ಕ್ರೇನ್ ಕುಸಿದು ಸಾವನ್ನಪ್ಪಿದ ಕುಟುಂಬಗಳಿಗೆ 50 ಲಕ್ಷ ಪರಿಹಾರ

ಆಗಸ್ಟ್ 03: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಬೃಹತ್ ಗಾತ್ರದ ಕ್ರೇನ್ ಕುಸಿದು ಸುಮಾರು 11 ಜನರು ಮೃತಪಟ್ಟಿದ್ದರು. ಈ ಅವಘಡದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ 50 ಲಕ್ಷ ಪರಿಹಾರ ನೀಡುವುದಾಗಿ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆ ಘೋಷಿಸಿದೆ.

Recommended Video

      ಗೃಹ ಮಂತ್ರಿಗೆ ಕೊರೋನ, ಯಾರನ್ನು ಬಿಡದ ಕೋರೋನ.!! | Oneindia Kannada

      ಕುಟುಂಬಗಳಿಗೆ ತಲಾ 50 ಲಕ್ಷ ಹಾಗೂ ಕುಟುಂಬ ಒಬ್ಬ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ಶರತ್ ಬಾಬು ತಿಳಿಸಿದ್ದಾರೆ.

      hindusthan-shipyard-limited-to-give-50-lakhs-exgratia-to-family-members-of-the-deceased-in-crane-inc

      ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ವ್ಯಾಪ್ತಿ ಪ್ರದೇಶದಲ್ಲಿ ನಡೆಯುತ್ತಿದ್ದ ಕಾಮಗಾರಿ ವೇಳೆ ನಿಯಂತ್ರಣ ತಪ್ಪಿ ಭಾರಿ ಗಾತ್ರದ ಕ್ರೇನ್ ಕುಸಿದಿ ಬಿದ್ದಿತ್ತು. ಅದರ ಸುತ್ತ ಹಾಗೂ ಕೆಳಗೆ ಕೆಲಸ ಮಾಡುತ್ತಿದ್ದ ಕಾರ್ಮಿಕರು ಮೃತಪಟ್ಟಿದ್ದರು. ಕೆಲವರಿಗೆ ಗಾಯಗಳಾಗಿವೆ.

      ಅಪಘಾತದ ಸ್ಥಳಕ್ಕೆ ಜಿಲ್ಲಾಧಿಕಾರಿ ವಿ.ವಿನಯ್ ಚಂದ್ ಭೇಟಿ ನೀಡಿ ಘಟನೆಗೆ ಬಗ್ಗೆ ವಿಚಾರಿಸಿದರು. ಈ ದುರ್ಘಟನೆಗೆ ಸರಿಯಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+