ಸ್ಕೈ ಬಾರ್ ದಾಂಧಲೆ ಪ್ರಕರಣದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅರ್ಜಿ ವಜಾ
2014ರಲ್ಲಿ ನಡೆದಿದ್ದ ಪ್ರಕರಣ, ಅವಧಿ ಮೀರಿ ಬಾರ್ ನಲ್ಲಿ ಕುಳಿತಿದ್ದನ್ನು ಪ್ರಶ್ನಿಸಿದ್ದಕ್ಕೆ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಕಾಶಪ್ಪನವರ್
ಬೆಂಗಳೂರು, ಜನವರಿ 24: ಸ್ಕೈ ಬಾರ್ ನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಶಾಸಕ ವಿಜಯಾನಂದ ಕಾಶಪ್ಪನವರ್ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್ ನ ಏಕಸದಸ್ಯ ಪೀಠ ತಿರಸ್ಕರಿಸಿದೆ.
2014ರ ಜುಲೈ 3ರಂದು ಸ್ಕೈಬಾರ್ ನಲ್ಲಿ ಮಧ್ಯರಾತ್ರಿವರೆಗೂ ಇದ್ದದ್ದನ್ನು ರಾತ್ರಿ ಬೀಟ್ ಗೆ ಬಂದಿದ್ದ ಪೊಲೀಸರು ಪ್ರಶ್ನಿಸಿದ್ದರು. ಆ ವೇಳೆ, ಮಾತಿಗೆ ಮಾತು ಬೆಳೆದು, ಕಾಶಪ್ಪನವರ್ ಹಾಗೂ ಅವರ ಬೆಂಬಲಿಗರು ಪೊಲೀಸ್ ಪೇದೆಗಳ ಮೇಲೆ ಹಲ್ಲೆ ಮಾಡಿದ್ದರು.[ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ವಾರೆಂಟ್!]

ಈ ಘಟನೆ ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿ, ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಾಗಿತ್ತು. ಆಗಿನಿಂದ ಈವರೆಗೂ ಈ ಪ್ರಕರಣ ವಿಚಾರಣೆ ನಡೆಯುತ್ತಲೇ ಇದೆ.[ಸ್ಕೈ ಬಾರ್ ಕೇಸ್ : ಶಾಸಕ ಕಾಶಪ್ಪನವರ್ ಮೇಲೆ ಚಾರ್ಜ್ ಶೀಟ್]












Click it and Unblock the Notifications