ಕಾಂಗ್ರೆಸ್‌ಗೆ ರಾಜೀನಾಮೆ ನೀಡಲು ಈಗಲೂ ಸಿದ್ಧ: ರಮೇಶ್ ಜಾರಕಿಹೊಳಿ
ಬೆಂಗಳೂರು, ಫೆಬ್ರವರಿ 13: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲು ಸಿದ್ಧ ಎಂದು ಶಾಸಕ ರಮೇಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ.
ಅಧಿವೇಶನಕ್ಕೆ ತೆರಳುವ ಮುನ್ನ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಮುಂಬೈಗೆ ಹೋಗಿದ್ದು ಆಪರೇಷನ್ ಕಮಲದಿಂದ ಅಲ್ಲ, ಪಕ್ಷದ ಜೊತೆ ಅಸಮಾಧಾನವಿದೆ ಕೆಲವೊಂದು ವಿಚಾರಗಳನ್ನು ಹೈಕಮಾಂಡ್ ಬಳಿ ಚರ್ಚೆ ಮಾಡುತ್ತೇವೆ ಎಂದರು.
ಪಕ್ಷದ ಜೊತೆ ಅಸಮಾಧಾನವಿದೆ, ರಾಜೀನಾಮೆ ನೀಡಬೇಕು ಎನಿಸದರೆ ನೀಡುತ್ತೇನೆ ಹಾಗೆಂದ ಮಾತ್ರಕ್ಕೆ ಬಿಜೆಪಿ ಜೊತೆ ನಂಟಿದೆ ಎಂದು ಅರ್ಥವಲ್ಲ. ನಾನು ಯಾವುದೇ ರೀತಿಯ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ ಎಂದರು.

ಮುಂಬೈಗೆ ಹೋಗಿದ್ದು ಫೆಬ್ರವರಿ 24ಕ್ಕೆ ಮಗಳ ಮದುವೆ ಇದೆ, ಮಹಾರಾಷ್ಟ್ರದಲ್ಲಿ ಸಾಕಷ್ಟು ಸ್ನೇಹಿತರಿದ್ದಾರೆ ಅವರನ್ನು ಕರೆಯಲು ಹೋಗಿದ್ದೆ ಅಷ್ಟೇ ಹೋದವರೆಲ್ಲರೂ ಒಟ್ಟಿಗೆ ಇರಲಿಲ್ಲ. ಮತ್ತೆ ಸಾಯಂಕಾಲ ಮುಂಬೈಗೆ ಹೋಗುತ್ತಿದ್ದೇನೆ ಆದರೆ ಇದನ್ನೂ ಆಪರೇಷನ್ ಕಮಲ ಎಂದು ಹೇಳುತ್ತೀರಾ ಎಂದು ಪ್ರಶ್ನಿಸಿದರು.
ಬಿಜೆಪಿಯಲ್ಲಿ ಸಾಕಷ್ಟು ಮಂದಿ ಸ್ನೇಹಿತರಿದ್ದಾರೆ, ಪಕ್ಷದ ಮಾತು ಬಂದಾಗ ವಿರೋಧವಷ್ಟೇ , ನಾನು ರಾಜಕಾರಣಿಗಳ ವಿರೋಧಿಯಲ್ಲ ಎಂದು ಸ್ಪಷ್ಟಪಡಿಸಿದರು.











Click it and Unblock the Notifications