ಬೆಂಗಳೂರಲ್ಲಿ ಟಿಸಿಎಸ್ 10ಕೆ ಸಂಭ್ರಮ: ವಿಜೇತರ ಪಟ್ಟಿ

ಬೆಂಗಳೂರು, ಮೇ. 15: ಬೆಂಗಳೂರಲ್ಲಿ ಭಾನುವಾರ ಓಟದ ರಂಗು, ಮುಂಜಾನೆಯೇ ಕಂಠೀರವ ಸ್ಟೇಡಿಯಂ ಸುತ್ತ ಮಕ್ಕಳು, ಯುವಕರು, ವೃದ್ಧರ ಆದಿಯಾಗಿ ಎಲ್ಲರೂ ಅಥ್ಲೆಟಿಕ್ ಸೂಟ್ ನಲ್ಲಿ ಮಿಂಚುತ್ತಿದ್ದರು. ಇದಕ್ಕೆ ಕಾರಣ 'ಟಿಸಿಎಸ್ ವರ್ಲ್ಡ್ 10 ಕೆ', ಗೆದ್ದವರಿಗೆ ಭರ್ಜರಿ ಪ್ರಶಸ್ತಿ, ನಗದು ಬಹುಮಾನ, ಭಾಗವಹಿಸಿದವರಿಗೆ ಸಂಭ್ರಮವೋ ಸಂಭ್ರಮ.

ಇಲೈಟ್ ಮೆನ್ ವಿಭಾಗದಲ್ಲಿ ಇಥಿಯೋಪಿಯಾದ ಮೋಸಿನೆಟ್ ಮೊದಲ ಸ್ಥಾನ ಪಡೆದುಕೊಂಡರು. ಕೀನ್ಯಾದ ಜಾನ್ ಲಂಗಥ್ ಮತ್ತು ಇಥಿಯೋಪಿಯಾದ ಬೋನ್ಸಾ ಡೀಡಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.[ಟಿಸಿಎಸ್ ವಿಶ್ವ 10ಕೆಗೆ ಮೈಕ್ ಪೊವೆಲ್ ರಾಯಭಾರಿ]

bengaluru

ಭಾರತೀಯ ವಿಭಾಗದಲ್ಲಿ ತಮಿಳುನಾಡಿನ ಲಕ್ಷಣನ್ ಜಿ ಎಲ್ಲರನ್ನು ಹಿಂದಿಕ್ಕಿ ಅಗ್ರಸ್ಥಾನಿಯಾದರು. ಸುರೇಶ್ ಪಟೇಲ್ ಮತ್ತು ನಿತೇಂದರ್ ಸಿಂಗ್ ರಾವತ್ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಇಲೈಟ್ ಮಹಿಳೆಯರ ವಿಭಾಗದಲ್ಲಿ ಕೀನ್ಯಾದ ಪೆರಿಸ್ ಮೊದಲ ಸ್ಥಾನ ಪಡೆದುಕೊಂಡರು. ಕೀನ್ಯಾದ ಹೆಲ್ತ್ ಕಿಪ್ ರಾಪ್ ಇಥಿಯೋಪಿಯಾದ ವುಡಿ ಯಿಮರ್ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಭಾರತೀಯ ಮಹಿಳೆಯರ ವಿಭಾಗದಲ್ಲಿ ಸ್ವಾತಿ ಮೊದಲಿಗರಾಗಿ ಗುರಿ ಮುಟ್ಟಿದರೆ, ಸಂಜೀವಿನಿ ಮತ್ತು ಮೀನಾಕ್ಷಿ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದುಕೊಂಡರು.

ಮುಕ್ತ 10 ಕೆಯಲ್ಲಿ 12,215 ಸ್ಪರ್ಧಿಗಳು ಭಾಗವಹಿಸಿದ್ದರು. ಸೀನಿಯರ್ ಸಿಟಿಜನ್ ವಿಭಾಗದ ಓಟದಲ್ಲಿ ಪಾಲ್ಗೊಂಡವರು ನೃತ್ಯ ಮಾಡಿ ಸಂಭ್ರಮಿಸಿದರು. ಅಂಗವಿಕಲರ ವಿಭಾಗದಲ್ಲೂ ಓಟ ನಡೆಯಿತು.[26 ಮೈಲಿ ಓಡಲು 92 ವರ್ಷದ ಅಜ್ಜಿಗೆ 7 ಗಂಟೆ ಸಾಕು!]

ಅಂತಾರಾಷ್ಟ್ರೀಯ ಅಥ್ಲೆಟ್ ಮೈಕ್ ಪೊವೆಲ್, ಭಾರತೀಯ ಲಾಂಗ್ ಜಂಪ್ ತಾರೆ ಅಂಜು ಬಾಬಿ ಜಾರ್ಜ್, ಗೃಹ ಸಚಿವ ಡಾ. ಜಿ ಪರಮೇಶ್ವರ, ಕ್ರೀಡಾ ಸಚಿವ ಅಭಯ ಚಂದ್ರ ಜೈನ್, ನಟ ಪುನೀತ್ ರಾಜ್ ಕುಮಾರ್ ಓಟಕ್ಕೆ ಸಾಕ್ಷಿಯಾದರು.

-

-

-

-

-

-

ಅರ್ಧಕ್ಕೆ ನಿಂತ ಸ್ವಾತಿ: ಭಾರತೀಯ ವಿಭಾಗದಲ್ಲಿ ಎಲ್ಲರಿಗಿಂತ ಮುಂದೆ ಇದ್ದ ಸ್ವಾತಿ ಗದವೆ ಗುರಿ ಮುಟ್ಟಲು ಇನ್ನು 200 ಮೀಟರ್ ಇರುವಾಗಲೇ ಓಟ ಮುಗಿದಿದೆ ಎಂದು ಭಾವಿಸಿ ಕೆಳಕ್ಕೆ ಕುಳಿತರು. ಆದರೆ ಸುಮಾರು 30 ಸೆಕೆಂಡ್ ನಂತರ ಎಚ್ಚೆತ್ತುಕೊಂಡು ಅಂತಿಮವಾಗಿ ಭಾರತೀಯ ವಿಭಾಗದ ವಿಜೇತೆಯಾಗಿ ಹೊರಹೊಮ್ಮಿದರು. ಆದರೆ ತನ್ನ ದಾಖಲೆಯನ್ನು ತಾನೇ ಮುರಿಯಲಾಗಲಿಲ್ಲ ಎಂಬ ನೋವು ಅವರನ್ನು ಕಾಡುತ್ತಿತ್ತು.

ಸಾಮಾಜಿಕ ಜಾಲತಾಣಗಳಲ್ಲೂ 10 ಕೆ ಟ್ರೆಂಡ್ ಆಗಿದ್ದು ಹುಟ್ಟುಹಾಕಿದ್ದ ಕ್ರೇಜ್ ಗೆ ಸಾಕ್ಷಿ. ಗೃಹ ಸಚಿವರು ಸಂಗೀತಕ್ಕೆ ತಲೆ ಆಡಿಸುತ್ತ ಹೆಜ್ಜೆ ಹಾಕಿದ್ದು ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+