Heavy Rain: ಮಳೆ ಅಬ್ಬರ ಹಿನ್ನೆಲೆ ಶಾಲೆ & ಕಾಲೇಜುಗಳಿಗೆ ದಿಢೀರ್ ರಜೆ...
ಮಳೆ... ಮಳೆ... ಮಳೆ... ಭಾರಿ ಭರ್ಜರಿ ಮಳೆ... ಹೀಗೆ ಕರ್ನಾಟಕದಲ್ಲಿ ಈ ವರ್ಷದಲ್ಲಿ ಮಳೆಗೆ ಬ್ರೇಕ್ ಇಲ್ಲ ಅಂತಾ ಕಾಣುತ್ತದೆ. ಯಾಕಂದ್ರೆ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಹಾಗೇ ಭಾರಿ ಮಳೆ ಕಾರಣಕ್ಕೆ ಜನರು ಕೂಡ ರೊಚ್ಚಿಗೇಳುವ ವಾತಾವರಣ ಇದೀಗ ನಿರ್ಮಾಣ ಆಗಿದೆ. ಮುಂಗಾರು ಮಳೆ, ಹಿಂಗಾರು ಮಳೆ ನಂತರ ಚಳಿಯಲ್ಲೂ ಮಳೆ ಸುರಿಯುತ್ತಿದೆ. ಈ ರೀತಿ ಅಕಾಲಿಕ ಮಳೆಯಿಂದಾಗಿ ಭಾರಿ ದೊಡ್ಡ ದೊಡ್ಡ ಅವಾಂತರ ಸೃಷ್ಟಿಯಾಗುತ್ತಿದೆ. ಈ ಎಲ್ಲಾ ಗೊಂದಲಗಳ ನಡುವೆ, ಮಳೆ ಅಬ್ಬರ ಹಿನ್ನೆಲೆ ಶಾಲೆ & ಕಾಲೇಜುಗಳಿಗೆ ದಿಢೀರ್ ರಜೆ....
ಮಳೆ ಬಂದು ರೈತರ ಬೆಳೆ ಎಲ್ಲಾ ನಾಶವಾಗಿ ಹೋಗುತ್ತಿದೆ, ಅಲ್ಲದೆ ಭಾರಿ ಮಳೆ ಕಾರಣಕ್ಕೆ ಜನರಿಗೆ ಜ್ವರ, ನೆಗಡಿ, ಕೆಮ್ಮು ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆ ಕೂಡ ಈ ಸಮಯದಲ್ಲಿ ಆವರಿಸುತ್ತಿವೆ. ಇದರಿಂದಾಗಿ ಜನರು ಕೂಡ ತೀವ್ರ ಆಕ್ರೋಶಗೊಂಡ ರೀತಿಯೇ ಕಂಡು ಬರುತ್ತಿದೆ. ಹೀಗೆ ಮಳೆ ಯಾವಾಗ ನಿಲ್ಲುತ್ತೆ? ಅಂತಾ ಜನ ಪ್ರಶ್ನೆ ಕೇಳುತ್ತಿದ್ದಾರೆ. ಇದೇ ಸಮಯದಲ್ಲಿ ಮತ್ತೊಂದು ವಿಚಾರವು ಕೂಡ ಸಂಚಲನ ಸೃಷ್ಟಿ ಮಾಡಿದ್ದು, ಮುಂದಿನ 48 ಗಂಟೆಗಳ ಕಾಲ ಭಾರಿ ಭರ್ಜರಿ ಮಳೆ ಗ್ಯಾರಂಟಿ ಆಗಿದೆ!

ಮಳೆ... ಮಳೆ... ಯಾವ ಯಾವ ಜಿಲ್ಲೆಗೆ?
ಮೊದಲೇ ಹೇಳಿದಂತೆ ಬಂಗಾಳ ಕೊಲ್ಲಿ ಸಮುದ್ರ ಪ್ರದೇಶದಲ್ಲಿ ಕಡಿಮೆ ಒತ್ತಡದ ಪ್ರದೇಶವು ನಿರ್ಮಾಣ ಆಗಿ ಚಂಡಮಾರುತ ಜನ್ಮ ಪಡೆದು ಮಳೆ ಬರಲು ಶುರುವಾಗಿದೆ. ಈಗ ಹವಾಮಾನ ಇಲಾಖೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಮಳೆ ಎಚ್ಚರಿಕೆ ನೀಡಿದೆ. ಸೋಮವಾರ ಮುಗಿದರೂ ಮಳೆಯ ಅಬ್ಬರ ಕಡಿಮೆ ಆಗುವ ಲಕ್ಷಣ ಕಾಣುತ್ತಿಲ್ಲ. ಇದು ದಕ್ಷಿಣ ಕರ್ನಾಟಕ ಭಾಗದ ಜನರಿಗೆ ಭಯ ಹುಟ್ಟಿಸಿದೆ.
ಇದೀಗ ಹವಾಮಾನ ಇಲಾಖೆ ನೀಡಿರುವ ಮಳೆ ಎಚ್ಚರಿಕೆ ಪ್ರಕಾರ, ಕರ್ನಾಟಕದ ರಾಜಧಾನಿ ಬೆಂಗಳೂರು ಸೇರಿದಂತೆ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಕೋಲಾರ & ಚಿಕ್ಕಬಳ್ಳಾಪುರ ಸೇರಿ, ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸುವ ಸಾಧ್ಯತೆ ಇದೆ ಎಂದು ವಾರ್ನಿಂಗ್ ಕೊಡಲಾಗಿದೆ. ಇದೇ ಕಾರಣಕ್ಕೆ ಭಾರಿ ಮುನ್ನೆಚ್ಚರಿಕೆ ವಹಿಸಿದ್ದು, ಯಾವ ಕ್ಷಣದಲ್ಲಿ ಬೇಕಾದರೂ ಪರಿಸ್ಥಿತಿ ಕೈಮೀರುವ ಆತಂಕ ಕಾಡುತ್ತಿದೆ. ಹಾಗಾದ್ರೆ, ಈಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಿರುವುದು ಎಲ್ಲಿ?
ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ!
ಮಳೆ ಅಬ್ಬರ ಹೆಚ್ಚಾದ ಕಾರಣಕ್ಕೆ ತಮಿಳುನಾಡು, ಕೇರಳ ಸೇರಿ ಅಕ್ಕಪಕ್ಕದ ರಾಜ್ಯಗಳಲ್ಲಿ ಭಾರಿ ಕಟ್ಟೆಚ್ಚರವನ್ನು ವಹಿಸಲಾಗಿದೆ. ಇದರ ಜೊತೆ ಅಲ್ಲಿನ ಶಾಲಾ & ಕಾಲೇಜುಗಳಿಗೆ ಕೂಡ ರಜೆ ಘೋಷಣೆ ಮಾಡಲಾಗಿದೆ. ಅದರಲ್ಲೂ ತಮಿಳುನಾಡು ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ದೊಡ್ಡ ಅವಾಂತರ ಸಂಭವಿಸುವ ಆತಂಕ ಇದ್ದು, ಹೀಗಾಗಿ ಬಹುತೇಕ ಜಿಲ್ಲೆಗಳಲ್ಲಿ ಈಗ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರ್ನಾಟಕದಲ್ಲಿ ಈಗ ಮಳೆ ಸುರಿದರೂ, ದೊಡ್ಡ ವಿನಾಶ ಸೃಷ್ಟಿ ಮಾಡುವ ಆತಂಕ ಇಲ್ಲ.












Click it and Unblock the Notifications