ಚಿತ್ರಗಳಲ್ಲಿ : ವಿಜಯನಗರದಿಂದ ಅನಂತ್ 'ವಿಜಯ ಯಾತ್ರೆ'

ಬೆಂಗಳೂರು, ಮಾ.17: ಯುಪಿಎ ಸರ್ಕಾರದ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆ ವಿರುದ್ಧ ಸಮಯ ಸಾರಿರುವ ಬಿಜೆಪಿಗೆ ವಿಜಯ ಸಾಧಿಸಲಿ ಎಂಬ ಉದ್ದೇಶದಿಂದ ವಿಜಯ ನಗರದಿಂದಲೇ ‘ವಿಜಯ ಯಾತ್ರೆ' ಆರಂಭಿಸಲಾಗಿದೆ ಎಂದು ಹಾಲಿ ಸಂಸದ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ್ ಹೇಳಿದ್ದಾರೆ.

ವಿಜಯನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿಜಯ ನಗರ, ಹಂಪಿ ನಗರ ಸೇರಿ ವಿವಿಧೆಡೆ ಗಳಲ್ಲಿ ರೋಡ್ ಶೋ ನಡೆಸಿದ ಅನಂತ್ ಕುಮಾರ್ ಅವರು, 'ಈ ದೇಶವನ್ನು ರಕ್ಷಿಸಲು ಹಾಗೂ ಅಭಿವೃದ್ಧಿ ಶೀಲಗೊಳಿಸಲು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಗೆಲುವು ಸಾಧಿಸಬೇಕಿದೆ ಎಂದರು.

ಬಿಜೆಪಿ ಗೆಲ್ಲಿಸಿ ದೇಶವನ್ನು ಉಳಿಸಿ: ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಬೇಕೆಂದು ಮತದಾರರಲ್ಲಿ ಮನವಿ ಮಾಡಿದ ಅನಂತ ಕುಮಾರ್, ರಾಜ್ಯ ಮತ್ತು ದೇಶದಲ್ಲಿ ಮೋದಿಯ ಅಲೆ ಇದ್ದು, ಬಿಜೆಪಿ ಕಾರ್ಯಕರ್ತರು ಇದನ್ನು ಸದ್ಬಳಕೆ ಮಾಡಬೇಕು. [ವಿಜಯ ಯಾತ್ರೆ ಇನ್ನಷ್ಟು ಚಿತ್ರಗಳಿಗೆ ಕ್ಲಿಕ್ಕಿಸಿ]

‘ಆಮ್ ಆದ್ಮಿ ಪಕ್ಷ'ದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರೋಡ್ ಶೋ ನಡೆಸಿದರೆಂಬ ಕಾರಣಕ್ಕೆ ವಿಜಯನಗರದಲ್ಲಿ ರೋಡ್ ಶೋ ಮಾಡುತ್ತಿಲ್ಲ. ವಿಜಯ ಯಾತ್ರೆಗಾಗಿ ವಿಜಯನಗರದಿಂದ ರೋಡ್ ಶೋ ಆರಂಭಿಸಿದ್ದೇವೆ. ಮಾಧ್ಯಮವನ್ನು ಟೀಕಿಸುವ ಕೇಜ್ರಿವಾಲ್ ಗೆ ಪ್ರಜಾಪ್ರಭುತ್ವ ಮತ್ತು ಮಾಧ್ಯಮ ವಿರೋಧಿ ಎಂದು ಅವರು ಕರೆದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಚ್ ಎನ್ ಅನಂತ್ ಕುಮಾರ್ ಹಾಗೂ ಅವರ ಪತ್ನಿ ತೇಜಸ್ವಿನಿ ಅವರು ನಡೆಸಿದ ಪಾದಯಾತ್ರೆಯ ವಿವರ ಮುಂದಿನ ಚಿತ್ರ ಸರಣಿಯಲ್ಲಿ ತಪ್ಪದೇ ವೀಕ್ಷಿಸಿ...

ಬೆಂಗಳೂರು ಜನ ಸೇವೆ ಮಾಡಿದ ಅನುಭವ

ಬೆಂಗಳೂರು ಜನ ಸೇವೆ ಮಾಡಿದ ಅನುಭವ

ಸುಮಾರು ಹದಿನೆಂಟು ವರ್ಷಗಳಿಂದಲೂ ಬೆಂಗಳೂರು ಜನರ ಸೇವೆ ಸಲ್ಲಿಸುತ್ತಿರುವ ನಮಗೆ ಗೆಲುವು ದೊರೆಯಲಿದೆ ಎಂದು ಅನಂತ ಕುಮಾರ್ ಭರವಸೆ ವ್ಯಕ್ತಪಡಿಸಿದರು.

ನಂದನ್ ನಿಲೇಕಣಿ ಆಧಾರ್ ಕಾರ್ಡ್ ಬಗ್ಗೆ

ನಂದನ್ ನಿಲೇಕಣಿ ಆಧಾರ್ ಕಾರ್ಡ್ ಬಗ್ಗೆ

ಆಧಾರ್ ಕಾರ್ಡ್ ರೂವಾರಿ ನಂದನ್ ನಿಲೇಕಣಿ ಆಧಾರ್ ಕಾರ್ಡ್ ಜನರಿಗೆ ತಲುಪಿಸುತ್ತಿದ್ದೇನೆ ಎನ್ನುತ್ತಾ ಭಾರತದ ಮಾಹಿತಿಯನ್ನು ವಿದೇಶಿಗರಿಗೆ ಹಂಚಿದ್ದಾರೆಂದು ದೂರಿದರು.

ವಿಜಯನಗರದಲ್ಲಿ ಮಾಜಿ ಸಚಿವ ಸೋಮಣ್ಣ ಸಾಥ್

ವಿಜಯನಗರದಲ್ಲಿ ಮಾಜಿ ಸಚಿವ ಸೋಮಣ್ಣ ಸಾಥ್

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್ ಅವರಿಗೆ ಮಾಜಿ ಸಚಿವ ಸೋಮಣ್ಣ ಸಾಥ್ ನೀಡಿದರು. ಈ ಹಿಂದೆ ಬಿಜೆಪಿಯಲ್ಲಿ ಉಂಟಾಗಿದ್ದ ಕೆಲ ತಪ್ಪುಗಳನ್ನು ಜನರು ಕ್ಷಮಿಸಬೇಕು. ಬಿಜೆಪಿಗೆ ಮತ ನೀಡುವ ಮೂಲಕ ಕಾಂಗ್ರೆಸನ್ನು ತೊಲಗಿಸಿ, ದೇಶ ಉಳಿಸಬೇಕು ಎಂದು ಸೋಮಣ್ಣ ಮನವಿ ಮಾಡಿದರು.

ಜಯನಗರದಲ್ಲಿ ಅನಂತ್ ಕುಮಾರ್ ಕಚೇರಿ

ಜಯನಗರದಲ್ಲಿ ಅನಂತ್ ಕುಮಾರ್ ಕಚೇರಿ

ವಿಜಯನಗರದಲ್ಲಿ ರೋಡ್ ಶೋ(ವಿಜಯ ಯಾತ್ರೆ) ಆರಂಭಿಸುವುದಕ್ಕೂ ಮುನ್ನ ಅನಂತಕುಮಾರ್ ಅವರು ಜಯನಗರದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಕಚೇರಿ ಉದ್ಘಾಟಿಸಿದರು.

ಮಾಜಿ ಉಪ ಮುಖ್ಯಮಂತ್ರಿ ಆರ್ ಅಶೋಕ್, ಮಾಜಿ ಸಚಿವ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಉಪ ಸಭಾಪತಿ ವಿಮಲಾಗೌಡ, ಶಾಸಕ ಬಿ.ಎನ್ ವಿಜಯಕುಮಾರ್, ವಿ. ಸೋಮಣ್ಣ, ಅಶ್ವತ್ಥನಾರಾಯಣ, ಮೇಯರ್ ಕಟ್ಟೆ ಸತ್ಯನಾರಾಯಣ, ಮಹಿಳಾ ಮುಖಂಡರಾದ ಶ್ರುತಿ, ಮಾಳವಿಕಾ ಮುಂತಾದವರು ಉಪಸ್ಥಿತರಿದ್ದರು.

ತೇಜಸ್ವಿನಿ ಅನಂತ್ ಅವರಿಂದ ಹೋಳಿ ಆಚರಣೆ

ತೇಜಸ್ವಿನಿ ಅನಂತ್ ಅವರಿಂದ ಹೋಳಿ ಆಚರಣೆ

ಬೆಂಗಳೂರಿನ ಭುವನೇಶ್ವರಿ ನಗರ, ಚಿಕ್ಕಲಸಂದ್ರ, ಪದ್ಮನಾಭನಗರದಲ್ಲಿ ಪಾದಯಾತ್ರೆ ನಡೆಸಿ ಅನಂತ್ ಕುಮಾರ್ ಪರ ಮತ ಯಾಚಿಸಿದರು.

ಗಣೇಶ್ ಮಂದಿರ ವಾರ್ಡ್ ನಲ್ಲಿ ತೇಜಸ್ವಿನಿ

ಗಣೇಶ್ ಮಂದಿರ ವಾರ್ಡ್ ನಲ್ಲಿ ತೇಜಸ್ವಿನಿ

ಬನಶಂಕರಿ ದೇಗುಲದ ಶಾಖಾಂಬರಿ ನಗರದ ಗಣೇಶ್ ಮಂದಿರ ವಾರ್ಡ್ 165 ನಲ್ಲಿ ತೇಜಸ್ವಿನಿ ಅನಂತ್ ಕುಮಾರ್ ಅವರು ಮತದಾರರ ಜತೆ ಸಮಾಲೋಚನೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+