ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ

ಬೆಂಗಳೂರು, ಅಕ್ಟೋಬರ್ 22 : ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಸಬೇಕು ಎಂದು ಕರ್ನಾಟಕ ಹೈಕೋರ್ಟ್ ಆದೇಶ ನೀಡಿದೆ. 2017ರ ಡಿಸೆಂಬರ್‌ನಿಂದ ಟೆಕ್ಕಿ ನಾಪತ್ತೆಯಾಗಿದ್ದಾರೆ.

ಸೋಮವಾರ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಪ್ರಕರಣದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಆದೇಶ ನೀಡಿದ್ದಾರೆ. ಪ್ರಸ್ತುತ ಸಿಐಡಿ ಪ್ರಕರಣದ ತನಿಖೆಯನ್ನು ನಡೆಸುತ್ತಿತ್ತು.

ನಾಪತ್ತೆಯಾಗಿರುವ ಟೆಕ್ಕಿ ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಸಿಬಿಐ ತನಿಖೆಗೆ ಆದೇಶ ನೀಡಿದೆ. ಆಗಸ್ಟ್‌ನಲ್ಲಿ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿದ್ದ ನ್ಯಾಯಾಲಯ ತೀರ್ಪು ಕಾಯ್ದರಿಸಿತ್ತು.

ಅಜಿತಾಬ್ ಅವರನ್ನು ಯಾರೋ ಅಪಹರಣ ಮಾಡಿದ್ದಾರೆ ಎಂದು ಕುಟುಂಬದವರು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಟೆಕ್ಕಿ ಕುಮಾರ್ ಅಜಿತಾಬ್ ನಾಪತ್ತೆಯಾಗಿ 9 ತಿಂಗಳುಗಳು ಕಳೆಯುತ್ತಾ ಬಂದಿದ್ದು, ಇನ್ನೂ ಸುಳಿವು ಸಿಕ್ಕಿಲ್ಲ.

ಬಿಹಾರ ಮೂಲದವರು

ಬಿಹಾರ ಮೂಲದವರು

ಬಿಹಾರ ಮೂಲದ ಅಜಿತಾಬ್ ಕುಮಾರ್ ಬೆಳ್ಳಂದೂರು ಬಳಿಯ ಬ್ರಿಟಿಷ್ ಟೆಲಿಕಾಂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. 2017ರ ಡಿಸೆಂಬರ್ 18 ರಿಂದ ಅವರು ನಾಪತ್ತೆಯಾಗಿದ್ದರು.

ಮೊದಲು ವೈಟ್‌ಫೀಲ್ಡ್‌ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದರು. ನಂತರ ಸರ್ಕಾರ ತನಿಖೆಯನ್ನು ಸಿಐಡಿಗೆ ಹಸ್ತಾಂತರ ಮಾಡಿತ್ತು.

ಯಾವುದೇ ಸುಳಿವು ಸಿಕ್ಕಿಲ್ಲ

ಯಾವುದೇ ಸುಳಿವು ಸಿಕ್ಕಿಲ್ಲ

ಟೆಕ್ಕಿ ಕುಮಾರ್ ಅಜಿತಾಬ್ ತಂದೆ ಅಶೋಕ್ ಕುಮಾರ್ ಸಿನ್ಹಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ಪ್ರಕರಣದ ಸಿಬಿಐ ತನಿಖೆಗೆ ಆದೇಶ ನೀಡಿದೆ.

ಕರ್ನಾಟಕ ಹೈಕೋರ್ಟ್ ಆದೇಶದ ಪ್ರತಿ ಸಿಕ್ಕ ಬಳಿಕ ಸಿಐಡಿ ಅಧಿಕಾರಿಗಳು ತನಿಖೆಯನ್ನು ಸಿಬಿಐಗೆ ಹಸ್ತಾಂತರ ಮಾಡಲಿದ್ದಾರೆ.

ಕಾರು ತೋರಿಸಲು ಹೋಗಿದ್ದರು

ಕಾರು ತೋರಿಸಲು ಹೋಗಿದ್ದರು

ಅಜಿತಾಬ್ ಕುಮಾರ್ ಓಎಲ್‌ಎಕ್ಸ್‌ನಲ್ಲಿ ತಮ್ಮ ಕಾರು ಮಾರಾಟಕ್ಕೆ ಇಟ್ಟಿದ್ದರು. ಕರೆ ಬಂದಾಗ ಕಾರು ತೋರಿಸಲು ಮನೆಯಿಂದ ಹೊರ ಹೋಗುತ್ತಿದ್ದರು.

2017ರ ಡಿಸೆಂಬರ್ 18 ರಂದು ಹಾಗೆ ಕರೆ ಬಂದಾಗ ಮನೆಯಿಂದ ಹೊರ ಹೋದವರು ನಾಪತ್ತೆಯಾಗಿದ್ದಾರೆ. 9 ತಿಂಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಈಗ ಸಿಬಿಐ ನಾಪತ್ತೆ ಪ್ರಕರಣದ ತನಿಖೆ ಕೈಗೊಳ್ಳಲಿದೆ.

ಗೂಗಲ್ ಸಹಾಯ ಕೇಳಿದ್ದ ಸಿಐಡಿ

ಗೂಗಲ್ ಸಹಾಯ ಕೇಳಿದ್ದ ಸಿಐಡಿ

ಅಜಿತಾಬ್ ಕುಮಾರ್ ನಾಪತ್ತೆಯಾಗುವ ಮೊದಲು ರಮೇಶ್ ಎಂಬ ವ್ಯಕ್ತಿಯ ಜೊತೆ ಚಾಟ್ ಮಾಡಿದ್ದರು. ಅವರ ಜಿ-ಮೇಲ್‌ಗೆ ಹಲವು ಈ ಮೇಲ್‌ಗಳು ಬಂದಿದ್ದನ್ನು ಸಿಐಡಿ ಪತ್ತೆ ಹಚ್ಚಿತ್ತು.

ರಮೇಶ್ ಅವರ ಐಡಿಯ ಕುರಿತು ಹೆಚ್ಚಿನ ಮಾಹಿತಿ ನೀಡುವಂತೆ ಕೋರಿ ಸಿಐಡಿ ಅಧಿಕಾರಿಗಳು ಕ್ಯಾಲಿಪೋರ್ನಿಯಾದಲ್ಲಿರುವ ಗೂಗಲ್ ಕಚೇರಿಗೆ ಪತ್ರ ಬರೆದಿದ್ದರು.

ಪ್ರತಿಭಟನೆ ನಡೆದಿತ್ತು

ಪ್ರತಿಭಟನೆ ನಡೆದಿತ್ತು

ಅಜಿತಾಬ್ ಕುಮಾರ್ ನಾಪತ್ತೆಯಾಗಿ 8 ತಿಂಗಳು ಕಳೆದರೂ ಯಾವುದೇ ಸುಳಿವು ಸಿಕ್ಕಿಲ್ಲ. ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಿ ಎಂದು ಅಜಿತಾಬ್ ಕುಮಾರ್ ಸಹೋದರಿ ಮತ್ತು ಇತರ ಟೆಕ್ಕಿಗಳು ಬೆಂಗಳೂರಿನ ಟೌನ್ ಹಾಲ್ ಮುಂದೆ ಕೆಲವು ದಿನಗಳ ಹಿಂದೆ ಪ್ರತಿಭಟನೆ ನಡೆಸಿದ್ದರು. ಈಗ ಸಿಬಿಐ ತನಿಖೆ ಆರಂಭವಾದರೆ ತನಿಖೆ ಚುರುಕುಗೊಳ್ಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+