• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಎಸಿಪಿ ಟೈಗರ್ ಅಶೋಕ್ ಕುಮಾರ್ ಗೆ ಎಸ್ ಎಲ್ ಭೈರಪ್ಪ ಸ್ಪೂರ್ತಿ

By ಭಾನುಪ್ರಕಾಶ್ ಎಲ್
|

ಬೆಂಗಳೂರಿನ ಯುವನಿಕಾ ಸಭಾಂಗಣ ಸಾಹಿತ್ಯಾಸಕ್ತರು ಹಾಗೂ ಅಭಿಮಾನಿಗಳಿಂದ ತುಂಬಿ ಹೋಗಿತ್ತು. ಸಮಾರಂಭದ ಕೇಂದ್ರ ಬಿಂದು, ಕೊಲೆ, ದರೋಡೆ, ಅಪಹರಣ, ಕ್ರೈಂ ಪ್ರಕರಣಗಳನ್ನ Sherlock Homes ಮಾದರಿಯಲ್ಲಿ ಪತ್ತೆ ಹಚ್ಚುತ್ತಿದ್ದ ರೌಡಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ the one and only ದಕ್ಷ ಹಾಗೂ ಪ್ರಾಮಾಣಿಕ ನಿವೃತ್ತ ಪೊಲೀಸ್ ಅಧಿಕಾರಿ "ಟೈಗರ್ ಬಿ ಬಿ ಆಶೋಕ್ ಕುಮಾರ್"

ತಮ್ಮ ವೃತ್ತಿ ಬದುಕಿನ ಹಲವಾರು ಕುತೂಹಲಕಾರಿ ವೃತ್ತಾಂತಗಳನ್ನು ಎರಡು ಪುಸ್ತಕಗಳ ರೂಪದಲ್ಲಿ ಹೊರತಂದಿರುವ ಟೈಗರ್ ಅಶೋಕ್ ಕುಮಾರ್, ಎರಡು ಪುಸ್ತಕಗಳಲ್ಲಿ ತನ್ನ ಎಪ್ಪತ್ತಕ್ಕೂ ಹೆಚ್ಚು ಅನುಭವಗಳನ್ನು ಓದುಗರೊಂದಿಗೆ ಹಂಚಿಕೊಂಡಿರುವುದು ವಿಶೇಷ.

'ಬುಲೆಟ್ ಸವಾರಿ' ಆಶೋಕ್ ಕುಮಾರ್ ಅವರ ಬೆಂಗಳೂರಿನ ವೃತ್ತಿ ಜೀವನಕ್ಕೆ ಸಂಬಂಧಿಸಿದ್ದರೆ, 'ಹುಲಿಯ ನೆನಪುಗಳು' ಪುಸ್ತಕ ಕಾಡಿನಲ್ಲಿ ನರಹಂತಕ ವೀರಪ್ಪನ್ ವಿರುದ್ದದ ಕಾರ್ಯಚರಣೆಯ ಅನುಭವದ ಬಗ್ಗೆ. ಎರಡೂ ಪುಸ್ತಕಗಳಲ್ಲಿ ಒಂದಕ್ಕಿಂತ ಒಂದು ರೋಚಕ, ಮನಕಲಕುವ ಸನ್ನಿವೇಶಗಳು ಹೇರಳವಾಗಿವೆ. (ಟೈಗರ್ ತಲೆ ಎತ್ತಲು ಬಾಲ ಸ್ಕೆಚ್ ಹಾಕಿದ್ದು)

ಇವರ ಪ್ರತೀ ಅಂಕಣ, ಅನುಭವ, ವೃತ್ತಾಂತಗಳು ಪ್ರತಿಯೊಬ್ಬ ನಾಗರೀಕನೂ ಮೈಗೂಡಿಸಿ ಕೊಳ್ಳಬೇಕಾದ ಸಾಮಾಜಿಕ ಹೊಣೆಗಾರಿಕೆ, ಜೀವನಮೌಲ್ಯ, ಜೊತೆಗೆ ಸಮಾಜದ ರಕ್ಷಣೆಗೆ ನಿಲ್ಲುವ ಪ್ರತಿಯೊಬ್ಬ ದಕ್ಷ ಪೋಲೀಸ್ ಅಧಿಕಾರಿಗೆ ಸಮಾಜದ ನಾಗರೀಕನು ನೀಡಬೇಕಾದ ಸಹಾಯ ಹಾಗೂ ಗೌರವದ ಬಗ್ಗೆ ಪರೋಕ್ಷವಾಗಿ ಮಾತಾನಾಡಿಸುತ್ತಾ ಓದುಗನ ಮನಸ್ಸಿನಲ್ಲಿ ನೆಲೆ ನಿಲ್ಲುತ್ತದೆ.

ಪುಸ್ತಕದಲ್ಲಿರುವ ಪ್ರತಿಯೊಂದು ಲೇಖನಗಳು ಸೂಪರ್, ಅದರಲ್ಲೂ ಅಶೋಕ್ ಕುಮಾರ್ ತಮ್ಮ ಜೀವನದ ಹಂಗನ್ನು ತೊರೆದು ಮುಂದೆ ನುಗ್ಗಿ ಭೇದಿಸಿದ ಪ್ರಕರಣಗಳು ನಿಜಕ್ಕೂ ಸಿನಿಮೀಯ ರೀತಿಯಲ್ಲಿದೆ. ಜೊತೆಗೆ ದಾಖಲಾಗಿರುವ ಎಲ್ಲ ವಿಷಯಗಳು ಕಟು ಸತ್ಯ ಕೂಡಾ.

ಬೆಂಗಳೂರಿನ ಸ್ವಪ್ನ ಬುಕ್ ಹೌಸ್ ಈ ಎರಡು ಪುಸ್ತಕಗಳನ್ನು ಹೊರತಂದಿದೆ. ಈ ಪುಸ್ತಕಗಳೊಂದಿಗೆ ನಿಮ್ಮ ಸಮಯವನ್ನು ಕಳೆಯಿರಿ, ಪುಸ್ತಕದ ಗುಂಗಿನಲ್ಲಿ ನೀವು ಹೊರಬರಲು ದಿನಗಳೇ ಕಳೆಯಬಹುದು. ಪುಸ್ತಕದಲ್ಲಿ ಅಚ್ಚಾದ ಟೈಗರ್ ಅಶೋಕ್ ಕುಮಾರ್ ಅವರ ಸಾಹಸಗಳ ಕೆಲವೊಂದು ಝಲಕ್, ಅಶೋಕ್ ಕುಮಾರ್ 'ಟೈಗರ್' ಆದ ಕಥೆಗಳನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಟೈಗರ್ ಬುಲೆಟ್ ಸವಾರಿಗೆ ಎಸ್ ಎಲ್ ಭೈರಪ್ಪ ಸ್ಪೂರ್ತಿ

ಟೈಗರ್ ಬುಲೆಟ್ ಸವಾರಿಗೆ ಎಸ್ ಎಲ್ ಭೈರಪ್ಪ ಸ್ಪೂರ್ತಿ

ಬುಲೆಟ್ ಸವಾರಿ ಪುಸ್ತಕದ ಬಗ್ಗೆ ಮಾತನಾಡಿದ ಅಶೊಕ್ ಕುಮಾರ್, ತಾವು ಈ ಪುಸ್ತಕ ಬರೆಯಲು ಪ್ರೇರಣೆ ಕನ್ನಡದ ಸರಸ್ವತಿ ಪುತ್ರ, ಸರಸ್ವತಿ ಸಮ್ಮಾನ್ ಪುರಸ್ಕೃತ ಸಾಹಿತಿ ಎಸ್ ಎಲ್ ಭೈರಪ್ಪವವರ ಪ್ರತಿಯೊಂದು ಕೃತಿಗಳು ಮತ್ತು ಅದರ ಪಾತ್ರಗಳು. ಇವೆಲ್ಲವೂ ನನ್ನಲ್ಲಿ ಒಬ್ಬ ಲೇಖಕನನ್ನು ಸೃಷ್ಟಿಸಿತು.

ಅಶೋಕ್ ಕುಮಾರ್

ಅಶೋಕ್ ಕುಮಾರ್ "ಟೈಗರ್" ಆಗಿದ್ದು ಹೇಗೆ?

ಅದು 1983-84 ನೇ ಇಸವಿ ಸರಣಿ ಸರ ಅಪಹರಣ ಪ್ರಕರಣ. ಅಕ್ಟೋಬರ್ 24ನೇ ತಾರೀಕು ನರಕ ಚತುರ್ದಶಿ, ಅಮವಾಸ್ಯೆ ಮುನ್ನಾ ದಿನ ಅಶೋಕ್ ಕುಮಾರ್ ತಮ್ಮ ಬುಲೆಟ್ ಮೋಟರ್ ಬೈಕಿನಲ್ಲಿ ನಡೆಸಿದ ಸಿನಿಮೀಯ ಚೇಸ್ ರಾಜಧಾನಿಯ ಚೋರರ ಸೆರೆಯಲ್ಲಿ ಅಂತ್ಯಗೊಂಡಿತ್ತು. ಈ ಪ್ರಕರಣಕ್ಕೆ ಪೊಲೀಸ್ ಇಲಾಖೆ ಇಟ್ಟಿದ್ದ ಹೆಸರು"ಅಪರೇಶನ್ ಟೈಗರ್". ಅಂದಿನಿಂದ ಅಶೋಕ್ ಕುಮಾರ್ "ಟೈಗರ್ ಅಶೋಕ್ ಕುಮಾರ್" ಎಂದು ಮನೆಮಾತಾದರು.

ಟೈಗರ್ ಮತ್ತು ಕನ್ನಡ ಸಿನಿಮಾ

ಟೈಗರ್ ಮತ್ತು ಕನ್ನಡ ಸಿನಿಮಾ

ಅಶೋಕ್ ಕುಮಾರ್ ಅನುಭವ ಆಧರಿಸಿ ಕನ್ನಡದಲ್ಲಿ ಹಲವಾರು ಸಿನಿಮಾಗಳು ನಿರ್ಮಾಣ ಗೊಂಡಿವೆ. ದೇವರಾಜ್ ಅಭಿನಯದ ಸರ್ಕಲ್ ಇನ್ಸಪೆಕ್ಟರ್, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಾ ನಲ್ಲೆ ಮಧುಚಂದ್ರಕೆ,ಇತ್ತೀಚಿನ ಮೈನಾ, ಹೀಗೆ ಹಲವಾರು..

ಅಶೋಕ್ ಕುಮಾರ್ ಗೆ ಬಂದ ಪ್ರಶಸ್ತಿ ಮತ್ತು ಪುರಸ್ಕಾರಗಳು

ಅಶೋಕ್ ಕುಮಾರ್ ಗೆ ಬಂದ ಪ್ರಶಸ್ತಿ ಮತ್ತು ಪುರಸ್ಕಾರಗಳು

1986- ಶೌರ್ಯ ಪದಕ [president of indian tallent gold medal]
1998- ಪೊಲೀಸ್ ವಿಶಿಷ್ಟ ಸೇವಾ ಪದಕ / ಪೊಲೀಸ್ ಶ್ಲಾಘನೀಯ ಸೇವಾ ಪದಕ
2011- ಕೆಂಪೇಗೌಡ ಪ್ರಶಸ್ತಿ

ಇಲಾಖೆಯಿಂದ 5 ರೂ ಬಹುಮಾನ

ಇಲಾಖೆಯಿಂದ 5 ರೂ ಬಹುಮಾನ

ಬೆಂಗಳೂರಿನ ಮಾದಕ ದ್ರವ್ಯ ವ್ಯಸನಿ ಹುಡುಗನೊಬ್ಬನನ್ನು ಸರಿ ದಾರಿಗೆ ತರಲು ಹೋದಾಗ, ಬ್ರೌನ್ ಶುಗರ್ ಮಾರಾಟ ಜಾಲ ಬೆಳಕಿಗೆ ಬಂತು. ಮಫ್ತಿಯಲ್ಲಿ ಕಾರ್ಯಾಚರಣೆ ನಡೆಸಿ, ಮೂವರು ಆರೋಪಿಗಳನ್ನು ಹಿಡಿದು FIR ದಾಖಲಿಸಬೇಕು ಎನ್ನುವಷ್ಟರಲ್ಲಿ ಹಿರಿಯ ಅಧಿಕಾರಿಯೊಬ್ಬರು 2 ಲಕ್ಷ ರೂಪಾಯಿ ಮತ್ತು ಕಾರು ಕೊಡಿಸುವ ಅಮಿಷವೊಡ್ಡಿದರು. ಅವರ ಮಾತನ್ನು ಧಿಕ್ಕರಿಸಿ, ಕೋಟಿ ಬೆಲೆ ಬಾಳುವ ಬ್ರೌನ್ ಶುಗರ್ ಹಿಡಿದಿದ್ದಕ್ಕೆ ಮತ್ತೊಬ್ಬ ಅಧಿಕಾರಿ ಐದು ರೂಪಾಯಿ ಬಹುಮಾನಕ್ಕೆ ಶಿಫಾರಸು ಮಾಡಿದರು.

ಬಾಳ ಸಂಗಾತಿಗೆ ವೈಧವ್ಯದ ಪಾಠ

ಬಾಳ ಸಂಗಾತಿಗೆ ವೈಧವ್ಯದ ಪಾಠ

STF ನಲ್ಲಿ ಸೇವೆ ಸಲ್ಲಿಸುವಾಗ ಎಂ ಎಂ ಹಿಲ್ಸಿಗೆ ಹೋದವರು ಮನೆಗೆ ವಾಪಸ್ ಬರುತ್ತಾರೋ ಇಲ್ಲವೋ ಎನ್ನುವ ದುಗುಡವನ್ನು ಪತ್ನಿಯ ಮುಖಭಾವದಲ್ಲಿ ಗುರುತಿಸಿ ಭಾವುಕರಾಗುವ ಆಶೋಕ್ ಕುಮಾರ್, ಮುಂದಿನ ಚಿತ್ರಣ ಕಣ್ಮುಂದೆ ಬಂದು, ಪತ್ನಿಗೆ ವೈಧವ್ಯದ ಪಾಠ ಹೇಳಿಕೊಡುತ್ತಾರೆ. ಇದು ನಿಜಕ್ಕೂ ಅಪರೂಪದ ಸತ್ಯ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Book review of Bullet Savari, Huliya Nenapugalu written by B B Ashok Kumar. How EX ACP B B Ashok Kumar becomes "Tiger Ashok Kumar".

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more