Get Updates
Get notified of breaking news, exclusive insights, and must-see stories!

ಭಾರತದಂತೆ ಉದ್ಯೋಗಿಯು ರಜೆಗೆ ಭಿಕ್ಷೆ ಬೇಡುವ ಸಂಸ್ಕೃತಿ ಸಿಂಗಾಪುರದಲ್ಲಿ ಇಲ್ಲ..Video Viral

Singapore vs India Work Culture: ರಾಜಧಾನಿ ಬೆಂಗಳೂರು ಲಕ್ಷಾಂತರ ಉದ್ಯೋಗಿಗಳ ನೆಲೆಯಾಗಿದೆ. ದೊಡ್ಡ ದೊಡ್ಡ ಕಂಪನಿಗಳು ನೆಲೆಸಿವೆ. ಉದಯೋಗಿಗಳು ವಾರಕ್ಕೆ 70 ಗಂಟೆ ಕೆಲಸ, 90 ಗಂಟೆ ಕೆಲಸ ಮಾಡಬೇಕು ಎಂಬ ದಿಗ್ಗಜರ ಹೇಳಿಕೆಗಳ ಬೆನ್ನಲ್ಲೆ ವಿದೇಶದಲ್ಲಿ ನೌಕರರನ್ನು ನಡೆಸಿಕೊಳ್ಳುವ ಬಗೆ, ಕೆಲಸದ ಅವಧಿ, ರಜೆಗಾಗಿ ಭಿಕ್ಷೆ ಬೇಡಿಕೊಳ್ಳುವ ಪರಿಪಾಠ ಇಲ್ಲದಿರುವುದು ಸೇರಿದಂತೆ ಹಲವು ಸಂಗತಿಗಳನ್ನು ಉದ್ಯೋಗಿ ಹಂಚಿಕೊಂಡಿದ್ದಾರೆ. ಭಾರತಕ್ಕೆ ಹೋಲಿಕೆ ಮಾಡಿದ ವಿಡಿಯೋ ಇದಾಗಿದ್ದು, ಆನ್‌ಲೈನ್‌ನಲ್ಲಿ ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ.

ಸಿಂಗಾಪುರದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ವ್ಯಕ್ತಿಯೊಬ್ಬ ಎರಡು ದೇಶಗಳಲ್ಲಿನ ಕೆಲಸದ ಸಂಸ್ಕೃತಿ, ಅವಧಿ ಮುಖ್ಯವಾಗಿ ರಜೆ ಮಂಜೂರಾತಿಯ ನೀತಿಗಳ ಬಗ್ಗೆ ಇನ್ಸ್‌ಟಾಗ್ರಾಮ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಅದು ಸಾಕಷ್ಟು ವೈರಲ್ ಆಗುತ್ತಿದ್ದು, ಒಂದಷ್ಟು ವಿಷಯಗಳ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

Indian Man in Singapore Sparks Debate After Comparing Work Culture and Leave Policies video viral

ಭಾರತದಲ್ಲಿ ರಜೆಗೆ ಭಿಕ್ಷೆ ಬೇಡಬೇಕಾಗುತ್ತದೆ..!

ಅಮನ್ ಎಂಬುವವರ ವಿಡಿಯೋ ಇದಾಗಿದೆ. ತಾವು ಸಿಂಗಾಪುರಕ್ಕೆ ತೆರಳಿದ ನಂತರ ಅನುಭವಿಸಿದ ಕೆಲಸದ ವಿಚಾರದಲ್ಲಿ ಅನುಭವಿಸಿ ಮಹತ್ವದ ವ್ಯತ್ಯಾಸಗಳನ್ನು ವಿಡಿಯೋದಲ್ಲಿ ತೋರಿಸಿದ್ದಾರೆ. ಭಾರತದಲ್ಲಿ ಉದ್ಯೋಗಿಗಳು ಹೆಚ್ಚಿನ ಸಮಯ ಕೆಲಸ ಮಾಡುತ್ತಾರೆ. ಆದರೆ ಅಲ್ಲಿ ರಜೆ ಬೇಕಾದರೆ "ಭಿಕ್ಷೆ ಬೇಡಬೇಕಾಗುತ್ತದೆ. ರಜೆ ಪಡೆಯಲು ಕೌಟುಂಬಿಕ ತುರ್ತು ಪರಿಸ್ಥಿತಿಗಳ ನೆಪ ಹೇಳಿಯೇ ರಜೆ ತೆಗೆದುಕೊಳ್ಳಬೇಕಿದೆ'. ಆದರೆ ಇಲ್ಲಿ ಸಿಂಗಾಪುರದಲ್ಲಿ ನೌಕರರು ತಮ್ಮ ರಜೆಯ ಬಗ್ಗೆ ತಮ್ಮ ಉದ್ಯೋಗದಾತರಿಗೆ ತಿಳಿಸಿದರೆ ಮುಗಿಯಿತು ಎಂದು ಅವರು ಹೇಳುತ್ತಾರೆ.

6 ಗಂಟೆ ನಂತರ ಫೋನ್‌ ನಮ್ಮದು, ಬಾಸ್‌ದಲ್ಲ..!

ಸಿಂಗಾಪುರದಲ್ಲಿ ಕೆಲಸವು ಸಂಜೆ 6 ಗಂಟೆ ಮುಗಿಯಿತೆಂದರೆ ಅಷ್ಟೆ. ಅಲ್ಲಿಂದ ವೈಯಕ್ತಿಕ ಜೀವನ. ಉದ್ಯೋಗಿಯ ಫೋನ್‌ ಅದು ಅವರ ಫೋನ್ ಆಗಿರುತ್ತದೆ ಹೊರತು ಬಾಸ್‌ದು ಅಲ್ಲ. ಕೆಲಸದ ಅವಧಿ ನಂತರ ಯಾವುದೇ ಕರೆಗಳು ಬರಲ್ಲ. ಕೇವಲ ನಮ್ಮ ಜೀವನ ಮಾತ್ರವೇ ನಡೆಯುತ್ತಿದೆ. ಆದರೆ ಭಾರತದಲ್ಲಿ ತದ್ವಿರುದ್ಧ ರಾತ್ರಿ 8 ಗಂಟೆಯ ನಂತರ ಕಚೇರಿಯಲ್ಲಿ ಕುಳಿತುಕೊಳ್ಳಲಾಗುತ್ತದೆ. ಇಂತಹ ಸಂಸ್ಕೃತಿಯನ್ನು ವಿದೇಶದಲ್ಲಿ ಉದ್ಯೋಗಿಯ "ಶೋಷಣೆ" ಎಂಬಂತೆ ನೋಡುತ್ತಾರೆ. ಆರೋಗ್ಯಕರ ಕೆಲಸದ ಸಂಸ್ಕೃತಿ ಇಲ್ಲಿದೆ. ಅಷ್ಟು ಮಾತ್ರವಲ್ಲದೇ ಉದ್ಯೋಗಿಗಳು ತಮ್ಮ ರಜೆ ತಾವು ಪಡೆಯಲು ಆರೋಗ್ಯ ಇನ್ನಿತರ ಇಲ್ಲಸಲ್ಲದ ನೆಪ ಹೇಳಿ ಸಮರ್ಥನೆ ಕೊಡಬೇಕಾಗಿಲ್ಲ ಎಂದು ತಿಳಿಸಿದರು.

ಉದ್ಯೋಗ ವಿಚಾರದಲ್ಲಿ ಸಿಂಗಾಪುರದಲ್ಲಿ ನಾನು ದೊಡ್ಡ ಬದಲಾವಣೆಗೆ ಸಾಕ್ಷಿಯಾಗಿದ್ದಾನೆ. ರಜೆ ಪಡೆಯುವುದು ದುಸ್ಸಾಹಸಮಯವಾಗಿದೆ. ಹೆಚ್ಚಿನ ಸಮಯ ಕೆಲಸ ಮಾಡುವುದು. ವೈಯಕ್ತಿಕ ಜೀವನದ ಸಮಯದಲ್ಲಿ ಕಚೇರಿಯ ಕರೆಗಳು ಸೇರಿದಂತೆ ಇತರ ವಿಷಯಗಳು ವಿಷಯಕಾರಿ ಸಂಸ್ಕೃತಿಯಾಗಿದೆ. ಅಂತಹ ವಾತಾವರಣದಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ. ಸಿಂಗಪುರದಂತಹ ಸಂಸ್ಕೃತಿ ಭಾರತದಲ್ಲಿ ಏಕಿಲ್ಲ? ಎಂಬ ಪ್ರಶ್ನೆ ಸಹ ಉದ್ಭವವಾಗಿದೆ.

ರಜೆಗಾಗಿ ನೀವು ಸಹಾಯನುಭೂತಿಯ ಕಾರಣ ಹೇಳಲಾಗುತ್ತದೆ. 'ಸರ್ ದಯವಿಟ್ಟು ನಾನು X ಕಾರಣಕ್ಕಾಗಿ ರಜೆ ತೆಗೆದುಕೊಳ್ಳಬಹುದೇ?" ಎಂದು ನೀವು ಕೇಳುತ್ತೀರಿ. ಇದು ತಪ್ಪು. ಆದರೆ ನಾನು "ಸೋಮವಾರದಿಂದ ಬುಧವಾರದವರೆಗೆ OOO ಆಗಿರುತ್ತೇನೆ." ಎಂದು ವೃತ್ತಿಪರರ ರೀತಿಯಲ್ಲಿ ಮೇಲ್ ಹಾಕಿದರೆ, ಯಾವೊಂದು ಮೇಲ್ ಬರುವುದಿಲ್ಲ ಎಂದಿದ್ದಾರೆ. ಇದನ್ನೆ ಅವರು ವಿಡಿಯೋ ಶಿರ್ಷಿಕೆ ಸಹ ಹಾಕಿ ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿದ ನೆಟ್ಟಿಗರು ಹೇಳಿದ್ದೇನು?

ವಿಡಿಯೋ ನೋಡಿದ ನೆಟ್ಟಿಗರು, ವಿದೇಶದಲ್ಲಿ ಉದ್ಯೋಗಿಯ ಕೆಲಸಗಳು 'ಹೆಚ್ಚಿನ ನಂಬಿಕೆ" ಮಾದರಿಯಲ್ಲಿ ಆಗುತ್ತವೆ. ಆದರೆ ಭಾರತದಲ್ಲಿ ಕೆಲಸದ ಸ್ಥಳಗಳಲ್ಲಿ ಉದ್ಯೋಗಿಯ ನಿರಂತರ ಲಭ್ಯತೆ ಮೇಲೆ ಹೆಚ್ಚಾಗಿ ಕೇಂದ್ರೀಕರಿಸುತ್ತವೆ ಎಂದು ಒಬ್ಬರು ಹೇಳಿದ್ದಾರೆ. 'ನಾನು ಭಾರತೀಯನಾಗಿ ಇಲ್ಲಿನ ವಿಷಕಾರಿ ಕೆಲಸದ ಸಂಸ್ಕೃತಿಯೊಂದಿಗೆ ಸಂಪೂರ್ಣವಾಗಿ ಸಂಬಂಧ ಹೊಂದಿದ್ದೇನೆ' ಎಂದು ಮತ್ತೊಬ್ಬರು ಕಾಮೆಂಟ್ ಹಾಕಿದ್ದಾರೆ. ವಿದೇಶಿ ಕೆಲಸದ ಸಂಸ್ಕೃತಿ ಹೆಚ್ಚು ಹಿತವೆನಿಸುತ್ತದೆ ಎಂದು ಮೂರನೇಯವರು ಹೇಳಿದ್ದಾರೆ.

ಈ ಹಿಂದೆ ಜರ್ಮನಿಯಲ್ಲಿದ್ದ ಭಾರತೀಯ ಟೆಕ್ಕಿಯೊಬ್ಬರು ಇನ್ಸ್‌ಟಾಗ್ರಾಮ್ ಪೋಸ್ಟ್, ಭಾರತದ ತಂತ್ರಜ್ಞಾನ ವಲಯದಲ್ಲಿನ ಬೇಡಿಕೆ, ಸಮರ್ಥನೀಯ ಅಲ್ಲದ ಕೆಲಸದ ಸಂಸ್ಕೃತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಜೊತೆಗೆ ತಾವು ವಿದೇಶದಲ್ಲಿ ಉದ್ಯೋಗಿ ಸ್ನೇಹಿತ ವಾತಾವರಣ ಅನುಭವಿಸುತ್ತಿರುವ ಕುರಿತು ವಿಡಿಯೋ ಹಂಚಿಕೊಂಡಿದ್ದರು. ಅದು ಸಹಿತ ಸಾಕಷ್ಟು ವೈರಲ್ ಅಗಿತ್ತು.

ಯಾವ ಕ್ಷೇತ್ರದಲ್ಲಿನ ಉದ್ಯೋಗಿಯೇ ಆಗಲಿ. ಭಾರತ ಅಥವಾ ವಿದೇಶವೇ ಆಗಿರಲಿಲ್ಲ. ಉದ್ಯೋಗಿಗೂ ವೈಯಕ್ತಿಕ ಜೀವನ ಇರುತ್ತದೆ. ಮಾನಸಿಕ ನೆಮ್ಮದಿ ಮುಖ್ಯವಾಗಿರುತ್ತದೆ. ಕೆಲಸಕ್ಕೆ ಬೇಕಾದುದ್ದನ್ನು ಕೊಟ್ಟ ಬಳಿಕವು ಆತನ ನೆಮ್ಮದಿಗೆ ಭಂಗ ತರಬಾರದು. ಉದ್ಯೋಗಿ ಸ್ನೇಹಿ ವಾತಾವರಣ, ರಜೆ ಕೊಡುವ ಸಂಸ್ಕೃತಿ, ಕೆಲಸದ ಅವಧಿ ವಿಚಾರದಲ್ಲಿ ಒಂದಷ್ಟು ವೃತ್ತಿಪರತೆಯನ್ನು ಭಾರತೀಯ ಉದ್ಯೋಗಿಗಳು ಬಯತ್ತಿದ್ದಾರೆ ಎಂಬುದು ಇತ್ತೀಚಿನ ದಿನಗಳಲ್ಲಿ ಸ್ಪಷ್ಟವಾಗುತ್ತಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+