'ಚಾಮರಾಜಪೇಟೇಲಿ JDS ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುತ್ತೇನೆ’
ಮುಂಬರುವ ವಿಧಾನ ಸಭೆ ಚುನಾವಣೆಯಲ್ಲಿ ಚಾಮರಾಜ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಇಡುವೆ ಎಂದು ಜೆಡಿಎಸ್ ನ ಬಂಡಾಯ ಶಾಸಕ ಜಮೀರ್ ತಿಳಿಸಿದ್ದಾರೆ.
ಬೆಂಗಳೂರು, ಜುಲೈ 22: ಮುಂಬರುವ ವಿಧಾನ ಸಭೆ ಚುನಾವಣೆಯ ವೇಳೆ, ಚಾಮರಾಜ ಪೇಟೆಯಲ್ಲಿ ಜೆಡಿಎಸ್ ಪರವಾಗಿ ಯಾರೇ ಚುನಾವಣೆಗೆ (ವಿಧಾನಸಭಾ ಚುನಾವಣೆ) ನಿಲ್ಲಲಿ. ಅವರು ಸೋಲುವುದು ಮಾತ್ರವಲ್ಲ, ಠೇವಣಿಯನ್ನೂ ಕಳೆದುಕೊಳ್ಳಲಿದ್ದಾರೆ ಎಂದು ಜೆಡಿಎಸ್ ನ ಬಂಡಾಯ ಶಾಸಕ ಜಮೀರ್ ಅಹ್ಮದ್, ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ರೋಷಾವೇಶವಾಗಿ ಹೇಳಿಕೆ ನೀಡಿದ ಅವರು, ಚಾಮರಾಜ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಗೆದ್ದರೆ ತಾವು ತಮ್ಮ ರುಂಡ ಕತ್ತರಿಸಿ ಇಡುವುದಾಗಿ ಹೇಳಿದರು.

''ಕ್ಷೇತ್ರದ ಜನರು ತಮ್ಮನ್ನು (ಜಮೀರ್) ಪ್ರೀತಿಸುತ್ತಿದ್ದಾರೆ. ದೇವೇಗೌಡರನ್ನಲ್ಲ. ಇದು ಜೆಡಿಎಸ್ ನಾಯಕರಿಗೆ ಅರ್ಥವಾಗಬೇಕು'' ಎಂದು ಗುಡುಗಿದರು.












Click it and Unblock the Notifications