ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಡಿಯೂರಪ್ಪ, ಜಯಲಲಿತಾ ಇದ್ದ ಸೆಲ್ ನಲ್ಲೇ ಶಶಿಕಲಾ ನೆಲೆ

ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಶಶಿಕಲಾ ನಟರಾಜನ್ ಅವರು ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನತ್ತ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ತಮ್ಮ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದಾರೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಫೆಬ್ರವರಿ 15: ಆಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಅಪರಾಧಿ ಎನಿಸಿಕೊಂಡಿರುವ ಶಶಿಕಲಾ ನಟರಾಜನ್ ಅವರು ಚೆನ್ನೈನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನತ್ತ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ತಮ್ಮ ಬೇಡಿಕೆ ಪಟ್ಟಿಯನ್ನು ಸಲ್ಲಿಸಿದ್ದು, ಸೆರೆಮನೆಯಲ್ಲಿ ವಿಶೇಷ ಕೊಠಡಿ, ಮನೆಯೂಟ, ಟಿವಿ ಬೇಕು ಎಂದಿದ್ದಾರೆ.

ಶಶಿಕಲಾ ಅವರ ಬೇಡಿಕೆ ಪಟ್ಟಿಯಲ್ಲಿ ವೆಸ್ಟರ್ನ್ ಕಮೋಡ್, ನಡೆದಾಡಲು ಸ್ಥಳಾವಕಾಶ, 24 ಗಂಟೆ ನೀರಿನ ಸೌಲಭ್ಯ ಹೀಗೆ ಪಟ್ಟಿ ಬೆಳೆಯುತ್ತದೆ. ಆದರೆ, ಜೈಲಿನಿಂದ ಬಂದಿರುವ ಮಾಹಿತಿ ಪ್ರಕಾರ, ಒಂದು ಮಂಚ ಇರುವ ಸಾಮಾನ್ಯ ಕೈದಿಯ ಕೊಠಡಿಯನ್ನು ಕಾದಿರಿಸಲಾಗಿದೆ. ಅನಾರೋಗ್ಯ ಪೀಡಿತರಾಗಿರುವುದರಿಂದ ಒಬ್ಬ ಸಹಾಯಕರನ್ನು ನೀಡಬಹುದು ಅಷ್ಟೇ.[ಪರಪ್ಪನ ಅಗ್ರಹಾರ ಜೈಲು ಪಾಲಾದ ಶಶಿಕಲಾ]

Here is Sasikala's wish list before going to Parappana Agrahara jail

ಒಂದು ತಟ್ಟೆ, ಒಂದು ಲೋಟ, ಒಂದು ಚೆಂಬು, ಬಿಳಿ ಸಮವಸ್ತ್ರ(ಅಗತ್ಯ ಬಿದ್ದರೆ) ಅಥವಾ ನೀಲಿ ಸೀರೆ ನೀಡಲಾಗುತ್ತದೆ. ಜೈಲಿನ ಆವರಣದಲ್ಲಿರುವ ಆಸ್ಪತ್ರೆಯಲ್ಲಿ ಆರೋಪಿಗಳ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ.

ತಮ್ಮ ಅನಾರೋಗ್ಯದ ಬಗ್ಗೆ ಪ್ರಮಾಣ ಪತ್ರವನ್ನು ನೀಡಬೇಕಾಗುತ್ತದೆ. ವಿಐಪಿ ಕೈದಿಯಾಗಿರುವುದರಿಂದ ಹಗಲು -ರಾತ್ರಿ ಕೊಠಡಿ ಕಾಯಲು ಸಿಬ್ಬಂದಿ ಇರಬೇಕಾಗುತ್ತದೆ. ಆದರೆ, ಈ ಜೈಲಿನಲ್ಲಿ ವಿ ಐ ಪಿ ಸೆಲ್ ಎಂದು ಪ್ರತ್ಯೇಕವಾಗಿ ಕೊಠಡಿ ಇಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಜೆ ಜಯಲಲಿತಾ ಅವರಿದ್ದ ಬರಾಕ್ ನಲ್ಲೇ ಶಶಿಕಲಾ ಅವರು ಕೊಠಡಿ ಪಡೆಯಲಿದ್ದಾರೆ

English summary
The list by Sasikala includes a western commode, home cooked food, walking space and 24 hours running water. The jail authorities however are ready to lodge her in a cell which will have a cot, television. She would also be provided with a helper. The jail authorities have however not considered the other demands as yet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X