ಬೆಂಗಳೂರು ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 2ರಲ್ಲಿ ಮಳೆ ನೀರು ಸೋರಿಕೆ !
ಬೆಂಗಳೂರು, ಮೇ. 03: ಮೇ 2ರಂದು ಸಂಜೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ ಸೋರಿಕೆ ಉಂಟಾಗಿತ್ತು. ಇತ್ತೀಚೆಗಷ್ಟೇ ಈ ಟರ್ಮಿನಲ್ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆಗೊಂಡ ಕೆಲವೇ ತಿಂಗಳಲ್ಲಿ ನೀರು ಸೋರಿಕೆಯಾಗಿರುವುದಕ್ಕೆ ಭಾರೀ ಆಕ್ರೋಶ ಉಂಟಾಗಿದೆ.
ಟರ್ಮಿನಲ್ 2 ಆಗಮನದ ಸ್ಥಳದಲ್ಲಿ ಮಳೆನೀರು ನಿಲ್ಲುವ ವಿಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ನೆಟಿಜನ್‌ಗಳು ರೂ 5,000 ಕೋಟಿ ಟರ್ಮಿನಲ್‌ನ "ನೈಜ ಮೌಲ್ಯ" ಕಾಣುತ್ತಿದೆ ಎಂದು ಟೀಕೆ ಮಾಡಿದ್ದಾರೆ. ಕೇವಲ 30 ನಿಮಿಷಗಳ ಕಾಲ ಸುರಿದ ಮಳೆಗೆ ಹೀಗೆ ಟರ್ಮಿನಲ್‌ನಲ್ಲಿ ನೀರು ತುಂಬಿಕೊಂಡಿರುವುದಕ್ಕೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹವಾಮಾನ ವರದಿಗಳು ವಿಮಾನ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ 25 ಮಿಮೀ ಮಳೆಯನ್ನು ದಾಖಲಿಸಿದರೆ, ವಿಮಾನ ನಿಲ್ದಾಣವು ರಾತ್ರಿ 7 ರಿಂದ 10 ರವರೆಗೆ ಕನಿಷ್ಠ 9.8 ಮಿಮೀ ಮಳೆಯನ್ನು ದಾಖಲಿಸಿದೆ. ಟರ್ಮಿನಲ್ 2 ರಲ್ಲಿದ್ದ ಪ್ರಯಾಣಿಕರು ಮಳೆಯು 30 ನಿಮಿಷಗಳಲ್ಲಿಯೇ ಕೊನೆಗೊಂಡಿತು. ಆದರೆ ಮಳೆನೀರು ಟರ್ಮಿನಲ್‌ಗೆ ನುಗ್ಗಿದೆ ಎಂದು ಹೇಳಿದ್ದಾರೆ.
This is a video not from rain forests of Amazon but Terminal 2 of Kempegowda International Airport of Bengaluru, Karnataka.
— Supriya Shrinate (@SupriyaShrinate) May 3, 2023
First rain has the airport terminal built at a cost of ₹5000 crore submerged under water
This is the New Infrastructure of PM @narendramodi Ji’s… https://t.co/FrRjEgqvNF pic.twitter.com/wKZgvlYNMS
ಟ್ವಿಟ್ಟರ್ ಬಳಕೆದಾರರು ಮಳೆನೀರಿನ ಸೋರಿಕೆಯ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ, "ಎಲ್ಲಾ ಅಲಂಕಾರಿಕವಾಗಿ ಮಾತ್ರ ಕಾಣುತ್ತದೆ. ಆದರೆ ಬೆಂಗಳೂರು ಮಳೆಯನ್ನು ಇದು ತಡೆದುಕೊಳ್ಳಲು ಸಾಧ್ಯವಿಲ್ಲ. ಭಾರೀ ಮಳೆಯ ಸಮಯದಲ್ಲಿ ಇದು ಕೊಳವಾಗಿ ಬದಲಾಗುತ್ತದೆಯೇ..?" ಎಂದು ಕೆಲವು ಟ್ವಿಟರ್ ಬಳಕೆದಾರರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಕಾಮಗಾರಿಯನ್ನು ಪೂರ್ಣಗೊಳಿಸದೆ ರಾಜ್ಯ ಸರ್ಕಾರ ಟರ್ಮಿನಲ್ ಉದ್ಘಾಟನೆ ಮಾಡಿದೆ ಎಂದು ಕೆಲವರು ಆರೋಪಿಸಿದ್ದಾರೆ.

ನೀರು ಸೋರಿಕೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನಾತೆ, "ಇದು ಅಮೆಜಾನ್‌ನ ಮಳೆಕಾಡುಗಳ ವಿಡಿಯೋವಲ್ಲ, ಆದರೆ ಕರ್ನಾಟಕದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ನ ವಿಡಿಯೋವಾಗಿದೆ. ಮೊದಲ ಮಳೆಗೆ 5000 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ವಿಮಾನ ನಿಲ್ದಾಣದ ಟರ್ಮಿನಲ್ ನೀರಿನಲ್ಲಿ ಮುಳುಗಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಹೊಸ ಮೂಲಸೌಕರ್ಯ" ಎಂದು ಟೀಕಿಸಿದ್ದಾರೆ.
ಹೊಸ ಟರ್ಮಿನಲ್‌ನ ಕರ್ಬ್‌ಸೈಡ್‌ನಲ್ಲಿ ಸೋರಿಕೆಯಾಗಿರುವುದನ್ನು ವಿಮಾನ ನಿಲ್ದಾಣದ ನಿರ್ವಾಹಕರಾದ ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಬಿಐಎಎಲ್) ಖಚಿತಪಡಿಸಿದೆ. ಜೊತೆಗೆ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಅತ್ಯುನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ ಎಂದಿದೆ.
"ಮೇ 2, 2023 ರ ಸಂಜೆ ಸುರಿದ ಮಳೆಯಿಂದ ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ರ ಕೆರ್ಬ್‌ಸೈಡ್‌ನಲ್ಲಿ ಸೋರಿಕೆ ಉಂಟಾಗಿದೆ. T2 ನಂತಹ ದೊಡ್ಡ ಮತ್ತು ಹೊಸ ಮೂಲಸೌಕರ್ಯದಲ್ಲಿ ಸಮಸ್ಯೆಗಳನ್ನು ನಾವು ಎದುರಿಸುತ್ತಿರುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ನಮ್ಮ ತಂಡಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ, ನಮ್ಮ ಎರಡೂ ಟರ್ಮಿನಲ್‌ಗಳಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ನಾವು ಬದ್ಧರಾಗಿದ್ದೇವೆ" ಎಂದು ಬಿಐಎಎಲ್ ವಕ್ತಾರರು ತಿಳಿಸಿದ್ದಾರೆ.
ಈ ಹಿಂದೆ, ವಿಧಾನಸಭೆ ಚುನಾವಣೆಯ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ವೈಟ್‌ಫೀಲ್ಡ್-ಕೆಆರ್ ಪುರಂ ಮೆಟ್ರೋ ಲೈನ್‌ನಲ್ಲಿ ಸೋರಿಕೆಯಾಗಿತ್ತು. ಜೊತೆಗೆ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಜಲಾವೃತವಾಗಿ ಭಾರೀ ಟೀಕೆಗೆ ಗುರಿಯಾಗಿತ್ತು.
2018 ರಲ್ಲಿ ಯೋಜನೆ ಪ್ರಾರಂಭವಾದ ಟರ್ಮಿನಲ್ ಅನ್ನು 5,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 2,55,000 ಚದರ ಮೀಟರ್‌ನಲ್ಲಿ ಹರಡಿರುವ ಇದು ವಾರ್ಷಿಕವಾಗಿ ಕನಿಷ್ಠ 25 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ನಿರೀಕ್ಷೆಯಿದೆ. T2 ಅನ್ನು "ಗಾರ್ಡನ್ ಟರ್ಮಿನಲ್" ಎಂದು ಕರೆಯಲಾಗುತ್ತದೆ. ಏಕೆಂದರೆ ಇದರಲ್ಲಿ ವಿವಿಧ ಜಾತಿಯ ಸಸ್ಯಗಳು ಮತ್ತು ಮರಗಳ್ನು ಹೊಂದಿದೆ. 180 ಅಪರೂಪದ ಸಸ್ಯ ಪ್ರಭೇದಗಳು, 3,600 ಕ್ಕೂ ಹೆಚ್ಚು ಇತರ ಸಸ್ಯ ಪ್ರಭೇದಗಳು, ಬಿದಿರು ಹೊದಿಕೆಗಳು, 620 ಸ್ಥಳೀಯ ಸಸ್ಯಗಳು, 7,700 ಕಸಿ ಮರಗಳು ಸೇರಿ ಹಲವು ಗಿಡ ಮರಗಳನ್ನು ಹೊಂದಿದೆ.












Click it and Unblock the Notifications