ಬೆಂಗಳೂರು: ಮಂಗಳವಾರ ರಾತ್ರಿ ವರುಣ ತಂದ ಅವಾಂತರಗಳು
ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ ಏನೆಲ್ಲ ಅವಾಂತರಗಳನ್ನು ಸೃಷ್ಠಿಸಿದೆ ಎಂಬ ಸಣ್ಣ ವರದಿ ಇಲ್ಲಿದೆ.
ಬೆಂಗಳೂರು, ಮಾರ್ಚ್.07 : ಸಿಲಿಕಾನ್ ಸಿಟಿ ಬೆಂಗಳೂರು ನಗರದೆಲ್ಲೆಡೆ ಮಂಗಳವಾರ ರಾತ್ರಿ ಗುಡುಗು, ಮಿಂಚು ಸಹಿತ ಸುರಿದ ಧಾರಾಕಾರ ಮಳೆ ಹಲವು ಅವಾಂತರಗಳನ್ನು ಸೃಷ್ಠಿಸಿದೆ.
ನಗರದ ಹಲವು ನಗರಗಳಲ್ಲಿ ಒಳಚರಂಡಿ, ಮ್ಯಾನ್‌ಹೋಲ್ ತುಂಬಿ ಹರಿದಿದ್ದರಿಂದ ರಸ್ತೆಗಳು ಜಲಾವೃತಗೊಂಡಿವೆ. ಇದರಿಂದಾಗಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. [ಬೆಂಗಳೂರಿನಲ್ಲಿ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆ]
ಲಕ್ಷದದ್ವೀಪದ ಸುತ್ತಮುತ್ತ ಮೇಲ್ಮೈ ಸುಳಿಗಾಳಿ ಹಾಗೂ ಕರ್ನಾಟಕ ಉತ್ತರ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಸುಂದರ್ ಮೇತ್ರಿ ತಿಳಿಸಿದ್ದಾರೆ. [ಉದ್ಯಾನ ನಗರಿಗೆ ಸೋಮವಾರ ರಾತ್ರಿ ವರುಣನ ಸಿಂಚನ]
ಹಾಗಿದ್ದರೆ ಮಂಗಳವಾರ ರಾತ್ರಿ ಬೆಂಗಳೂರಿನಲ್ಲಿ ಸುರಿದ ಮಳೆ ಏನೆಲ್ಲ ಅವಾಂತರಗಳನ್ನು ಸೃಷ್ಠಿಸಿದೆ ಎಂಬ ಸಣ್ಣ ವರದಿ ಇಲ್ಲಿದೆ.

* ನೈರುತ್ಯ ಸಾರಿಗೆ ಬಸ್ ವೊಂದು ಕಿನೋ ಚಿತ್ರಮಂದಿರ ಬಳಿ ಅಂಡರ್ ಪಾಸ್ ನಲ್ಲಿ ಬಸ್ ಮುಗುಳುಗೊಂಡಿದೆ. ಬಸ್ ನಲ್ಲಿ ಸಿಲುಕಿದ್ದ 10 ಜನ ಪ್ರಯಾಣಿಕರನ್ನು ಸ್ಥಳೀಯ ನಿವಾಸಿಗಳು ರಕ್ಷಿಸಿದ್ದಾರೆ.
*ಜಯನಗರದಲ್ಲಿ ಮರ ಉರುಳಿ ಬೈಕ್ ಜಖಂ.
* ಬಿಟಿಎಂನ ಕೆಎಸ್ ಆರ್ ಟಿಸಿ ಲೇಔಟ್ ನಲ್ಲಿ ನಾಲ್ಕು ಮನೆಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ಮನೆಯವರನ್ನು ರಾತ್ರಿ ಇಡೀ ಜಾಗರಣೆ ಮಾಡುವಂತಾಗಿದೆ.
* ಜಯನಗರದ ಏಳನೇ ಹಂತದಲ್ಲಿ ಹೋರ್ಡಿಂಗ್ ಬೋರ್ಡ್ ವೊಂದು ರಸ್ತೆಗೆ ಉರುಳಿ ಬಿದ್ದಿದೆ.
* ಸಂಜಯ್ ನಗರದ ಎಇಎಸ್ ಲೇಔಟ್ ನಲ್ಲಿ ಬೃಹತ್ ಮರವೊಂದು ರಸ್ತೆಗುರುಳಿದೆ.
* ಮಲ್ಲೇಶ್ವರಂನ ವೇಣುಗೋಪಾಲ್ ಬಳಿ ಇರುವ ದೇವಸ್ಥಾನಗಳಿಗೆ ನುಗ್ಗಿದ ನೀರು.
ಈ ಎಲ್ಲಾ ಆವಾಂತರಗಳಿಂದ ಕೆಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತು.












Click it and Unblock the Notifications