ಭಾರತ-ಪಾಕಿಸ್ತಾನದಂತೆ ನಾನು ಸಿದ್ದರಾಮಯ್ಯ ಶತ್ರುಗಳಲ್ಲ: ಎಚ್ ವಿಶ್ವನಾಥ್
ಬೆಂಗಳೂರು, ಡಿಸೆಂಬರ್ 14: ಭಾರತ ಮತ್ತು ಪಾಕಿಸ್ತಾನದಂತೆ ನಾನು ಮತ್ತು ಸಿದ್ದರಾಮಯ್ಯ ಶತ್ರುಗಳಲ್ಲ ಎಂದು ಎಚ್ ವಿಶ್ವನಾಥ್ ಸ್ಪಷ್ಟಪಡಿಸಿದ್ದಾರೆ.
ಶತ್ರುತ್ವ ಎಂದರೆ ಪಾಕಿಸ್ತಾನ ಮತ್ತು ಭಾರತದ ನಡುವಿದೆಯಲ್ಲ ಅದು. ಆದರೆ ನಮ್ಮ ನಡುವೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ ಎಂದು ಹೇಳಿದರು. ನನ್ನ ಹಾಗೂ ಸಿದ್ದರಾಮಯ್ಯನವರನ್ನು ಶತ್ರುಗಳು ಎಂದು ಯಾರೂ ಕರೆಯಬೇಡಿ ಎಂದರು.
ರಮೇಶ್ ಜಾರಕಿಹೊಳಿ-ಸಿದ್ದರಾಮಯ್ಯ ಸ್ವಾರಸ್ಯಕರ ಸಂಭಾಷಣೆ
ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಭಾರತ ಉಸಿರಾಡುವುದು, ಹೊದ್ದು ಮಲಗುವುದು ರಾಜಕೀಯದಲ್ಲಿ ನನ್ನ ಉಸಿರಿರುವ ವರೆಗೆ ರಾಜಕೀಯದಲ್ಲೇ ಇರುತ್ತೇನೆ. ರಾಷ್ಟ್ರ ಮತ್ತು ರಾಜ್ಯದಲ್ಲಿ ಯಾರು ಪಕ್ಷಾಂತರ ಮಾಡೇ ಇಲ್ವಾ.
ನಾವು ಬೆನ್ನಿಗೆ ಚೂರಿ ಹಾಕಿದ್ದೇವೆ ಎಂದು ಕೆಲವರು ಹೇಳುತ್ತಿದ್ದಾರೆ. ಅದು ತಪ್ಪು. ಮತಭೇದ, ಯೋಚನಾಲಹರಿ ಬದಲಾವಣೆ ಇರಬಹುದು ಆದರೆ ನಾವು ವೈರಿಗಳಲ್ಲ, ಶತ್ರುಗಳಲ್ಲನನಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಯಡಿಯೂರಪ್ಪನವರ ಮೇಲೂ ಪ್ರೀತಿ ಇದೆ ಎಂದರು.