ಹೊಸ ಕಾರು ಕೇಳಿರಲಿಲ್ಲ, ಕೇಳಿದ್ದು ಹಳೆಯ ಫಾರ್ಚೂನರ್: ಜಮೀರ್
Recommended Video

ಬೆಂಗಳೂರು, ಜೂನ್ 26: ನನಗೆ ಫಾರ್ಚೂನರ್ ಬೇಡ, ಸರ್ಕಾರ ನೀಡಿರುವ ಇನೋವಾನೂ ಬೇಡ ನಾನು ಹೊಸ ಕಾರು ಕೇಳಿರಲಿಲ್ಲ ಎಂದು ಸಚಿವ ಜಮೀರ್ ಅಹಮದ್ ಹೇಳಿದರು.
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೊಸ ಕಾರು ಕೇಳಿರಲಿಲ್ಲ, ಹಳೆಯ ಫಾರ್ಚುನರ್ ಗಾಡಿ ಕೇಳಿದ್ದೆ, ಮಾಧ್ಯಮದವರು ಇದನ್ನು ವಿವಾದ ಮಾಡಿದರು ಇದು ರಾಷ್ಟ್ರೀಯ ಮಟ್ಟದ ಸುದ್ದಿಯಾಗಿದೆ ಎಂದರು.
ಅಗತ್ಯಕ್ಕಿಂತ ಹೆಚ್ಚು ವೆಚ್ಚಕ್ಕೆ ಕಡಿವಾಣ ಹಾಕುವಂತೆ ಎಚ್‌ಡಿ ಕುಮಾರಸ್ವಾಮಿ ಅವರ ನಿರ್ದೇಶನ ಆಧರಿಸಿ, ಹೊಸ ಕಾರು ಖರೀದಿಗಾಗಿ ಸಚಿವರು ಹಾಗೂ ಅಧಿಕಾರಿಗಳಿಂದ ಬಂದಿದ್ದ ಪ್ರಸ್ತಾವನೆಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ತಡೆ ಹಾಕಿದ್ದಾರೆ.

ಸಚಿವರಾದ, ಜಮೀರ್ ಅಹಮದ್, ಯು.ಟಿ. ಖಾದರ್, ಕೆ.ಜೆ. ಜಾರ್ಜ್, ಡಿ.ಕೆ. ಶಿವಕುಮಾರ್, ಜಯಮಾಲಾ, ಪ್ರಿಯಾಂಕ್ ಖರ್ಗೆ ಸೇರಿ ಹಲವು ಸಚಿವರು ಹೊಸ ಕಾರುಗಳಿಗೆ ಬೇಡಿಕೆ ಸಲ್ಲಿಸಿದ್ದರು. ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರು ಹೊಸ ಕಾರಿಗೆ ಬೇಡಿಕೆ ಸಲ್ಲಿಸಿದ್ದರು ಮತ್ತು 11 ಹೊಸ ಕಾರುಗಳ ಬೇಡಿಕೆ ಇದೂ ಸೇರಿತ್ತು ಎನ್ನಲಾಗಿದೆ.
ಈ ಕುರಿತು ವಿವರಣೆ ನೀಡಿದ ಅವರು ನಾನು ಹೊಸ ಗಾಡಿಯನ್ನು ಕೇಳಿಲ್ಲ, ನನಗೆ ಫಾರ್ಚುನರ್ ಬೇಡ, ಇನ್ನೋವ ಕೂಡ ಬೇಡ ನಾನು ಹಳೆಯ ಫಾರ್ಚೂನರ್ ಕೇಳಿದ್ದೆ ಅಷ್ಟೆ ಎಂದು ಹೇಳಿದರು. ಆಹಾರ ಇಲಾಖೆಯಿಂದ ಬಜೆಟ್‌ಗೆ 1900 ಕೋಟಿ ರೂ ಇದೆ. ಅಲ್ಪ ಸಂಖ್ಯಾತ ಇಲಾಖೆಯಿಂದ 900 ಕೋಟಿಗೆ ಬೇಡಿಕೆ ಇದೆ. ಶೇ.10ರಷ್ಟಾದರೂ ಕೊಡಲಿ, ಜನರನ್ನು ಸಮಾಧಾನ ಮಾಡಬಹುದು ಎಂದರು.












Click it and Unblock the Notifications