ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಬಿಜೆಪಿ ಮಿಡ್ ನೈಟ್ ಫ್ರೀಡಂ ರನ್

|
Google Oneindia Kannada News

ಬೆಂಗಳೂರು, ಆಗಸ್ಟ್ 15 : ಕರ್ನಾಟಕ ಬಿಜೆಪಿ ಯುವ ಮೋರ್ಚಾ ಹಾಗೂ ಐಟಿ ಘಟಕ ಹಮ್ಮಿಕೊಂಡಿದ್ದ 'ಮಿಡ್ ನೈಟ್ ಫ್ರೀಡಂ ರನ್' ಕಾರ್ಯಕ್ರಮ ಯಶಸ್ವಿಯಾಗಿದೆ. ರಾತ್ರಿ 12 ಗಂಟೆಗೆ ಸರಿಯಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಧ್ವಜಾರೋಹಣ ಮಾಡಿದರು.

ಭಾನುವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ 'ಮಿಡ್ ನೈಟ್ ಫ್ರೀಡಂ ರನ್' ಕಾರ್ಯಕ್ರಮ ಆರಂಭವಾಯಿತು. ನೂರಾರು ಯುವಕರು, ವಿದ್ಯಾರ್ಥಿಗಳು, ಹಲವು ಬಿಜೆಪಿ ನಾಯಕರು ಮಿಡ್ ನೈಟ್ ಫ್ರೀಡಂ ರನ್‌ನಲ್ಲಿ ಪಾಲ್ಗೊಂಡರು.[70ನೇ ಸ್ವಾತಂತ್ರ್ಯೋತ್ಸವ : ಕೆಂಪುಕೋಟೆ ಮೇಲೆ ಮೋದಿ ಹೇಳಿದ್ದೇನು?]

ಕೆ.ಆರ್.ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಗಾಂಧಿನಗರ, ಮೌರ್ಯ ವೃತ್ತ ಮಾರ್ಗವಾಗಿ ಸಾಗಿದ ಮ್ಯಾರಥಾನ್ ಮತ್ತೆ ಫ್ರೀಡಂ ಪಾರ್ಕ್‍ನಲ್ಲಿ ಅಂತ್ಯವಾಯಿತು. ಸಾವಿರಾರು ಜನರು ಭಾರತ್ ಮಾತಾಕೀ ಜೈ, ವಂದೇ ಮಾತರಂ ಎಂಬ ಘೋಷಣೆಗಳನ್ನು ಕೂಗಿದರು. [ಸ್ವಾತಂತ್ರ್ಯೋತ್ಸವ : ಸಿದ್ದರಾಮಯ್ಯ ಭಾಷಣದ ಮುಖ್ಯಾಂಶಗಳು]

ಫ್ರೀಡಂಪಾರ್ಕ್‌ನಲ್ಲಿ ರಾತ್ರಿ 12 ಗಂಟೆಗೆ ಸರಿಯಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಧ್ವಜಾರೋಹಣ ಮಾಡಿದರು. ಧ್ವಜಾರೋಹಣದ ಬಳಿಕ 'ಮಿಡ್ ನೈಟ್ ಫ್ರೀಡಂ ರನ್' ಅಂತ್ಯವಾಯಿತು....

ಮಿಡ್ ನೈಟ್ ಫ್ರೀಡಂ ರನ್

ಮಿಡ್ ನೈಟ್ ಫ್ರೀಡಂ ರನ್

ಕರ್ನಾಟಕ ಬಿಜೆಪಿ ಯುವ ಮೋರ್ಚಾ ಹಾಗೂ ಐಟಿ ಘಟಕ 'ಮಿಡ್ ನೈಟ್ ಫ್ರೀಡಂ ರನ್' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.

ಮೋದಿ ಲಾಂಛನ ಬಿಡುಗಡೆ ಮಾಡಿದ್ದರು

ಮೋದಿ ಲಾಂಛನ ಬಿಡುಗಡೆ ಮಾಡಿದ್ದರು

ಪ್ರಧಾನಿ ನರೇಂದ್ರ ಮೋದಿ ಅವರು 'ಮಿಡ್ ನೈಟ್ ಫ್ರೀಡಂ ರನ್' ಕಾರ್ಯಕ್ರಮದ ಲಾಂಛನವನ್ನು ಬಿಡುಗಡೆ ಮಾಡಿದ್ದರು. ಕರ್ನಾಟಕ ಬಿಜೆಪಿ ನಾಯಕರಯ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದರು.

9 ಗಂಟೆಗೆ ಆರಂಭವಾದ ಮಿಡ್ ನೈಟ್ ಫ್ರೀಡಂ ರನ್

9 ಗಂಟೆಗೆ ಆರಂಭವಾದ ಮಿಡ್ ನೈಟ್ ಫ್ರೀಡಂ ರನ್

ಆಗಸ್ಟ್ 14ರ ಭಾನುವಾರ ರಾತ್ರ 9 ಗಂಟೆಗೆ ಆರಂಭವಾದ ಮಿಡ್ ನೈಟ್ ಫ್ರೀಡಂ ರನ್ ಆಗಸ್ಟ್‌ 15ರ ಬೆಳಗ್ಗೆ 12 ಗಂಟೆಗೆ ಧ್ವಜಾರೋಹಣ ಮಾಡಿದ ಬಳಿಕ ಮುಕ್ತಾಯವಾಯಿತು.

ಮ್ಯಾರಾಥಾನ್ ಸಾಗಿದ ದಾರಿ

ಮ್ಯಾರಾಥಾನ್ ಸಾಗಿದ ದಾರಿ

ಫ್ರೀಡಂಪಾರ್ಕ್‌ನಲ್ಲಿ ಆರಂಭವಾದ ಮ್ಯಾರಾಥಾನ್ ಕೆ.ಆರ್.ಸರ್ಕಲ್, ಮೈಸೂರು ಬ್ಯಾಂಕ್ ಸರ್ಕಲ್, ಗಾಂಧಿನಗರ, ಮೌರ್ಯ ವೃತ್ತ ಮಾರ್ಗವಾಗಿ ಸಾಗಿ ಫ್ರೀಡಂಪಾರ್ಕ್‌ಗೆ ವಾಪಸ್ ಆಯಿತು.

12 ಗಂಟೆಗೆ ಧ್ವಜಾರೋಹಣ

12 ಗಂಟೆಗೆ ಧ್ವಜಾರೋಹಣ

ಫ್ರೀಡಂಪಾರ್ಕ್‌ನಲ್ಲಿ ರಾತ್ರಿ 12 ಗಂಟೆಗೆ ಸರಿಯಾಗಿ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಧ್ವಜಾರೋಹಣ ಮಾಡಿದರು. ಫ್ರೀಡಂ ರನ್‌ನಲ್ಲಿ ಪಾಲ್ಗೊಂಡಿದ್ದ ನೂರಾರು ಜನರು ಭಾರತ್ ಮಾತಾಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು.

ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡವರು

ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡವರು

ಯುವಮೋರ್ಚಾ ಅಧ್ಯಕ್ಷ ಮತ್ತು ಸಂಸದ ಪ್ರತಾಪ್ ಸಿಂಹ, ಸಂಸದರಾದ ಶೋಭಾ ಕರಂದ್ಲಾಜೆ, ಪಿ.ಸಿ.ಮೋಹನ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಶಾಸಕ ಅಶ್ವಥ್ ನಾರಾಯಣ ಸೇರಿದಂತೆ ಹಲವು ಬಿಜೆಪಿ ನಾಯಕರು ಫ್ರೀಡಂರನ್‌ನಲ್ಲಿ ಪಾಲ್ಗೊಂಡಿದ್ದರು.

English summary
Thousands of youngsters take part in the Midnight Freedom Run event at Freedom park Bengaluru, on August 14, 2015.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X