Himanta Biswa Sarma: ಬೆಂಗಳೂರಿನಲ್ಲಿ ಅಸ್ಸಾಮಿಗರಿಗಾಗಿ ಹೊಸ ಯೋಜನೆ; ಸಿಎಂ ಹಿಮಂತ ಬಿಸ್ವ ಶರ್ಮಾ ಟ್ವೀಟ್‌ಗೆ ಕನ್ನಡಿಗರ ಆಕ್ರೋಶ
Himanta Biswa Sarma: ಬೆಂಗಳೂರು ನಗರದಲ್ಲಿನ ಹೊಸ ಸೇವೆಯ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರು ಮಾಡಿರುವ ಟ್ವೀಟ್‌ವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಮಾಡಿರುವ ಟ್ವೀಟ್ ಕನ್ನಡಿಗರ ಆಕ್ರೋಕ್ಕೆ ಕಾರಣವಾಗಿದೆ.
ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು, ಶೀಘ್ರದಲ್ಲೇ ನಾನು ಬೆಂಗಳೂರಿನಲ್ಲಿ ಹೊಸ ಅಸ್ಸಾಂ ಹೌಸ್ ಉದ್ಘಾಟಿಸುತ್ತೇನೆ. ಇದು ಅಸ್ಸಾಂನ ಜನರಿಗೆ ತಮ್ಮ ಮನೆಯಂತೆಯೇ ಇರಬಹುದಾದ ಸ್ಥಳವಾಗಲಿದೆ. ಅಸ್ಸಾಂನ ವಿದ್ಯಾರ್ಥಿಗಳು, ರೋಗಿಗಳು, ವೃತ್ತಿಪರರು ಮತ್ತು ಇತರರನ್ನು ಬೆಂಬಲಿಸಲು ನಾವು ದೇಶಾದ್ಯಂತ ಅಂತಹ ಸೌಲಭ್ಯಗಳನ್ನು ನಿರ್ಮಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಆದರೆ, ಈ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸಿ.ಎಸ್.ಲಕ್ಷ್ಮಿಶಾ ಎನ್ನುವವರು, ಅಸ್ಸಾಂನ ಯುವಕರಿಗೆ ಉದ್ಯೋಗ ಒದಗಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ. ರೋಹಿತ್ ಸಿಂಹಾ ಅವರು, ಒಂದೇ ಒಂದು ಸಲಹೆ, ಅಸ್ಸಾಂ ಭವನದಲ್ಲಿ ಕನ್ನಡ ಬೋಧನಾ ಅವಧಿಗಳನ್ನು ಪ್ರಾರಂಭಿಸಿ, ಇದರಿಂದ ನಿಮ್ಮ ಜನರು ಇಲ್ಲಿಗೆ ಬಂದಾಗ ರಾಜ್ಯ ಭಾಷೆಯನ್ನು ಕಲಿಯುತ್ತಾರೆ ಮತ್ತು ಅದರಲ್ಲಿ ಸಂವಹನ ನಡೆಸುತ್ತಾರೆ ಮತ್ತು ಹಿಂದಿ ನಮ್ಮ ಭಾಷೆಯಲ್ಲದ ಕಾರಣ ಅವರು ಕಷ್ಟಪಡುವ ಅವಶ್ಯಕತೆ ಇರುವುದಿಲ್ಲ ಎಂದಿದ್ದಾರೆ.
ಗಂಭೀರ ಸಲಹೆ: ದಯವಿಟ್ಟು ನಿಮ್ಮ ರಾಜ್ಯದಲ್ಲಿ ನಿಮ್ಮ ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲು ಕೆಲಸ ಮಾಡಿ ಎಂದು ಕನ್ನಡಿಗರು ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಸ್ಸಾಂ ಭವನ ಸ್ಥಾಪಿಸುವ ಬದಲು ಅಸ್ಸಾಂನಲ್ಲಿ ಕೈಗಾರಿಕೆಗಳನ್ನು ನಿರ್ಮಿಸಿ ಉದ್ಯೋಗಗಳನ್ನು ಸೃಷ್ಟಿಸೋಣ, ವಲಸೆಯನ್ನು ಪ್ರೋತ್ಸಾಹಿಸೋಣ ಅಂತಲೂ ಕೆಲವರು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕಾಳೆದಿದ್ದಾರೆ.
ಇವರು ಜನಸಂಖ್ಯಾ ಬದಲಾವಣೆಯೊಂದಿಗೆ ಕರ್ನಾಟಕವನ್ನು ಉತ್ತರ ಭಾರತದ ರಾಜ್ಯವನ್ನಾಗಿ ಮಾಡಲಿದ್ದಾರೆ ಅಂತಲೂ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಎಲ್ಲಾ ರಾಜ್ಯಗಳು ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿಕೊಂಡರೆ, ಕರ್ನಾಟಕ ಎಲ್ಲಿಗೆ ಹೋಗಬೇಕು? ಇದು ಸಾಮೂಹಿಕ ವಲಸೆ ನೀತಿಯಾಗಿದ್ದು, ಇದು ಕರ್ನಾಟಕದ ಅಭಿವೃದ್ಧಿಗೆ ಹಾನಿ ಮಾಡುತ್ತಿದೆ. ಸ್ಥಳೀಯ ಸರ್ಕಾರಕ್ಕೆ ಇಲ್ಲಿ ಸ್ಥಾನವಿಲ್ಲ ಎಂದು ಹಲವು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.
ಇಡೀ ದೇಶವೇ ಒಂದು ನಗರದ ಬಗ್ಗೆ ಗೀಳನ್ನು ಹೊಂದಿದೆ. ಅವರು ತಮ್ಮ ಸ್ವಂತ ರಾಜ್ಯಗಳಲ್ಲಿ ಮತ್ತೊಂದು ಬೆಂಗಳೂರಿನಂತಹ ನಗರವನ್ನು ನಿರ್ಮಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ನಿಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸಿ, ಅವರನ್ನು ವಲಸಿಗರಾಗಿ ಇಲ್ಲಿಗೆ ಕಳುಹಿಸಬೇಡಿ. ನಿಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವತ್ತ ಗಮನಹರಿಸಿ ಎಂದಿದ್ದಾರೆ. ಅರುಣ್ ಕುಮಾರ್ ಎನ್ನುವವರು, ನೀವು ಅಸ್ಸಾಂನಲ್ಲಿ ಬೆಂಗಳೂರಿನಂತಹ ನಗರವನ್ನು ನಿರ್ಮಿಸಬೇಕು, ಬದಲಿಗೆ ಬೆಂಗಳೂರಿನಲ್ಲಿ ಅಸ್ಸಾಂ ಮನೆಯನ್ನು ನಿರ್ಮಿಸುವ ಕೆಲಸ ಮಾಡಿ ಎಂದಿದ್ದಾರೆ.
ಅಸ್ಸಾಂನಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಬದಲು, ನೀವು ದಕ್ಷಿಣ ರಾಜ್ಯಗಳಿಗೆ ಜನರನ್ನು ಕಳುಹಿಸುತ್ತಿದ್ದೀರಿ ಮತ್ತು ದಕ್ಷಿಣದಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಬಳಸಿಕೊಂಡು ಅವರಿಗೆ ಆಶ್ರಯಗಳನ್ನು ನಿರ್ಮಿಸುತ್ತಿದ್ದೀರಿ. ಹೀಗಿದ್ದರೆ, ನಿಮಗೆ ನಿಮ್ಮದೇ ಆದ ರಾಜ್ಯ ಮತ್ತು ಆಡಳಿತ ಏಕೆ ಬೇಕು ಅಂತ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.


Click it and Unblock the Notifications
