India-Pakistan War: ಶಾಂತಿ ಮಂತ್ರ ಜಪಿಸಿದವರಿಗೆ ತಿರುಗೇಟು: ಉಗ್ರರ ದಾಳಿ-ಸಾವುಗಳ ಪಟ್ಟಿ ಇಲ್ಲಿದೆ..

ಬೆಂಗಳೂರು, ಮೇ 08: ಪಾಕಿಸ್ತಾನ ಉಗ್ರರ ಅಡಗು ತಾಣಗಳನ್ನು ಸೆದೆ ಬಡೆಯುವ ಮೂಲಕ ಭಾರತೀಯ ಸೇನೆಯು ಪಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಂಡಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಕ್ಷಣಾ ಇಲಾಖೆಗೆ, ಸೇನಾ ಮುಖ್ಯಸ್ಥರಿಗೆ ಯುದ್ಧ ವಿಚಾರದಲ್ಲಿ ಪರಿಪೂರ್ಣ ಸ್ವಾತಂತ್ರ್ಯ ನೀಡಿತ್ತು. ಅದರಿಂದಲೇ Operation Sindoor ಯಶಸ್ವಿಯಾಯಿತು. ಇತ್ತ ಶಾಂತಿ ಮಂತ್ರ ಜಪಿಸಿದ ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕ ಸಿಟಿ ರವಿ ಅವರು ಉಗ್ರ ದಾಳಿ ಹಾಗೂ ಭಾರತೀಯ ಸಾವುಗಳ ಪಟ್ಟಿ ನೀಡಿ ತಿರುಗೇಟು ಕೊಟ್ಟಿದ್ದಾರೆ.

ಪಾಕಿಸ್ತಾನಿ ಉಗ್ರರನ್ನು ಕೊಂದಾಗ ಶಾಂತಿ ಮಂತ್ರ ಪಠಿಸುವ ಕಾಂಗ್ರೆಸ್ಸಿಗಳೇ ನೆನಪಿಡಿ ಎಂದು ಖಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಟ್ವಿಟ್ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ. ಭಾರತ ಪಾಕ್ ಯುದ್ಧ ತಿಳಿಯುತ್ತಿದ್ದಂತೆ ಬುಧವಾರ ಬೆಳಗ್ಗೆ ಕರ್ನಾಟಕ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ ಹ್ಯಾಂಡಲ್‌ಗಳಲ್ಲಿ ಅತ್ಯುತ್ತಮ ಅಸ್ತ್ರ 'ಶಾಂತಿ' ಎಂದು ಗಾಂಧಿ ಫೋಟೋ ಹಾಕಿತ್ತು. ಇದಕ್ಕೆ ರಾಜ್ಯವ್ಯಾಪಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ ನಾಯಕರು ಬಹಿರಂಗವಾಗಿಯೇ ಖಂಡಿಸಿದರು. ಈ ಪೈಕಿ ಸಿಟಿ ರವಿ ಅವರು ಉಗ್ರರ ಮಾಡಿ ದಾಳಿಗಳನ್ನು ಮರೆತೀರಾ? ಅವರು ಮಾಡಿದ ಸಾವು ನೋವುಗಳ ಮರೆತೀರಾ? ಇಲ್ಲಿದೆ ನೋಡಿ ಎಂದು ನೆನಪಿಸುವ ಮೂಲಕ ಕಾಂಗ್ರೆಸ್‌ಗೆ ಎಚ್ಚರಿಕೆ ನೀಡಿದ್ದಾರೆ. ಸಿಟಿ ರವಿ ಅವರು ನೀಡಿದ ಉಗ್ರ ದಾಳಿ ಪಟ್ಟಿ ಇಲ್ಲಿದೆ.

india-pakistan-tension-ct-ravi-slams-congress-over-peace-remarks-with-give-terror-attacks-list

ಭಾರತದ ಮೇಲೆ ಉಗ್ರರ ದಾಳಿಗಳು..

* 2005 ದೆಹಲಿ ಸರಣಿ ಸ್ಫೋಟ - 70 ಸಾವು

* 2006 ವಾರಾಣಸಿ ಬಾಂಬ್ ಸ್ಫೋಟ - 28 ಸಾವು

* 2006 ಮುಂಬೈ ರೈಲು ಸ್ಫೋಟ - 209 ಸಾವು

* 2006 ಮಲೇಗಾಂ ಬಾಂಬ್ ಸ್ಫೋಟ - 40 ಸಾವು

* 2007 ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ - 70 ಸಾವು

* 2008 ಜೈಪುರ ಬಾಂಬ್ ಸ್ಫೋಟ - 71 ಸಾವು

* 2008 ಅಹಮದಾಬಾದ್ ಬಾಂಬ್ ಸ್ಫೋಟ - 56 ಸಾವು

* 2008 ದೆಹಲಿ ಬಾಂಬ್ ಸ್ಫೋಟ - 36 ಸಾವು

* 2008 ಮುಂಬೈ ಉಗ್ರ ದಾಳಿ - 171 ಸಾವು

* 2010 ಪುಣೆ ಬಾಂಬ್ ಸ್ಫೋಟ - 17 ಸಾವು

* 2011 ಮುಂಬೈ ಸ್ಫೋಟ - 26 ಸಾವು

* 2011 ದೆಹಲಿ ಸ್ಫೋಟ - 15 ಸಾವು

* 2013 ಹೈದ್ರಾಬಾದ್ ಸ್ಫೋಟ - 18 ಸಾವು

ಹೀಗೆ ಉಗ್ರರು ಅನೇಕ ದಾಳಿಗಳನ್ನು ಮಾಡಿ ದಶಕಗಳಿಂದ ಭಾರತವನ್ನು ಕೆಣಕುತ್ತಲೇ ಬಂದಿದೆ. ಶಾಂತಿಯಿಂದ ಇದ್ದಿದ್ದರಿಂದಲೂ ಅನೇಕ ಭಾರತಿಯರನ್ನು ನಾವು ಕಳೆದುಕೊಂಡಿದ್ದೇವೆ. ಕಾಂಗ್ರೆಸ್ ಆಡಳಿತದ ಕಾಲದಲ್ಲಿ ನಡೆದ ಮೇಲಿನ ಉಗ್ರ ದಾಳಿಗಳಿಗೆ ಏಕೆ ಯಾವುದೇ ಕಠಿಣ ಪ್ರತಿಕ್ರಿಯೆ ನೀಡಲಿಲ್ಲ? ಅಂದು ನಮ್ಮ ಭದ್ರತಾ ಪಡೆಗಳು ಸರ್ಜಿಕಲ್ ಸ್ಟ್ರೈಕ್ ಮತ್ತು ವಾಯು ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದರೂ, ಅಂದಿದ್ದ ಕಾಂಗ್ರೆಸ್ ರಾಜಕೀಯ ನಾಯಕತ್ವದಲ್ಲಿ ಕಠಿಣ ಹಾಗು ದೃಢ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇರಲಿಲ್ಲ ಎಂದು ಅವರು ವಿವರಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನಾಯಕತ್ವದಲ್ಲಿ ದೇಶದಲ್ಲಿ ಆದ ಘಟನಾವಳಿಗಳು, ಆಡಳಿತ ವೈಫಲ್ಯ ಬಗ್ಗೆ ಅವರು ತಿಳಿಸಿದರು.

ಸದ್ಯ ಭಾರತ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವವಿದೆ. ಈಗಿರುವುದು ಯುದ್ಧಕಾಲದಲ್ಲಿ "ಶಾಂತಿ ಶಾಂತಿ" ಎಂದು ಟ್ವಿಟ್ ಮಾಡುವ ಅಸಹಾಯಕ ನಾಯಕರ ಕಾಲವಲ್ಲ. ಭಯೋತ್ಪಾದನೆಯನ್ನು, ಭಯೋತ್ಪಾದಕರನ್ನು, ಅವರ ಬೆಂಬಲಿಗರನ್ನು ಬೇರು ಸಮೇತ ಕಿತ್ತುಹಾಕುವ ಹಾಕುವ ಬಿಜೆಪಿಯ ನೇತೃತ್ವದ ಸುದೃಢ ಸರ್ಕಾರ ಭಾರತದಲ್ಲಿದೆ ಎಂದು ಅವರು ಕರ್ನಾಟಕ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+