ಬಸವನಗುಡಿ ಗಣೇಶ ಉತ್ಸವಕ್ಕೆ 53, ವಿಶೇಷಗಳು ಹಲವಾರು

ಬೆಂಗಳೂರು, ಸೆಪ್ಟೆಂಬರ್, 09 : ಗಣೇಶ ಹಬ್ಬದಂದು ಮಡಿ, ಭಕ್ತಿ, ಪೂಜೆಯಲ್ಲಿ ಮಗ್ನರಾದವರಿಗೆ ಸಂಗೀತದಲ್ಲಿಯೂ ತಲ್ಲೀನವಾಗುವ ಅವಕಾಶವನ್ನು ಬೆಂಗಳೂರು ಗಣೇಶ ಉತ್ಸವ ಸಮಿತಿ ನೀಡಿದ್ದು, ಸಂಗೀತ ಕಾರ್ಯಕ್ರಮದ ಪಟ್ಟಿಯನ್ನು ಮಂಗಳವಾರ ಪ್ರಕಟಿಸಿದೆ.

ಬೆಂಗಳೂರು ಗಣೇಶ ಉತ್ಸವ ಕಾರ್ಯಕ್ರಮವು ಸುಮಾರು 11 ದಿನಗಳ ಕಾಲ ನಗರದ ಬಸವನಗುಡಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಸಂಗೀತದ ಸುಮಧುರತೆಯಲ್ಲಿ ಮಿಂದೇಳುವ ಅವಕಾಶ ಸೆಪ್ಟೆಂಬರ್ 17ರ ಗುರುವಾರದಿಂದ 27ರವರೆಗೆ ಸಂಗೀತ ಪ್ರಿಯರಿಗೆ ಲಭಿಸಲಿದೆ.

ಬೆಂಗಳೂರು ಗಣೇಶ ಉತ್ಸವ ಕಾರ್ಯಕ್ರಮವು 53ನೇ ವರ್ಷಕ್ಕೆ ಕಾಲಿಟ್ಟಿದೆ. ಇದರಲ್ಲಿ ವಾಣಿ ಜಯರಾಮ್, ಪಿ ಸುಶೀಲ, ವಿಜಯ ಪ್ರಕಾಶ್, ಶ್ರೇಯಾ ಘೋಷಾಲ್, ಕಾರ್ತಿಕ್ ಇನ್ನು ಹಲವಾರು ಸಂಗೀತ ಲೋಕದ ದಿಗ್ಗಜರು ಭಾಗವಹಿಸಲಿದ್ದಾರೆ. ಈ ಸಂಗೀತ ಮಹಾಮಣಿಗಳ ಕಂಠಸಿರಿಯಲ್ಲಿ ಜನಪದ, ಕನ್ನಡ ಸಿನಿಮಾ ಗೀತೆಗಳು ಮೂಡಿ ಬರಲಿದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.[ಪಂಡಿತ್ ಗೋಡ್ಖಿಂಡಿರಿಂದ ವಿಶಿಷ್ಟ ಸಂಗೀತ ಸಾಹಸ ಘೋಷಣೆ]

Indian folk rock musical night at Ganesh fest

ಕಾರ್ಯಕ್ರಮದ ವಿವರ :

17ನೇ ಗುರುವಾರ - ರಾಮಚಂದ್ರ ಆಚಾರ್ಯ - ಕನ್ನಡದ ಭಕ್ತಿ ಗೀತೆಗಳ ಗಾಯನ - ಸಂಜೆ 7ರಿಂದ ರಾತ್ರಿ 10

18ನೇ ಶುಕ್ರವಾರ - ಗಾಯಕ ಇಳಯರಾಜ - ಕನ್ನಡ ಸಿನಿಮಾ ಗೀತೆಗಳು - ಸಂಜೆ 7ರಿಂದ ರಾತ್ರಿ 10

19ನೇ ಶನಿವಾರ - ಮಿಮಿಕ್ರಿ ಕಲಾವಿದ ದಯಾನಂದ - ಮಿಮಿಕ್ರಿ, ಹಾಸ್ಯ ಕಾರ್ಯಕ್ರಮ - ಸಂಜೆ 7ರಿಂದ ರಾತ್ರಿ 10

20ನೇ ಭಾನುವಾರ - ಕನ್ನಡ ಸಿನಿಮಾ ಗೀತೆಗಳು - ಅರ್ಜುನ್ ಜನ್ಯ ಮತ್ತು ತಂಡ - ಸಂಜೆ 7ರಿಂದ ರಾತ್ರಿ 10

21ನೇ ಸೋಮವಾರ - ಕ್ಲಾಸಿಕಲ್ ಜುಗಲ್ ಬಂದಿ- ವಿಶ್ವ ಮೋಹನ್ ಭಟ್,ಮೈಸೂರು ನಾಗರಾಜ್,ಮಂಜುನಾಥ್- ಸಂಜೆ 7ರಿಂದ ರಾತ್ರಿ 10

22ನೇ ಮಂಗಳವಾರ - ಕನ್ನಡ, ತಮಿಳು, ಹಿಂದಿ ಸಿನಿಮಾ ಗೀತೆ - ಕಾರ್ತಿಕ್ ಮತ್ತು ತಂಡ- ಸಂಜೆ 7ರಿಂದ ರಾತ್ರಿ 10

23ನೇ ಬುಧವಾರ - ಗಾಯಕರ ಸಮ್ಮೀಲನ - ಮಂಡೋಲಿನ್ ರಾಜೇಶ್, ಬಾಲಾ ಭಾಸ್ಕರ,ಗಿರಿಧರ, ಮೋಹಿನಿ ಡೇ, ಅರ್ಜುನ್ ಕುಮಾರ್

24ನೇ ಗುರುವಾರ - ಹಿಂದಿ ಮತ್ತು ಕನ್ನಡ ಸಿನಿಮಾ ಗೀತೆಗಳು - ಕುನಾಲ್ ಗಂಜವಾಲಾ - ಸಂಜೆ 7ರಿಂದ ರಾತ್ರಿ 10

25ನೇ ಶುಕ್ರವಾರ - ಭಾರತೀಯ ಜನಪದ ಗೀತೆಗಳು - ರಘು ದೀಕ್ಷಿತ್ ಮತ್ತು ತಂಡ - ಸಂಜೆ 7ರಿಂದ ರಾತ್ರಿ 10

26ನೇ ಶನಿವಾರ - ಹಳೆಯ ಪ್ರಸಿದ್ಧ ಕನ್ನಡ ಸಿನಿಮಾ ಗೀತೆ -ಪಿ. ಸುಶೀಲ,ವಾಣಿ ಜಯರಾಮ್,ವಿಜಯ ಪ್ರಕಾಶ್- ಸಂಜೆ 7ರಿಂದ ರಾತ್ರಿ 10

27ನೇ ಭಾನುವಾರ -ಕನ್ನಡ ಮತ್ತು ಹಿಂದಿ ಸಿನಿಮಾ ಗೀತೆಗಳು- ಶ್ರೇಯಾ ಘೋಷಾಲ್ ಮತ್ತು ತಂಡ- ಸಂಜೆ 7ರಿಂದ ರಾತ್ರಿ 10

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+