ಭಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿ ಫ್ರೀ: 'ಪದವಿ ಪಡೆದಿದ್ದವರಿದ್ರೆ ಮಾತ್ರ' ಎಂದು ಕಂಡಿಷನ್ ಹಾಕಿದ ಕಾಂಗ್ರೆಸ್
ಬೆಂಗಳೂರು,ಜೂನ್ 02: ಪ್ರಣಾಳಿಕೆಯಲ್ಲಿ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಶುಕ್ರವಾರ ಅವುಗಳನ್ನು ಜಾರಿ ಮಾಡುವ ಮೂಲಕ ಬಿಜೆಪಿ ಹಾಗೂ ಬಜರಂಗದಳ ಸಂಘಟನೆಯ ಕಾಲೆಳೆದಿದೆ. ಬಜರಂಗದಳ ನಿರುದ್ಯೋಗಿಗಳಿಗೂ 'ಯುವನಿಧಿ' ಫೀ ಎಂದು, ಆದರೆ ಎಂದು ಕಂಡಿಷನ್ ಹಾಕಿ ವ್ಯಂಗ್ಯ ಮಾಡಿದೆ.
ಚುನಾವಣೆಗೂ ಮುನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಕಾನೂನು ಉಲ್ಲಂಘಿಸುವ ಬಜರಂಗದಳ ದಂತಹ ಸಂಘಟನೆಗಳನ್ನು ನಿಷೇಧಿಸುತ್ತೇವೆ ಎಂದು ಹೇಳಿತ್ತು. ಇದಕ್ಕೆ ಸಾಕಷ್ಟು ಟೀಕೆ ಟಿಪ್ಪಣಿಗಳು, ಆಕ್ರೋಶ ವ್ಯಕ್ತವಾಗಿತ್ತು. ಪಿಎಫ್ ಜೊತೆ ಹಿಂದುಪರ, ಧಾಮಿರ್ಕ ಕೆಲಸ ಮಾಡುವ ಬಜರಂಗದಳ ಹೋಲಿಕೆ ಸಲ್ಲದು ಎಂದು ಬಿಜೆಪಿ ನಾಯಕರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು.

ಇದೀಗ ಕಾಂಗ್ರೆಸ್ ಅಂದುಕೊಂಡಂತೆ ಬಹುಮತ ಪಡೆದು ಅಧಿಕಾರ ರಚಿಸಿ, ಗ್ಯಾರಂಟಿ ಯೋಜನೆಗಳನ್ನು ಸಹ ಘೋಷಣೆ ಮಾಡಿದೆ. ತನ್ನ ಯೋಜನೆಯಲ್ಲೂ ಸಹ ಬಿಜೆಪಿ ಮತ್ತು ಭಜರಂಗದಳವರನ್ನು ಟಾರ್ಗೆಂಟ್ ಮಾಡಿ ಲೇವಡಿ ಮಾಡಿದೆ.
ಬಿಜೆಪಿಯ 'ನಾನು ಭಜರಂಗಿ' ಅಭಿಯಾನ
ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮತ್ತು ಹಿಂದು ಕಾರ್ಯಕರ್ತರು 'ನಾನು ಭಜರಂಗಿ' ಅಭಿಯಾನ ಆರಂಭಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಡಿಪಿ ಬದಲಿಸಿ, ಕಾಂಗ್ರೆಸ್ ವಿರುದ್ಧ ಟೀಕಿಸಿದ್ದರು. ಪಿಎಫ್‌ಐ ಜೊತೆಗೆ ಬಜರಂಗದಳ ಸೇರಿಸಿದ್ದಾರೆ. ಬಿಜೆಪಿ ಪಿಎಫ್‌ಐ ಅನ್ನು ಬ್ಯಾನ್ ಮಾಡಿತು, ತ್ರಿಬಲ್ ತಲಾಖ್ ಬ್ಯಾನ್ ಮಾಡಿತು. ತಾಕತ್ತಿದ್ದರೆ ಕಾಂಗ್ರೆಸ್ ಬಜರಂಗದಳ ಬ್ಯಾನ್ ಮಾಡಲಿ ಎಂದು ಬಸವರಾಜ ಬೊಮ್ಮಾಯಿ ಸೇರಿ ಹಲವು ನಾಯಕರು ಸವಾಲು ಹಾಕಿದ್ದರು.
ಭಜರಂಗ ದಳ ದೇಶಸೇವೆ ಮಾಡುವ ಒಂದು ದಳ. ಆರ್ಎಸ್ಎಸ್ನ ಒಂದು ಭಾಗ ಬಿಜೆಪಿ, ಆರ್‌ಎಸ್ಎಸ್ ಯುವಕರ ದಳ ಬಜರಂಗದಳ. ಆದರೆ ಬಜರಂಗದಳ ಮತ್ತು ಪಿಎಫ್ಐ ಸಂಘಟನೆಯನ್ನು ಒಂದೇ ತಕ್ಕಡಿಯಲ್ಲಿಟ್ಟು ಕಾಂಗ್ರೆಸ್ ದೇಶದ್ರೋಹ ಕೆಲಸ ಮಾಡಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದರು.

ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಬಜರಂಗದಳ ಬ್ಯಾನ್ ವಿಚಾರ ಭಾರೀ ಚರ್ಚೆಯಾಗಿತ್ತು. ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ನಿಮಗೂ ಗ್ಯಾರಂಟಿ ಯೋಜನೆಗಳ ಲಾಭ ನೀಡುತ್ತೇವೆ ಎಂದು ಟ್ವೀಟ್ ಮಾಡಿ ಬಿಜೆಪಿ ನಾಯಕರನ್ನು ಟ್ಯಾಗ್ ಮಾಡಿದೆ.
ಯುವನಿಧಿ ಸೇರಿ 5 ಗ್ಯಾರಂಟಿಗಳು ನಿಮಗೂ ಫ್ರೀ
ಬಜರಂಗದಳದ ನಿರುದ್ಯೋಗಿಗಳಿಗೂ ಯುವನಿಧಿಯಿಂದ ಮಾಸಿಕ 3000 ರೂಪಾಯಿ ನೀಡುತ್ತೇವೆ. ಆದರೆ ಬಜರಂಗದಳದಲ್ಲಿ ಪದವಿ ಪಡೆದವರಿದ್ದರೆ ಮಾತ್ರ ಯುವನಿಧಿ ಫ್ರೀ ಎಂದು ಸಿಎಂ ಸಿದ್ಧರಾಮಯ್ಯನವರು ತಿವಿದಿದ್ದಾರೆ. ಅಷ್ಟೇ ಅಲ್ಲದಇತ್ತ ಟ್ವೀಟ್‌ನಲ್ಲಿ ನಳಿನ್ ಕುಮಾರ್ ಕಟೀಲ್ ಟ್ಯಾಗ್ ಮಾಡಿ ನಿಮ್ಮ ಮನೆಗೂ 200 ಯೂನಿಟ್ ವಿದ್ಯುತ್ ಫ್ರೀ ಎಂದಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೆಸರು ಉಲ್ಲೇಖಿಸಿ ನಿಮ್ಮ ಮನೆಗೂ ಫ್ರೀ, ಕೇಂದ್ರ ಸಚಿವ ಶೋಭಾ ಕರಂದ್ಲಾಜೇ ಅವರಿಗೆ ನಿಮಗೂ ಬಸ್ ಪ್ರಯಾಣ ಉಚಿತ, ಸಿಟಿ ರವಿ ಟ್ಯಾಗ್ ಮಾಡಿ ನಿಮ್ಮ ಮನೆಯವರಿಗೂ ₹2000 ಉಚಿತ ಎಂದು ಕಾಂಗ್ರೆಸ್ ಕಾಲೆಳೆದಿದೆ.












Click it and Unblock the Notifications