• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾನೂ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಎಂದ ಮಾಜಿ ಪಿಎಂ ದೇವೇಗೌಡರು

|

ಬೆಂಗಳೂರು, ಡಿಸೆಂಬರ್ 30: ನಾನೂ "ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್" (ಅಚಾನಕ್ ಆಗಿ ಪ್ರಧಾನಿ ಆಗಿದ್ದು) ಎನ್ನುವ ಮೂಲಕ ಸದ್ಯಕ್ಕೆ ಬಹಳ ಚರ್ಚೆಯಲ್ಲಿರುವ ಅಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್ ಹೆಸರಿನ ಸಿನಿಮಾ ಟ್ರೈಲರ್ ವಿಚಾರವಾಗಿ ನಡೆಯುತ್ತಿರುವ ಚರ್ಚೆಗೆ ಎಚ್.ಡಿ.ದೇವೇಗೌಡರು ತಮ್ಮದೊಂದು ಧ್ವನಿ ಸೇರಿಸಿದ್ದಾರೆ.

2004ರಿಂದ 2014ರ ಮಧ್ಯೆ ಭಾರತದ ಪ್ರಧಾನಿ ಆಗಿದ್ದ ಮನ್ ಮೋಹನ್ ಸಿಂಗ್ ರ ಅವಧಿಯಲ್ಲಿನ ಘಟನೆ ಆಧರಿಸಿದ ಸಿನಿಮಾ ಇದು ಎನ್ನಲಾಗಿದೆ. ಇದು ಪಕ್ಷದ ವಿರುದ್ಧ ಬಿಜೆಪಿಯ ಪಿತೂರಿ ಎಂದು ಕಾಂಗ್ರೆಸ್ ಆರೋಪಿಸಿದೆ. 2004ರಿಂದ 2008ರ ಮಧ್ಯೆ ಪ್ರಧಾನಿ ಮನ್ ಮೋಹನ್ ಸಿಂಗ್ ರ ಮಾಧ್ಯಮ ಸಲಹೆಗಾರರಾಗಿದ್ದ ಸಂಜಯ್ ಬಾರು ಬರೆದ "ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್" ಹೆಸರಿನ ಪುಸ್ತಕವನ್ನೇ ಆಧರಿಸಿ ಸಿನಿಮಾ ಮಾಡಲಾಗಿದೆ.

ವ್ಯಕ್ತಿಚಿತ್ರ: ಕರ್ನಾಟಕದ 'ಕಿಂಗ್ ಮೇಕರ್' ದೇವೇಗೌಡ

ಇನ್ನು ಸಿನಿಮಾದ ಟ್ರೈಲರ್ ಮುಂಬೈನಲ್ಲಿ ಗುರುವಾರ ಬಿಡುಗಡೆ ಮಾಡಲಾಗಿದೆ. "ನನಗೆ ಗೊತ್ತಿಲ್ಲ, ಅದು ಹೇಗೆ ಸಿನಿಮಾ ಮಾಡಲು ಬಿಟ್ಟರು. ಇದು ನಾಲ್ಕೈದು ತಿಂಗಳ ಹಿಂದೆ ಆರಂಭವಾದದ್ದು. ನನಗೆ ಗೊತ್ತಿಲ್ಲ, ಯಾರು ಅನುಮತಿ ಕೊಟ್ಟರು, ಏಕೆ? ಪ್ರಾಮಾಣಿಕವಾಗಿ ನಾನು ಆಕ್ಸಿಡೆಂಟಲ್ ಪ್ರೈಮಿನಿಸ್ಟರ್ ಪುಸ್ತಕ ಓದಿಲ್ಲ. ಆದರೆ ನಾನು ಕೂಡ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್" ಎಂದು ಎಚ್.ಡಿ.ದೇವೇಗೌಡರು ಲಘು ಧಾಟಿಯಲ್ಲಿ ಉತ್ತರಿಸಿದ್ದಾರೆ.

1996ರಲ್ಲಿ ಲೋಕಸಭೆಗೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ದೊರೆಯದಿದ್ದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಹೊರತಾದ ಪ್ರಾದೇಶಿಕ ಪಕ್ಷಗಳ ನೇತೃತ್ವದ ಸರಕಾರ ರಚಿಸಲು ತೀರ್ಮಾನಿಸಲಾಯಿತು. ಆಗ ಕಾಂಗ್ರೆಸ್ ಬೆಂಬಲದೊಂದಿಗೆ ದೇವೇಗೌಡರು ಪ್ರಧಾನಿಯಾದರು. ಜೂನ್ 1, 1996ರಿಂದ ಏಪ್ರಿಲ್ 21, 1997ರ ವರೆಗೆ ಪ್ರಧಾನಿಯಾಗಿದ್ದರು. ಆ ನಂತರ ಕಾಂಗ್ರೆಸ್ ಬೆಂಬಲ ವಾಪಸ್ ಪಡೆದ ಮೇಲೆ ದೇವೇಗೌಡರು ಹುದ್ದೆಯಿಂದ ಕೆಳಗಿಳಿದಿದ್ದರು.

'ಆಕ್ಸಿಡೆಂಟಲ್ ಸಿಎಂ' ಸಿನಿಮಾ ಮಾಡಿದ್ರೆ ಎಚ್‌ಡಿಕೆ ಪಾತ್ರ ಯಾರು ಮಾಡ್ತಾರೆ?'

ವಿಜಯ್ ರತ್ನಾಕರ್ ಗುಟ್ಟೆ ನಿರ್ದೇಶನದ ಸಿನಿಮಾದಲ್ಲಿ ಅನುಪಮ್ ಖೇರ್ ಅವರು ಮನ್ ಮೋಹನ್ ಸಿಂಗ್ ಪಾತ್ರದಲ್ಲಿ, ಸಂಜಯ್ ಬಾರು ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದಾರೆ. ಜನವರಿ 11ರಂದು ಸಿನಿಮಾ ಬಿಡುಗಡೆ ಆಗಲಿದೆ.

English summary
Former Prime Minister HD Deve Gowda on Friday said he too was an "Accidental Prime Minister" amid a political row over the movie with the same title.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X