Honey Trap: ಹನಿ ಟ್ರ್ಯಾಪ್ ಪ್ರಮುಖ ಆರೋಪಿ ನಯನಾ ಬಂಧನ

ಬೆಂಗಳೂರು ಜನವರಿ 18: ಡಿಸೆಂಬರ್‌ 9ನೇ ತಾರೀಖು 57 ವರ್ಷದ ಸಿವಿಲ್ ಕಂಟ್ರ್ಯಾಕ್ಟರ್ ರಂಗನಾಥ್‌ ಅನ್ನು ಮನೆಗೆ ಕರೆದುಕೊಂಡು ಹೋಗಿ, 20 ವರ್ಷದ ನಯನಾ ಜಾಲಿಯಾಗಿದ್ದಾಗ ಆಕೆಯ ಗ್ಯಾಂಗ್ ಪೊಲೀಸ್ ಸೋಗಿನಲ್ಲಿ ಬಂದು ವ್ಯಭಿಚಾರ ನಡೆಸುತ್ತಿದ್ದೀರಿ ಎಂದು ಹೇಳಿ, ಸಿವಿಲ್ ಕಂಟ್ರ್ಯಾಕ್ಟರ್ ಬಳಿ ನಗದು ಹಾಗೂ ಚಿನ್ನಾಭರಣ ಕಿತ್ತುಕೊಂಡು ಕಳುಹಿಸಿತ್ತು. ಈ ಗ್ಯಾಂಗ್‌ನ ಎಲ್ಲಾ ಆರೋಪಿಗಳನ್ನ ಬಂಧಿಸಿದ ಪೊಲೀಸರು ಸದ್ಯ ಪ್ರಮುಖ ಆರೋಪಿ ನಯನಾಳನ್ನ ಬಂಧಿಸಿದ್ದಾರೆ.

20 ವರ್ಷದ ಹನಿ ಟ್ರ್ಯಾಪ್ ನಯನಾ ಕಣ್‌ ಸನ್ನೆಗೆ ಬಿದ್ದ ರಂಗನಾಥ್ ಪೊಲೀಸ್ ಠಾಣೆಗೆ ಹೋದಾಗ ತಾವು ಮೋಸ ಹೋಗಿರುವುದು ಗೊತ್ತಾಗಿ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು ಸುಲಿಗೆ ಗ್ಯಾಂಗ್ ನ ಸಂತೋಷ್, ಅಜಯ್, ಜಯರಾಜ್ ಎಂಬುವರನ್ನ ಬಂಧಿಸಿದ್ದರು. ಆದರೆ ಪೊಲೀಸರ ಸೋಗಿನಲ್ಲಿ ಹನಿಟ್ರ್ಯಾಪ್ ಮಾಡಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ನಯನಾಳನ್ನ ಸದ್ಯ ಪೊಲೀಸರು ಬಂಧಿಸಿದ್ದಾರೆ.

honey trapping accuse nayana arrested by bengaluru byadarahalli police

ಪ್ರಕರಣದ ಪ್ರಮುಖ ಆರೋಪಿ ನಯನ ಪ್ರಕರಣ ದಾಖಲಾದಗಿನಿಂದ ಬೆಂಗಳೂರಿನ ಬೇರೆ ಬೇರೆ ಕಡೆ ತಲೆಮರೆಸಿಕೊಂಡಿದ್ದಳು. ಸದ್ಯ ಆಕೆಯನ್ನು ಬಂಧಿಸಿದ ಪೊಲೀಸರು ಆಕೆ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ಬಳಿಕ ಒಬ್ಬರಿಗೆ ಮಾತ್ರ ಈ ರೀತಿ ಹನಿಟ್ರ್ಯಾಪ್ ಮಾಡಿರೋದು ಬೆಳಕಿಗೆ ಬಂದಿದೆ.

ಏನಿದು ಪ್ರಕರಣ?

57 ವರ್ಷದ ಸಿವಿಲ್ ಕಂಟ್ರ್ಯಾಕ್ಟರ್ ರಂಗನಾಥ್‌ ಅನ್ನು 20 ವರ್ಷದ ನಯನ ಪರಿಚಯ ಮಾಡಿಕೊಂಡಿದ್ದಳು. ಹೀಗೆ ಪರಿಚಯವಾದ ರಂಗನಾಥ್‌, ಆಕೆ ಕೇಳಿದ್ಲು ಅಂತ ಐದು ಹತ್ತು ಸಾವಿರ ಹಣವನ್ನ ಕೊಡ್ತಿದ್ದರು.

honey trapping accuse nayana arrested by bengaluru byadarahalli police

ಸಿವಿಲ್‌ ಕಂಟ್ರಾಕ್ಟರ್ ಆಗಿರೋ ವ್ಯಕ್ತಿಗೆ ಬಲೆ ಬೀಸಿದ್ದ ಈ ಸುರಸುಂದರಿ ಮೊದಲು ಟೀ‌ ಕುಡಿದುಕೊಂಡು ಹೋಗಿ ಅಂತ ಮನೆಗೆ ಕರೆದಿದ್ದಳು. ಈಕೆಯ ಸ್ಮೈಲಿಗೆ ಕರಗಿದ ರಂಗನಾಥ್‌ ಡಿಸೆಂಬರ್‌ 9ನೇ ತಾರೀಖು ಸೀದಾ ಅವಳ ಸ್ಕೂಟಿ ಫಾಲೋ ಮಾಡಿಕೊಂಡು ಮನೆಗೆ ಹೋಗಿದ್ದ. ಆಕೆಯ ಮನೆಯಲ್ಲಿದ್ದಾಗ ಪೊಲೀಸ್ರು ಅಂತ ಎಂಟ್ರಿ ಕೊಟ್ಟಿದ್ದ ಅಪರಿಚಿತರು, ವ್ಯಭಿಚಾರ ನಡೆಸ್ತಿದ್ದಾರೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡಿದ್ದರು.

ನಂತರ ಹಲ್ಲೆ ಮಾಡಿ ಬಟ್ಟೆ ಬಿಚ್ಚಿಸಿ ಫೋಟೊ ತೆಗೆದುಕೊಂಡಿದ್ದಾರೆ. ಕೆಳಗಡೆ ಮೇಡಂ ಇದಾರೆ ಇಲ್ಲೆ ಸೆಟಲ್ ಮಾಡ್ಕೋ ಎಂದು ರಂಗನಾಥ್‌ಗೆ ಬೆದರಿಕೆ ಕೂಡ ಹಾಕಿದ್ದಾರೆ. ಇದಕ್ಕೆ ಹೆದರಿದ ರಂಗನಾಥ್‌ 29 ಸಾವಿರ ನಗದು, ಫೋನ್ ಪೇನಲ್ಲಿ 26ಸಾವಿರ ಹಾಗೂ ಮೈ ಮೇಲಿದ್ದ ಸುಮಾರು 5ಲಕ್ಷದ ಚಿನ್ನದ ಸರ ಕೊಟ್ಟಿದ್ದಾರೆ.

ಅಲ್ಲದೆ ಕೈಯಲ್ಲಿ ಇದ್ದ ಉಂಗುರ, ಬ್ರಾಸ್ ಲೇಟ್ ಕಿತ್ತುಕೊಂಡು ಅಲ್ಲಿಂದ ಪೊಲೀಸ್ ಸೋಗಿನಲ್ಲಿ ಇದ್ದ ಆರೋಪಿಗಳು ಎಸ್ಕೇಪ್ ಆಗಿದ್ದರು. ಅನುಮಾನ ಬಂದು ಪೊಲೀಸ್ ಠಾಣೆಗೆ ಬಂದ ರಂಗನಾಥ್‌ ವಿಚಾರಿಸಿದಾಗ ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಆ ಬಳಿಕ ಬ್ಯಾಡರಹಳ್ಳಿ ಠಾಣೆಗೆ ಕಂಟ್ರಾಕ್ಟರ್ ದೂರು ನೀಡಿದ್ದು ದೂರಿನನ್ವಯ ಆರೋಪಿಗಳನ್ನು ಸದ್ಯ ಬಂಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+