Rain in Bengaluru : ಹವಾಮಾನ ವರದಿ; ಬೆಂಗಳೂರಲ್ಲಿ ಗುರುವಾರವೂ ಮಳೆ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 13; ತಮಿಳುನಾಡಿನಲ್ಲಿ ಉಂಟಾಗಿರುವ ಚಂಡಮಾರುತದ ಪರಿಣಾಮ ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಗುರುವಾರವೂ ಬೆಂಗಳೂರು ನಗರ ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಮೈಸೂರು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡು, ಮಲೆನಾಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರವೂ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಬುಧವಾರ ಸಂಜೆ ಬೆಂಗಳೂರಿನಲ್ಲಿ ಸುರಿದ ಮಳೆ ಅವಾಂತರ ಸೃಷ್ಟಿಸಿದ್ದು, ಒಬ್ಬರು ಬಲಿಯಾಗಿದ್ದಾರೆ.

IMD Predicts Heavy Rain In Bengaluru On April 14

ಬುಧವಾರ ಸಂಜೆ 4 ಗಂಟೆಯ ವೇಳೆಗೆ ನಗರದಲ್ಲಿ ಮಳೆ ಆರಂಭವಾಯಿತು. ಒಟ್ಟು 12 ಕಡೆ ಮರಗಳು ಬಿದ್ದಿವೆ. ವಿಜಯನಗರದಲ್ಲಿ ರಸ್ತೆ ಮೇಲೆ ಬಿದ್ದ ವಿದ್ಯುತ್ ತಂತಿ ತುಳಿದು ಹಣ್ಣಿನ ವ್ಯಾಪಾರಿ ಮೃತಪಟ್ಟಿದ್ದಾನೆ.

ನಾಯಂಡಹಳ್ಳಿ 30 ಮಿ. ಮೀ., ಉತ್ತರಹಳ್ಳಿ 20.5, ನಂದಿನಿ ಲೇಔಟ್ 20, ಮಾರುತಿ ಮಂದಿರ 19.5, ಸಂಪಗಿರಾಮನಗರ 18.5, ಅಗ್ರಹಾರ ದಾಸರಹಳ್ಳಿ 17.5, ಚಾಮರಾಜಪೇಟೆ 16, ಲಕ್ಕಸಂದ್ರ 14, ಸಾರಕ್ಕಿ 13 ಮಿ. ಮೀ. ಮಳೆಯಾಗಿದೆ.

IMD Predicts Heavy Rain In Bengaluru On April 14

ರಾಜಾಜಿನಗರ 11, ವಿದ್ಯಾಪೀಠ 11, ಬೊಮ್ಮನಹಳ್ಳಿ 4, ಕೆ. ಆರ್.‌ ಪುರಂ 2, ಬಾಣಸವಾಡಿ 2, ಪಟ್ಟಾಭಿರಾಮನಗರ 11, ದೊಮ್ಮಲೂರು 9, ಕಾಟನ್‌ಪೇಟೆಯಲ್ಲಿ 17 ಮಿ. ಮೀ. ಮಳೆಯಾಗಿದೆ.

ಸಂಜೆ 7 ಗಂಟೆಯ ತನಕ ದಕ್ಷಿಣ ಕನ್ನಡದಲ್ಲಿ 82.5, ಮಂಡ್ಯ 82, ಚಾಮರಾಜನಗರ 80, ರಾಮನಗರ 62, ಹಾಸನ 58, ಮೈಸೂರು 57, ಕೊಡಗು 47 ಮಿ. ಮೀ. ಮಳೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+