ತೆರೆದಿದೆ ರಾಜಭವನ, ಓ.. ಬಾ ಅತಿಥಿ!

ಬೆಂಗಳೂರು, ಆಗಸ್ಟ್ 24: ರಾಜಭವನ ಸಾರ್ವಜನರಿಗೆ ಮುಕ್ತವಾಗಿ ಒಂಭತ್ತು ದಿನಗಳು ಕಳೆದಿವೆ. ಪ್ರತಿ ನಿತ್ಯವೂ 400 ಮಂದಿ ಭೇಟಿ ನೀಡುತ್ತಿದ್ದಾರೆ.

ಗುರುವಾರ 450ಜನರಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಸೆ.6ರವರೆಗೆ ರಾಜಭವನ ಮುಕ್ತವಾಗಿರುತ್ತದೆ. ಸಂಜೆ 4ರಿಂದ 8ಗಂಟೆವರೆಗೆ ನಡೆಯುವ ಈ ಸಾರ್ವಜನಿಕ ವೀಕ್ಷಣೆ ಕಾರ್ಯಕ್ರಮ ಜನರಿಗೆ ರಾಜಭವನದ ಹಲವು ಮಾಹಿತಿಗಳನ್ನು ನೀಡುತ್ತದೆ.

ಹದಿನಾರು ಎಕರೆ ಪ್ರದೇಶದಲ್ಲಿ ರಾಜಭವನ, ಗಾಜಿನ ಮನೆ,ಉದ್ಯಾನ, ಬ್ಯಾಂಕ್ವೆಟ್ ಹಾಲ್, ಕಾರಂಜಿ ಒಳಗೆ ಇಟ್ಟಿರುವ ಪುರಾತನ ವಸ್ತುಗಳನ್ನು ವೀಕ್ಷಿಸಲು ಅವಕಾಶ ಇರುತ್ತದೆ.

Hundreds of people visiting historical Raj Bhavan in Bengaluru

ಗುರುವಾರ ರಾಜಭವನಕ್ಕೆ ಭೇಟಿ ನೀಡಿದವರನ್ನು 20ತಂಡವಾಗಿ ವಿಂಗಡಿಸಿ ಪ್ರವಾಸಿ ಮಾರ್ಗದರ್ಶಿಗಳ ನೇತೃತ್ವದಲ್ಲಿ ಕರೆದೊಯ್ಯಲಾಯಿತು. ಗಾಜಿನ ಮನೆಯಲ್ಲಿ ಕಾಫಿ, ಬಿಸ್ಕತ್ತು, ಸೇವನೆ ಮುಗಿದ ಬಳಿಕ ಉದ್ಯಾನದಲ್ಲಿ ವಿಹಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ರಾಜಭವನ ಆವರಣದ ಬಹುತೇಕ ಭಾಗ ಉದ್ಯಾನದಿಂದ ಕೂಡಿದ್ದು, ಹತ್ತಕ್ಕೂ ಅಧಿಕ ತೋಟಗಾರಿಕ ಇಲಾಖೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪ್ರತಿದಿನ ಉದ್ಯಾನಕ್ಕೆ ನೀರು ಹಾಯಿಸಿ ಸದಾ ಹಸಿರಾಗಿರುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಮಾರ್ಗದರ್ಶಿಗಳು ವಿವರಿಸಿದ್ದಾರೆ.

1992-2002ರ ಅವಧಿಯಲ್ಲಿ ರಾಜ್ಯಪಾಲರಾಗಿದ್ದ ವಿ.ಎಸ್. ರಮಾದೇವಿ ಇದೇ ರೀತಿ ಸಾರ್ವಜನಿಕರಿಗೆ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದ್ದರು. ಹದಿನಾರು ವರ್ಷಗಳ ನಂತರ ಮತ್ತೆ ರಾಜಭವನವನ್ನು ಹತ್ತಿರದಿಂದ ನೋಡುವ ಅವಕಾಶ ಸಾರ್ವಜನಿಕರಿಗೆ ಲಭ್ಯವಾಗಿದೆ. ನಿಗದಿಗಿಂತ ಹೆಚ್ಚು ನೋಂದಣಿಯಾಗಿರುವ ಕಾರಣ ಆನ್‌ಲೈನ್‌ ನೋಂದಣಿಯನ್ನು ಸ್ಥಗಿತಗೊಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+