ಬೆಂಗಳೂರಲ್ಲಿ ಭೂಗಳ್ಳರು ಉಡೀಸ್, 31.35 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು!
ನಮ್ಮ ಬೆಂಗಳೂರಿಗೆ ಎಲ್ಲೆಲ್ಲಿಂದಲೋ ಬಂದು ಸೇರಿರುವ ಕೆಲವು ಭೂಗಳ್ಳರು ಸದ್ದೇ ಇಲ್ಲದೆ ಭೂಮಿಯನ್ನ ಗುಳುಂ ಮಾಡಿ ಹಾಕುತ್ತಿದ್ದಾರೆ. ಇದೇ ರೀತಿ ಲಕ್ಷಾಂತರ ಕೋಟಿ ರೂಪಾಯಿ ಜಮೀನು ಗುಳುಂ ಆಗಿ, ಸ್ವಾಹ ಮಾಡಲಾಗಿರುವ ಆರೋಪ ಪದೇ ಪದೇ ಕೇಳಿ ಬರುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡುತ್ತಿರುವ ಬೆಂಗಳೂರು ಜಿಲ್ಲಾಡಳಿತ ಒತ್ತುವರಿ ತೆರವು ಮಾಡುತ್ತಾ ಬಂದಿದ್ದು, ಇದೀಗ ಬೆಂಗಳೂರಲ್ಲಿ ಭೂಗಳ್ಳರು ಉಡೀಸ್ ಆಗುವ ಮೂಲಕ 31.35 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು ಮಾಡಲಾಗಿದೆ.
ಕನ್ನಡಿಗರ ರಾಜಧಾನಿ ಬೆಂಗಳೂರು ಜಗತ್ತು ಗುರುತಿಸುವ ಹಂತಕ್ಕೆ ಬೆಳೆದು ನಿಂತಿದ್ದು, ಎಲ್ಲರೂ ಸಲಾಂ ಹೊಡೆಯುತ್ತಾರೆ. ಬೆಂಗಳೂರಿನಲ್ಲಿ ಒತ್ತುವರಿ ಮಾಡುವವರ ಕಾಟ ಜೋರಾಗಿದ್ದು, ಇವತ್ತು ಮಧ್ಯಾಹ್ನ ಇದ್ದ ಕೆರೆ ನಾಳೆ ಬೆಳಗ್ಗೆಗೆ ಮಾಯ ಆಗಿ ಹೋಗಿರುತ್ತದೆ. ಹೀಗೆ ಎಲ್ಲೆಂದರಲ್ಲಿ ಕೆರೆಗಳನ್ನ & ಗೋಮಾಳ ಸೇರಿದಂತೆ ಸರ್ಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಳ್ಳುವ ಕಳ್ಳರ ಕಾಟ ಹೆಚ್ಚಾಗಿದೆ. ಇಂತಹ ಸಮಯದಲ್ಲೇ ಬೆಂಗಳೂರು ಜಿಲ್ಲಾಡಳಿತ ಮತ್ತೆ ತನ್ನ ಒತ್ತುವರಿ ತೆರವು ಕಾರ್ಯವನ್ನ ಚುರುಕುಗೊಳಿಸಿದ್ದು, 31.35 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಒತ್ತುವರಿ ತೆರವು ಆಗಿದೆ.

ಯಾವ ಯಾವ ಪ್ರದೇಶದಲ್ಲಿ ಒತ್ತುವರಿ ತೆರವು?
ಅಂದಹಾಗೆ ಇದೀಗ ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ 31.35 ಕೋಟಿ ರೂಪಾಯಿ ಮೌಲ್ಯದ ಒಟ್ಟು 18 ಎಕರೆ 13 ಗುಂಟೆ ಸರ್ಕಾರಿ ಜಮೀನನ್ನ ತೆರವು ಮಾಡಿ ವಶಕ್ಕೆ ಪಡೆಯಲಾಗಿದೆ. ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿದ್ದು, ಈ ಮೂಲಕ ಭೂಗಳ್ಳರಿಗೆ ಆಘಾತ ನೀಡಿದೆ ನಮ್ಮ ಬೆಂಗಳೂರು ಜಿಲ್ಲಾಡಳಿತ. ಖರಾಬು ಬಂಡೆ, ಕೆರೆ, ಖರಾಬು, ಕಟ್ಟೆ, ಸರ್ಕಾರಿ ಕರೆ & ಗೋಮಾಳ ಜಾಗಗಳಲ್ಲಿ ಭೂಮಿ ಒತ್ತುವರಿ ಮಾಡಿಕೊಂಡಿದ್ದರು. ಸರ್ಕಾರದ ಜಮೀನು ಭೂಗಳ್ಳರ ಪಾಲಾಗುವುದನ್ನ ಇದೀಗ ತಪ್ಪಿಸಲಾಗಿದ್ದು, ಇದೀಗ ಬೆಂಗಳೂರಿನ ಭೂಗಳ್ಳರಿಗೆ ಎಚ್ಚರಿಕೆ ಸಂದೇಶ ರವಾನೆಯಾಗಿದೆ.
ಭೂಗಳ್ಳರು ಈಗ ಫುಲ್ ಸೈಲೆಂಟ್!
ಬೆಂಗಳೂರು ಪೂರ್ವ ತಾಲೂಕು ಕೆ.ಆರ್. ಪುರಂನ ಪಟ್ಟಂದೂರು ಅಗ್ರಹಾರ, ವರ್ತೂರು ಹೋಬಳಿ ಹಾಡೋಸಿದ್ದಾಪುರ ಗ್ರಾಮ, ಬಿದರಹಳ್ಳಿ ಹೋಬಳಿಯ ಹುಸ್ಕೂರು ಗ್ರಾಮ, ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಮೈಲಸಂದ್ರ ಸೇರಿದಂತೆ ಉತ್ತರಹಳ್ಳಿ ಹೋಬಳಿ ವಡ್ಡರಪಾಳ್ಯ, ತಾವರೆಕೆರೆ ಹೋಬಳಿಯ ಕೋಲೂರು, ಬೆಂಗಳೂರು ಉತ್ತರ ತಾಲೂಕಿನ ದಾಸನಪುರ-2 ಹೋಬಳಿಯ ರಾವುತ್ತನ ಹಳ್ಳಿ, ಯಲಹಂಕ ತಾಲೂಕಿನ ಅದ್ವೆವಿಶ್ವನಾಥಪುರ ಗ್ರಾಮಗಳಲ್ಲಿ ಒತ್ತುವರಿ ತೆರವು ಮಾಡಲಾಗಿದೆ.












Click it and Unblock the Notifications