ರೈಲು ಪ್ರಯಾಣಿಕರ ಗಮನಕ್ಕೆ: ಬೆಂಗಳೂರಿನ ಕೆಲವು ರೈಲುಗಳ ಸೇವೆ ವಿಸ್ತರಣೆ, ಸಂಚಾರ ವಿಳಂಬ ರೈಲಿನ ವೇಳಾಪಟ್ಟಿ
ಬೆಂಗಳೂರು: ಹೋಳಿ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ಹೊರಡುವ ಕೆಲವು ವಿಶೇಷ ರೈಲುಗಳ ಕಾರ್ಯಾಚರಣೆ ಅವಧಿ ವಿಸ್ತರಣೆ ಮಾಡಲಾಗಿದೆ. ಒಂದು ಸಾಪ್ತಾಹಿಕ ರೈಲಿನ ನಿಲುಗಡೆ ಮುಂದುವರಿಸಲಾಗಿದೆ. ಅಲ್ಲದೇ ನೀಲಗಿರಿ ರೋಡ್ ಯಾರ್ಡ್‌ನಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಂದೆರಡು ರೈಲುಗಳನ್ನು ನಿಯಂತ್ರಣ ಮಾಡಿದ್ದು, ಸಂಚಾರ ಸಮಯವನ್ನು ಮರುಹಂಚಿಕೆ ಮಾಡಲಾಗಿದೆ, ಇದರಿಂದ ರೈಲು ಸಂಚಾರ ವಿಳಂಬವಾಗಲಿದೆ ಎಂದು ದಕ್ಷಿಣ ಪೂರ್ವ ರೈಲ್ವೆ ತಿಳಿಸಿದೆ.
ಯಾವ ನಿಲ್ದಾಣಗಳಲ್ಲಿ ಯಾವ ರೈಲು ನಿಲ್ಲಲಿದೆ?
1. ಕಂಬಂ ನಿಲ್ದಾಣದಲ್ಲಿ ಯಶವಂತಪುರ-ಮಚಲಿಪಟ್ಟಣಂ ಕೊಂಡವೀಡು ಟ್ರೈ-ವೀಕ್ಷಿ ಎಕ್ಸ್‌ಪ್ರೆಸ್ ರೈಲು (17212)
2. ಅನಂತಪುರ ನಿಲ್ದಾಣದಲ್ಲಿ ಯಶವಂತಪುರ-ಲಕ್ಕೆ ಸಾಪ್ತಾಹಿಕ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು (22683)
3. ನಗರೂರು ರೈಲು ನಿಲ್ದಾಣದಲ್ಲಿ ಯಶವಂತಪುರ-ನಾಂದೇಡ್ ಎಕ್ಸ್‌ಪ್ರೆಸ್ ರೈಲು (16593) ಮತ್ತು ನಾಂದೇಡ್-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್
ರೈಲು (16594) ಗಳು ನಿಲುಗಡೆಯನ್ನು ಮುಂದುವರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿಯಂತ್ರಣ ಮತ್ತು ಮರುಸಮಯ ನಿಗದಿತ ರೈಲುಗಳು
2026 ಫೆಬ್ರವರಿ 15 ರಂದು ಪ್ರಯಾಣಿಸುವ ಹೌರಾ-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲು (12245) ಅನ್ನು ದಕ್ಷಿಣ ಪೂರ್ವ ರೈಲ್ವೆ ವಲಯದಲ್ಲಿ 30 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಫೆ.14 ರಂದು ಸಂಚರಿಸುವ ಎಸ್‌ಎಂವಿಟಿ ಬೆಂಗಳೂರು-ಕಾಮಾಕ್ಯ ಎಕ್ಸ್‌ಪ್ರೆಸ್ ರೈಲನ್ನು (12551) ಎಸ್‌ಎಂವಿಟಿ ಬೆಂಗಳೂರಿನಿಂದ 60 ನಿಮಿಷಗಳ ಕಾಲ ಮರುಹಂಚಿಕೆ ಮಾಡಲಾಗಿದೆ. ದಕ್ಷಿಣ ಪೂರ್ವ ರೈಲ್ವೆಯಲ್ಲಿ 120 ನಿಮಿಷಗಳು ಹಾಗೂ ದಕ್ಷಿಣ ಮಧ್ಯ ರೈಲ್ವೆ ಮತ್ತು ಪೂರ್ವ ಕರಾವಳಿ ರೈಲ್ವೆ ವ್ಯಾಪ್ತಿಗಳಲ್ಲಿ ತಲಾ 40 ನಿಮಿಷಗಳ ಕಾಲ ನಿಯಂತ್ರಿಸಲಾಗಿದೆ. ಅಂದರೆ ತಡವಾಗಿ ಸಂಚಾರ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ರೈಲುಗಳ ಸಂಚಾರ ಸೇವೆ ವಿಸ್ತರಣೆ, ವೇಳಾಪಟ್ಟಿ
2026 ಹೋಳಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ವಿಶಾಖಪಟ್ಟಣಂ - ಎಸ್‌ಎಂವಿಟಿ ಬೆಂಗಳೂರು ನಡುವಿನ ವಿಶೇಷ ರೈಲು ಸೇವೆಗಳನ್ನು ವಿಸ್ತರಿಸಿ ಪೂರ್ವ ಕರಾವಳಿ ರೈಲ್ವೆ ಮಾಹಿತಿ ನೀಡಿದೆ.
1. ವಿಶಾಖಪಟ್ಟಣದಿಂದ ಪ್ರತಿ ಭಾನುವಾರ ಹೊರಡುವ ವಿಶಾಖಪಟ್ಟಣಂ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (08581) ಸೇವೆ ಫೆಬ್ರವರಿ 22ರಂದು ಅಂತ್ಯಗೊಳ್ಳಬೇಕಿತ್ತ. ಹೊಸ ನಿರ್ಧಾರದನ್ವಯ ಮಾರ್ಚ್ 1 ರಿಂದ 29ರವರೆಗೂ ಕಾರ್ಯಾಚರಣೆ ಮಾಡಲಾಗುತ್ತಿದೆ.
2. ಎಸ್‌ಎಂವಿಟಿ ಬೆಂಗಳೂರಿನಿಂದ ಪ್ರತಿ ಸೋಮವಾರ ಹೊರಡುವ ಎಸ್‌ಎಂವಿಟಿ ಬೆಂಗಳೂರು-ವಿಶಾಖಪಟ್ಟಣಂ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು (08582) ಸೇವೆ ಫೆಬ್ರವರಿ 23 ಅಂತ್ಯಗೊಳಿಸದೇ ಮಾರ್ಚ್ 2 ರಿಂದ 30 ರವರೆಗೂ ಸೇವೆ ವಿಸ್ತರಣೆ ಮಾಡಲಾಗಿದೆ.
3. ದಾನಾಪುರ-ಎಸ್‌ಎಂವಿಟಿ ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲಿನ (03251) ಸೇವಾ ಅವಧಿಯನ್ನು ಮಾರ್ಚ್ 5 ರಿಂದ ಮಾರ್ಚ್ 31ರವರೆಗೆ ಸೇವೆ ನೀಡುವಂತೆ ಅವಧಿ ವಿಸ್ತರಿಸಲಾಗಿದೆ.
4. ಎಸ್‌ಎಂವಿಟಿ ಬೆಂಗಳೂರು-ದಾನಾಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ರೈಲಿನ (03252) ಸೇವೆಯನ್ನು ಮಾರ್ಚ್ 7 ರಿಂದ ಏಪ್ರಿಲ್ 2ರವರೆಗೆ ಮುಂದುವರಿಸಲಾಗಿದೆ.












Click it and Unblock the Notifications