ಬೆಂಗಳೂರು: ಮರ್ಮಾಂಗಕ್ಕೆ ಒದ್ದು ಗಂಡನ ಕೊಲೆ ಮಾಡಿದ್ಲು ಹೆಂಡ್ತಿ
ಬೆಂಗಳೂರು, ಫೆಬ್ರವರಿ. 26 : ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ಹೆಂಡತಿ ಗಂಡನ ಮರ್ಮಾಂಗಕ್ಕೆ ಒದ್ದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಬ್ಯಾಟರಾಯಪುರದ ಕವಿತಾ ಲೇಔಟ್ ನಲ್ಲಿ ಶನಿವಾರ ಮಧ್ಯೆ ರಾತ್ರಿ ನಡೆದಿದೆ.
ಖಾಸಗಿ ಕಂಪನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಉದಯ್ ಕುಮಾರ್ ಮೃತಪಟ್ಟ ದುರ್ದೈವಿ. ಉದಯ್ ಶನಿವಾರ ರಾತ್ರಿ ಹೆಂಡತಿಯನ್ನು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ.

ಆದರೆ, ಗಂಡನಿಗೆ ಮಾರಣಾಂತಿಕ ಕಾಯಿಲೆ ಇರುವುದರಿಂದ ಲೈಂಗಿಕ ಕ್ರಿಯೆಗೆ ಪತ್ನಿ ನಿರ್ಮಲಾ ನಿರಾಕರಿಸಿದ್ದಾಳೆ. ಈ ಹಿನ್ನಲೆಯಲ್ಲಿ ಕೋಪಗೊಂಡ ಉದಯ್ ಬೇರೊಬ್ಬನ ಜತೆ ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಹೆಂಡತಿ ನಿರ್ಮಾಲಾಳೊಂದಿಗೆ ಜಗಳ ಮಾಡಿದ್ದಾನೆ.
ಇದರಿಂದ ಕೋಪಗೊಂಡ ನಿರ್ಮಾಲಾ ತನ್ನ ಗಂಡ ಉದಯ್ ನ ಮರ್ಮಾಂಗಕ್ಕೆ ಜಾಡಿಸಿ ಒದ್ದಿದ್ದರಿಂದ ಉದಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬಳಿಕ ವಿಚಲಿತಗೊಂಡ ನಿರ್ಮಾಲಾ ನನ್ನ ಪತಿ ಹೃದಯಘಾತದಿಂದ ಸಾವನ್ನಪ್ಪಿದ್ದಾನೆಂದು ನೆರೆ ಜನರಿಗೆ ನಂಬಿಸಿದ್ದಾಳೆ. ಈ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದಾಗ ಅಸಲಿ ವಿಷಯ ಗೊತ್ತಾಗಿದೆ.












Click it and Unblock the Notifications