e-Khata: ಇ-ಖಾತಾ ಹೇಗೆ ಕಾರ್ಯನಿರ್ವಹಿಸುತ್ತದೆ, ತಪ್ಪುಗಳಾದರೆ ಎಲ್ಲಿ ಸರಿಪಡಿಸಿಕೊಳ್ಳಬೇಕು ?

ಕರ್ನಾಟಕ ಸರ್ಕಾರವು ಆಸ್ತಿಗಳ ನೋಂದಣಿಗೆ ಇ - ಖಾತಾ ಕಡ್ಡಾಯ ಮಾಡಿದೆ. ಆದರೆ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬೇರೆ ಬೇರೆ ಮಾದರಿಯ ಇ - ಖಾತಾ ತಂತ್ರಾಂಶ ವ್ಯವಸ್ಥೆ ಇದೆ. ಅಲ್ಲದೆ ಬೆಂಗಳೂರಿನಲ್ಲೇ ವಿವಿಧ ಆಸ್ತಿಗಳಿಗೆ ಇ - ಖಾತಾ ತಂತ್ರಾಂಶದಲ್ಲೂ ವ್ಯತ್ಯಾಸ ಇದೆ. ನೋಂದಣಿಯ ಸಮಯದಲ್ಲಿ ಇ - ಖಾತಾ ಯಾವ ರೀತಿ ನಿರ್ವಹಿಸುತ್ತದೆ. ಇ ಖಾತಾದಲ್ಲಿ ಯಾವ ರೀತಿಯ ಮಾದರಿಗಳಿವೆ. ಇ - ಖಾತಾ ಮಾಡಿಸಿಕೊಳ್ಳುವುದರ ಉದ್ದೇಶವೇನು ಬೆಂಗಳೂರಿನಲ್ಲಿ ಯಾವ ಆಸ್ತಿಗೆ ಯಾವ ರೀತಿಯ ಖಾತಾಗಳನ್ನು ನೀಡಲಾಗುತ್ತದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ರಾಜ್ಯದಲ್ಲಿ ಆಸ್ತಿಗಳನ್ನು ನೋಂದಣಿ ಮಾಡಿಸುವುದಕ್ಕೆ ಇದೀಗ ಇ ಖಾತಾ ಕಡ್ಡಾಯ ಮಾಡಲಾಗಿದೆ. ಇ - ಖಾತಾ ಪದ್ಧತಿ ಕಡ್ಡಾಯ ಮಾಡಿದ ಕೆಲವೇ ದಿನಗಳಲ್ಲಿ ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ ಕೋಟ್ಯಾಂತರ ರೂಪಾಯಿ ಹರಿದು ಬಂದಿದೆ. ಬೆಂಗಳೂರಿನಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಯ ಹೊರಗಿದ್ದ ಆಸ್ತಿಗಳನ್ನು ಇ ಖಾತಾದ ಮೂಲಕ ತೆರಿಗೆ ವ್ಯಾಪ್ತಿಗೆ ಸೇರಿಸಲಾಗಿದೆ.

How does e-Khata work and where can correct any errors

ಇ- ಖಾತಾ ಎಂದರೇನು: ಅತ್ಯಂತ ಸರಳವಾಗಿ ಹೇಳುವುದಾದರೆ, ಇ ಖಾತಾ ಎನ್ನುವುದು ಆಸ್ತಿ / ಸ್ವತ್ತಿನ ಗುರುತಿನ ಸಂಖ್ಯೆಯಾಗಿದೆ. ನಿಮ್ಮ ಸ್ಥಿರಾಸ್ತಿಯನ್ನು (ಜಾಗ) ನಿಖರವಾಗಿ ಗುರುತಿಸಬಲ್ಲ. ಸ್ವತ್ತಿನ ಗುರುತಿನ ಸಂಖ್ಯೆ (ಪಿಐಡಿ)ಯನ್ನು ಹೊಂದಿರುವ ಡಿಜಿಟಲ್‌ ದಾಖಲೆಯಾಗಿದೆ.

ಇ - ಖಾತಾದಲ್ಲಿದೆ ಹಲವು ಮಾದರಿ

ರಾಜ್ಯ ಸರ್ಕಾರದ ಇ ಖಾತಾ ಎನ್ನುವ ಪರಿಕಲ್ಪನೆ ಒಂದೇ ಆಗಿದ್ದರು. ಇ ಖಾತಾದ ಒಂದೊಂದು ಭಾಗದಲ್ಲೂ ಭಿನ್ನವಾಗಿದೆ. ಗ್ರಾಮೀಣ ಹಾಗೂ ನಗರ ಭಾಗಗಳಿಗೆ ಭಿನ್ನವಾದ ಖಾತಾಗಳನ್ನು ನೀಡಲಾಗುತ್ತದೆ.

e- swathu ಇ- ಸ್ವತ್ತು: ಗ್ರಾಮೀಣ ಭಾಗದ ಸ್ವತ್ತುಗಳಿಗೆ ಇ - ಸ್ವತ್ತು ಎನ್ನುವ ಖಾತಾ ತಂತ್ರಾಂಶ ರೂಪದಲ್ಲಿ ಇ - ಖಾತಾ ನೀಡಲಾಗುತ್ತದೆ. ಗ್ರಾಮೀಣ ಭಾಗದಲ್ಲಿ ಇ - ಖಾತಾಗಳಿಗೆ ಗ್ರಾಮ ಪಂಚಾಯಿತಿಗಳು ಖಾತಾ ವಿಲೇವಾರಿ ಕೇಂದ್ರಗಳಾಗಿರುತ್ತವೆ.

How does e-Khata work and where can correct any errors

e- aasthi ಇ ಆಸ್ತಿ: ಇನ್ನು ಕರ್ನಾಟಕದ ನಗರ ಪ್ರದೇಶದ ಸ್ವತ್ತುಗಳಿಗೆ ಇ - ಆಸ್ತಿ ಖಾತಾ ರೂಪದಲ್ಲಿ ಇ ಖಾತಾಗಳನ್ನು ನೀಡಲಾಗುತ್ತದೆ. ನಗರ ಸ್ಥಳೀಯ ಸಂಸ್ಥೆ (ಯುಎಲ್‌ಬಿ)ಗಳಲ್ಲಿ ಖಾತಾಗಳಿಗೆ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲಾಗುತ್ತದೆ.

bbmp e-aasthi ಬಿಬಿಎಂಪಿ ಇ - ಆಸ್ತಿ: ಬೆಂಗಳೂರಿನಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ಇ - ಆಸ್ತಿ ಖಾತಾ ರೂಪದಲ್ಲಿ ಇ - ಖಾತಾಗಳನ್ನು ಕೊಡಲಾಗುತ್ತದೆ. ಇ - ಖಾತಾ ವಿಲೇವಾರಿಗೆ ಬಿಬಿಎಂಪಿಯು ಖಾತಾ ವಿಲೇವಾರಿ ಕೇಂದ್ರವಾಗಿದೆ.

ulms (Bda) ಬಿಡಿಎ: ಇನ್ನು ಬಿಡಿಎ ವ್ಯಾಪ್ತಿಯ ಸ್ವತ್ತುಗಳಿಗೆ ಯುಎಲ್‌ಎಂಎಸ್‌ ಮೂಲಕ ಇ - ಖಾತಾಗಳನ್ನು ನೀಡಲಾಗುತ್ತದೆ.

ಕಾವೇರಿ ತಂತ್ರಾಂಶಗಳ ಸಂಯೋಜನೆ: ಇನ್ನು ರಾಜ್ಯ ಸರ್ಕಾರವು ಈ ನಾಲ್ಕು ತಂತ್ರಾಂಶಗಳನ್ನು ಕಾವೇರಿ ತಂತ್ರಾಂಶಕ್ಕೆ ಸಂಯೋಜನೆ ಮಾಡಿದೆ. ಸ್ಥಿರಾಸ್ತಿಗಳ ನೋಂದಣಿಗೆ ಅರ್ಜಿ ಸಲ್ಲಿಸಲು ಕಾವೇರಿ 2.0 ತಂತ್ರಾಂಶದಲ್ಲಿ ಮಾಹಿತಿಯನ್ನು ನೀಡುವಾಗ / ಮಾಹಿತಿ ನಮೂದಿಸುವಾಗ ಸ್ವತ್ತಿನ ಪಿಐಡಿ ಸಂಖ್ಯೆಯನ್ನು ನಮೂದಿಸಿದ ನಂತರ, ನಾಲ್ಕು ಪ್ರಮುಖ ತಂತ್ರಾಂಶದಿಂದ ನಿಮ್ಮ ಆಸ್ತಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ.

ಆಯಾ ವಿಭಾಗದಲ್ಲಿ ಸರಿಪಡಿಸಿಕೊಳ್ಳಿ: ಇನ್ನು ಆಸ್ತಿ ದಾಖಲೆ ಪತ್ರ (ದಸ್ತಾವೇಜು) ನೋಂದಣಿಗೆ ಅರ್ಜಿ ಸಲ್ಲಿಸುವಾಗ ಇ - ಖಾತಾಗೆ ಸಂಬಂಧಿಸಿದ ಯಾವುದಾದರೂ ಸಮಸ್ಯೆಗಳು ಉಂಟಾದರೆ. ಖಾತಾ ವಿತರಣಾ ಸಂಸ್ಥೆಯನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬಹುದು ಎಂದು ರಾಜ್ಯ ಸರ್ಕಾರ ಮಾಹಿತಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+