊಂಡಿತು. ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ರ ಸಂಪರ್ಕ ಸಿಕ್ಕಿದ್ದು ಇದೆ ವೇಳೆ.
1997-98, 1998-99 ರ ವೇಳೆ ಕರ್ನಾಟಕ ರಣಜಿ ತಂಡ ನಿರಂತರವಾಗಿ ಯೋಗ ಅಭ್ಯಾಸ ಮಾಡಿತು. ಪರಿನಾಮ ಎರಡು ರಣಜಿ ಟ್ರೋಫಿಗಳನ್ನು ತನ್ನದಾಗಿರಿಸಿಕೊಂಡಿತು.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ಜಾನ್ ರೈಟ್ ಭಾರತದ ಕೋಚ್ ಆಗಿದ್ದಾಗ ಯೋಗವನ್ನು ಆಟಗಾರರಿಗೆ ಪರಿಚಯ ಮಾಡಿಕೊಡಲಾಯಿತು. ನಾನು ಅಂಡರ್ 16, ಅಂಡರ್ 19 ತಂಡದ ಆಟಗಾರರಿಗೂ ನಂತರ ಯೋಗ ಗುರುವಾದೆ..
ಪೂರ್ಣ ಸಂದರ್ಶನಕ್ಕೆ ಇಲ್ಲಿ ಕ್ಲಿಕ್ ಮಾಡಿ
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications