ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂದಿರಾ ಕ್ಯಾಂಟೀನ್ ಮೊದಲ ದಿನ ಊಟ, ವ್ಯವಸ್ಥೆ ಹೇಗಿತ್ತು?

|
Google Oneindia Kannada News

ಬೆಂಗಳೂರು, ಆಗಸ್ಟ್ 16: ಇಂದಿರಾ ಕ್ಯಾಂಟೀನ್ ಕಾಂಗ್ರೆಸ್ ಪಾಲಿಗೆ ಗೇಮ್ ಚೇಂಜರ್ ಆಗುವಂತೆ ಕಾಣುತ್ತಿದೆ. ಮೊದಲ ದಿನ ಅಂದರೆ ಬುಧವಾರದಂದು ತಯಾರಿ ಮಾಡಿದ್ದ ವಾಂಗೀಬಾತ್, ಮೊಸರನ್ನ, ಸಾಂಬಾರ್ ಹಾಗೂ ಮೈಸೂರ್ ಪಾಕ್ ನ ಗುಣಮಟ್ಟ ಹಾಗೂ ಅವುಗಳನ್ನು ಉಣಬಡಿಸಲು ಮಾಡಿದ್ದ ವ್ಯವಸ್ಥೆ ತುಂಬ ಅಚ್ಚುಕಟ್ಟಾಗಿತ್ತು.

ಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲ ತಿನ್ಬೋದು ಪಟ್ಟಿ ನೋಡಿಇಂದಿರಾ ಕ್ಯಾಂಟೀನ್ ನಲ್ಲಿ ಏನೆಲ್ಲ ತಿನ್ಬೋದು ಪಟ್ಟಿ ನೋಡಿ

ಮೊದಲ ದಿನದ ಮಟ್ಟಿಗೆ ಪ್ರದರ್ಶನ ಯಶಸ್ವಿ ಕಂಡಂತಾಗಿದೆ. ವ್ಯವಸ್ಥೆ, ಗುಣಮಟ್ಟ ಮತ್ತಿತರ ವಿವರಗಳನ್ನು ತಿಳಿಯಲು ಜಯನಗರದ ಕನಕನ ಪಾಳ್ಯದ ಬಳಿಯ ಇಂದಿರಾ ಕ್ಯಾಂಟೀನ್ ಗೆ ತೆರಳಿದಾಗ ಅನುಭವಕ್ಕೆ ಬಂದಿದ್ದನ್ನು ನಿಮ್ಮ ಮುಂದೆ ಇಡಲಾಗುತ್ತಿದೆ.

How the Indira canteen caters on first day?

ಸಾಲಾಗಿ ನಿಂತು ಊಟ ಪಡೆಯುವುದಕ್ಕೆ ಬಹಳ ಕೌಂಟರ್ ಗಳನ್ನು ಮಾಡಲಾಗಿತ್ತು. ಊಟ ಬಡಿಸುವುದಕ್ಕೆ ಖಾಸಗಿ ಕ್ಯಾಟರಿಂಗ್ ಅವರನ್ನು ಕರೆಸಿದಂತಿತ್ತು. ಕೈಗವಸು, ತಲೆಯ ಮೇಲೆ ಟೊಪ್ಪಿ ಧರಿಸಿದ್ದ ಹುಡುಗರು, ಒಂದೇ ಬಣ್ಣದ ಸೀರೆಯುಟ್ಟು ವೃತ್ತಿಪರ ವಾತಾವರಣ ನಿರ್ಮಿಸಿದ್ದರು ಹೆಣ್ಣುಮಕ್ಕಳು.

How the Indira canteen caters on first day?

ಇಂದಿರಾ ಕ್ಯಾಂಟೀನ್ ಕುರಿತು ಟ್ವಿಟ್ಟಿಗರು ಏನಂತಾರೆ?ಇಂದಿರಾ ಕ್ಯಾಂಟೀನ್ ಕುರಿತು ಟ್ವಿಟ್ಟಿಗರು ಏನಂತಾರೆ?

ಒಟ್ಟಾರೆ ಸರಕಾರಿ ಕಾರ್ಯಕ್ರಮದ ಬಗ್ಗೆ ಇರುವ ನಕಾರಾತ್ಮಕ ಭಾವನೆಯನ್ನು ದೂರ ಮಾಡುವಂತೆ ಅಚ್ಚುಕಟ್ಟಾಗಿ ಆಯೋಜನೆಯಾಗಿತ್ತು ಇಂದಿರಾ ಕ್ಯಾಂಟೀನ್ ಉದ್ಘಾಟನೆ ಕಾರ್ಯಕ್ರಮ. "ಒಂದು ವೇಳೆ ಇದೇ ಗುಣಮಟ್ಟದ ಆಹಾರ ನೀಡಿದರೆ, ಇದೇ ಕ್ಯಾಂಟೀನ್ ಅನ್ನು ರಾಜ್ಯದಾದ್ಯಂತ ವಿಸ್ತರಣೆ ಮಾಡಿದರೆ ಸಿದ್ದರಾಮಯ್ಯ ಅವರ ಉದ್ದೇಶ ಗೆದ್ದೇ ಬಿಡುತ್ತದೆ" ಎಂಬಂತೆ ಅಲ್ಲಿದ್ದ ಜನ ಕೂಡ ಮಾತನಾಡಿಕೊಳ್ಳುತ್ತಿದ್ದರು.

English summary
Karnataka state government ambitious Indira canteen start from August 16th. Here is the experience of first day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X