ವೀಕೆಂಡ್ ವಿತ್ ರಮೇಶ್ ನಲ್ಲಿ ಇನ್ಫೋಸಿಸ್ ನಾರಾಯಣಮೂರ್ತಿ

ಬೆಂಗಳೂರು, ಮೇ 24: "ಕೇವಲ ಫಿಲ್ಮ್ ಸ್ಟಾರ್ ಗಳು ಮಾತ್ರ ಸಾಧಕರಾ, ಬೇರೆ ಸಾಧಕರನ್ನೂ ಪರಿಚಯಿಸಿ" ಎಂಬ ವೀಕ್ಷಕರ ಸಲಹೆಗೆ ಕಿವಿಗೊಟ್ಟ ಜೀ ಕನ್ನಡ ಇನ್ಪೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅವರನ್ನು ಈ ಬಾರಿ ವೀಕೆಂಡ್ ವಿತ್ತ ರಮೇಶ್ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ.

ವಿರೇಂದ್ರ ಹೆಗಡೆಯವರು ಹುಟ್ಟಿದ ದಿನವೇ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ

ಈ ಕಾರ್ಯಕ್ರಮ ಜೂನ್ 1 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಈ ಬಗ್ಗೆ ಈಗಾಗಲೇ ಜೀ ಕನ್ನಡ ತನ್ನ ಫೇಸ್ ಬುಕ್ ಪುಟದಲ್ಲಿ ಲೈವ್ ಮಾಡಿ ಮಾಹಿತಿ ನೀಡಿದೆ.

Infosys founder Narayana Murthy will be guest in Week end with Ramesh

ಕನ್ನಡದ ನೆಲದಲ್ಲಿ ಉದ್ಯಮಿಗಳಿಲ್ಲ, ಕನ್ನಡಿಗರೇ ಸ್ಥಾಪಿಸಿದ ಕಂಪನಿಗಳಿಲ್ಲ ಎಂಬ ಕೊರತೆಯನ್ನು ನೀಗಿಸಿದ ನಾರಾಯಣಮೂರ್ತಿ ಅವರು ಇನ್ಫೋಸಿಸ್ ಕಟ್ಟುವಾಗಿನ ನೆನಪುಗಳನ್ನು ವೀಕ್ಷಕರೊಂದಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ಪತ್ನಿ ಸುಧಾ ಮೂರ್ತಿ ಅವರೊಂದಿಗಿನ ಒಡನಾಟದ ಕ್ಷಣಗಳು, ಉದ್ಯಮದಾಚೆಯ ಸಮಾಜ ಸೇವೆ ಮುಂತಾಗಿ ಎಲ್ಲ ವಿಷಯಗಳನ್ನೂ ತಮ್ಮ ಅನುಭವದ ಬುತ್ತಿಯಿಂದ ನಾರಾಯಣ ಮೂರ್ತಿ ಅವರು ವೀಕ್ಷಕರಿಗೆ ಹಂಚಲಿದ್ದಾರೆ.

ಇತ್ತೀಚೆಗಷ್ಟೇ ಧರ್ಮಸ್ಥಳ ಧರ್ಮಾಧಿಕಾರಿ ವೀಕೆಂಡ್ ವಿತ್ ರಮೇಶ್ ಅವರು ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದರು. ಕೇವಲ ಸಿನಿಮಾ ಸ್ಟಾರ್ ಗಳನ್ನಷ್ಟೇ ಪರಿಚಯಿಸುವ ಬದಲು, ನಮ್ಮ ನಾಡಲ್ಲಿ ಬೇರೆ ಬೇರೆ ರಂಗಗಳಲ್ಲಿ ಸಾಧನೆ ತೋರಿದ ಮಹನೀಯರನ್ನು ಪರಿಚಯಿಸಿ ಎಂದು ವೀಕ್ಷಕರು ಜೀ ಕನ್ನಡವನ್ನು ಒತ್ತಾಯಿಸಿದ್ದರು.

ಈ ಸೀಸನ್ ನಲ್ಲಿ ವೀರೇಂದ್ರ ಹೆಗ್ಗಡೆ, ನಟಿ ಪ್ರೇಮಾ, ವಿನಯಪ್ರಸಾದ್, ಶಶಿ ಕುಮಾರ್, ಶ್ರೀಮುರಳಿ ಮುಂತಾದವರು ಈ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+