ಚಿತ್ರಗಳಲ್ಲಿ : ಭಾರತ ಗೆಲ್ಲಿಸಿ ಮೋದಿ ಬೃಹತ್ ಸಮಾವೇಶ
ಬೆಂಗಳೂರು, ನ.17: ಸಮಯಕ್ಕೆ ಸರಿಯಾಗಿ ಅರಮನೆ ಮೈದಾನಕ್ಕೆ ಬಂದಿಳಿದ ಗುಜರಾತಿನ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಬೆಂಗಳೂರಿನಲ್ಲಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಸಿಕ್ಕಿದೆ.
ಅರಮನೆ ಮೈದಾನದಲ್ಲಷ್ಟೇ ಅಲ್ಲ ಇಡೀ ನಗರದಲ್ಲಿ ಮೋದಿ ಹವೆ ಎದ್ದಿದೆ. ಬಿಗಿ ಭದ್ರತೆ ನಡುವೆ ಮೋದಿ ಅವರು ವೇದಿಕೆಗೆ ತೆರಳುತ್ತಿದ್ದರೆ, ಲಕ್ಷಾಂತರ ಮಂದಿ ಅಭಿಮಾನಿಗಳು ಮೋದಿ ಪರ ಘೋಷಣೆಗಳನ್ನು ಕೂಗಿದರು. ಬಿಳಿವಸ್ತ್ರ ಹಾಗೂ ಕೋಟ್ ಧರಿಸಿದ್ದ ಮೋದಿ ಅವರು ಅಭಿಮಾನಿಗಳತ್ತ ಕೈ ಬೀಸುತ್ತಾ ವೇದಿಕೆಗೆ ತೆರಳಿದರು.
ಮೈದಾನದ ಹೊರಗೆ ಸಾಕಷ್ಟು ಜನ ಅಭಿಮಾನಿಗಳು ಸಾಮಾವೇಶದ ಪಾಸ್ ಸಿಗದೆ ಹೊರಗೆ ನಿಂತು ವಿಡಿಯೋ ಪರದೆಗಳ ಮೂಲಕ ಮೋದಿ ಅವರನ್ನು ನೋಡಿ ಆನಂದಿಸಿದ್ದಾರೆ. ಮೋದಿ ಭಾವಚಿತ್ರವಿರುವ ಟೋಪಿ, ಟೀ ಶರ್ಟ್ ಗೆ ಬೇಡಿಕೆ ಹೆಚ್ಚಿದೆ. ಮೋದಿ ಅವರ ಬಲಪಕ್ಕದಲ್ಲಿ ರಾಜನಾಥ್ ಸಿಂಗ್, ಎಡಭಾಗದಲ್ಲಿ ಅನಂತ್ ಕುಮಾರ್ ಆಸೀನರಾಗಿದ್ದಾರೆ. ಸಮಾವೇಶದ ಚಿತ್ರಗಳು ನಿಮ್ಮ ಮುಂದಿದೆ.

ಮೋದಿ ಟೀ ಶರ್ಟ್
ಮೋದಿ ಬ್ರಿಗೇಡ್ ನಿಂದ ವಿವಿಧ ಬಣ್ಣದ ವಿವಿಧ ಘೋಷ ವಾಕ್ಯವುಳ್ಳ ಟೀ ಶರ್ಟ್ ಗಳು ಎಲ್ಲೆಡೆ ಕಣ್ಮನ ಸೆಳೆಯುತ್ತಿವೆ

ರಾಜನಾಥ್ ಸಿಂಗ್ ಭಾಷಣ
ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು

ಬಿಗಿ ಭದ್ರತೆ
ಸಮಾವೇಶದ ಆರಂಭಕ್ಕೂ ಮುನ್ನ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ತಪಾಸಣೆ ನಡೆಸಲಾಯಿತು

ಭಾರತ ಗೆಲ್ಲಿಸಿ ಸಮಾವೇಶ
ಭಾರತ ಗೆಲ್ಲಿಸಿ ಸಮಾವೇಶ ಆರಂಭಕ್ಕೂ ಮುನ್ನ ಕಂಡು ಬಂದ ದೃಶ್ಯ

ರಾಜ್ಯ ನಾಯಕರು
ಮೋದಿ ಆಗಮನಕ್ಕೂ ಮುನ್ನ ರಾಜ್ಯ ನಾಯಕರು ವೇದಿಕೆ ಏರಿ ನೆರೆದಿದ್ದ ಲಕ್ಷಾಂತರ ಜನರಿಗಾಗಿ ಭಾಷಣ ಮಾಡಿದರು. ಚಿತ್ರಕೃಪೆ: ಮಾಳವಿಕಾ ಅವಿನಾಶ್

ವೇದಿಕೆಯಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ

ವೇದಿಕೆಯಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಜತೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್

ವೇದಿಕೆಯಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಜತೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಸಮಾಲೋಚನೆ

ರಾಜನಾಥ್ ಸಿಂಗ್ ಭಾಷಣ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಭಾಷಣ

ರಾಜನಾಥ್ ಸಿಂಗ್ ಭಾಷಣ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಭಾಷಣ

ವೇದಿಕೆಯಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಭಾಷಣ

ನರೇಂದ್ರ ಮೋದಿ ಭಾಷಣ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಭಾಷಣ

ವೇದಿಕೆಯಲ್ಲಿ ಮೋದಿ
ಮೋದಿ ಭಾಷಣದ ವೇದಿಕೆ ಪಕ್ಕದಲ್ಲೇ ರಾಜ್ಯದ ಶಾಸಕರು, ಮಾಜಿ ಶಾಸಕರು, ಪಕ್ಷದ ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ 250 ಮಂದಿ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು

ಜನಸ್ತೋಮ
ಭಾರತ ಗೆಲ್ಲಿಸಿ ಸಮಾವೇಶಕ್ಕೆ ಬಂದಿದ್ದ ಜನಸ್ತೋಮ

ಭಾರತ ಗೆಲ್ಲಿಸಿ ಸಮಾವೇಶ
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಭಾರತ ಗೆಲ್ಲಿಸಿ ಸಮಾವೇಶಕ್ಕೆ ಬಂದಿದ್ದ ಜನಸ್ತೋಮ

ಯುಪಿಎ ಸರ್ಕಾರ ಟಾರ್ಗೆಟ್
ಯುಪಿಎ ಸರ್ಕಾರವನ್ನು ಟಾರ್ಗೆಟ್ ಮಾಡಿದ ಮೋದಿ, ದಿನಬಳಕೆ ವಸ್ತುಗಳ ಬೆಲೆಏರಿಕೆ, ಈರುಳ್ಳಿ ಬೆಲೆ ಏರಿಕೆ, ರೂಪಾಯಿ ಅಪಮೌಲ್ಯ ಸೇರಿದಂತೆ ರಾಷ್ಟ್ರೀಯ ಮುಖವಾದ ಸಂಗತಿಗಳನ್ನಷ್ಟೇ ಮೋದಿ ಪ್ರಸ್ತಾಪಿಸಿದರು

ಶಾದಿ ಭಾಗ್ಯ ಬಗ್ಗೆ ಪ್ರಸ್ತಾಪ ಇಲ್ಲ
ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಸದ್ಯ ರಾಜ್ಯ ಬಿಜೆಪಿ ಮುಖಂಡರ ಸದ್ಯದ ಆರೋಪದ ವಿಷಯಗಳಾದ ಶಾದಿಭಾಗ್ಯ, ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಸೇರಿದಂತೆ ಇತರೆ ವಿಷಯಗಳ ಬಗ್ಗೆ ನರೇಂದ್ರ ಮೋದಿ ಸೊಲ್ಲೆತ್ತಲಿಲ್ಲ. ಕೇವಲ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಾಪಸ್ ಪಡೆದ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನಷ್ಟೇ ಪ್ರಸ್ತಾಪ ಮಾಡಿ ಭಾಷಣ ಮುಗಿಸಿದರು.

ಬಿಜೆಪಿ ಆಂತರಿಕ ಕಿತ್ತಾಟ
ರಾಜ್ಯ ನಾಯಕರಲ್ಲಿ ಒಗ್ಗಟ್ಟು ಮೂಡಿಸಿ, ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುವ ಪರಿಕಲ್ಪನೆ ಸಮಾವೇಶದಿಂದ ಹೊರ ಹೊಮ್ಮಲಿಲ್ಲ ಬಿಜೆಪಿ ಆಂತರಿಕ ಕಿತ್ತಾಟ ಕೊನೆಗೊಳಿಸುವ ಒಂದು ಹೇಳಿಕೆಯೂ ಮೋದಿ ಅವರಿಂದ ಹೊರಬೀಳಲಿಲ್ಲ

ವೇದಿಕೆಯಲ್ಲಿ ಮೋದಿ
ಆಹ್ವಾನ ಕೊಟ್ಟರೆ ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲು ಸಿದ್ದರಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿರಾಶೆಯಾಗಿದೆ. ನರೇಂದ್ರಮೋದಿ ಬಗೆಗಿನ ಅಭಿಮಾನವನ್ನ ಎತ್ತಿ ಹಿಡಿದಿದ್ದ ಯಡಿಯೂರಪ್ಪ ಅವರ ಬಗ್ಗೆ ಸಮಾವೇಶದ ಭಾಷಣದಲ್ಲಿ ಪರೋಕ್ಷವಾಗಿ ಕೂಡಾ ಮೋದಿ ಅವರು ಪ್ರಸ್ತಾಪಿಸಲೇ ಇಲ್ಲ

ವೇದಿಕೆಯಲ್ಲಿ ಮೋದಿ
ಮೋದಿ ಹಾಗೂ ರಾಜನಾಥ್ ಸಿಂಗ್ ಗೆ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.

ಬೆಂಗಳೂರಿನಲ್ಲಿ ಮೋದಿ
ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ ಹೆಲಿಕಾಪ್ಟರ್ ಮೂಲಕವೇ ಅರಮನೆ ಮೈದಾನ ತಲುಪಿದರು

ಬೆಂಗಳೂರಿನಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಅಭಿಮಾನಿಗಳು

ಬೆಂಗಳೂರಿನಲ್ಲಿ ಮೋದಿ
ಭಾರತ ಗೆಲ್ಲಿಸಿ ಸಮಾವೇಶ ವೇದಿಕೆಯಲ್ಲಿ ನರೇಂದ್ರ ಮೋದಿ ಅಭಿಮಾನಿಗಳು











Click it and Unblock the Notifications