'ನಟ ದರ್ಶನ್ ಜೈಲಿನ ಅಕ್ರಮಗಳನ್ನು ಬಯಲು ಮಾಡಲು ಒಳಗೆ ಹೋಗಿದ್ದಾರೆ'
ಬೆಂಗಳೂರು, ಆಗಸ್ಟ್ 26: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ಜೈಲು ಪಾಲಾಗಿ ಎರಡು ತಿಂಗಳು ಕಳೆದಿದೆ. ಸದ್ಯ ಪರಪ್ಪನ ಅಗ್ರಹಾರದಲ್ಲಿರುವ ಕೊಲೆ ಆರೋಪಿ ದರ್ಶನ್ಗೆ ಜೈಲಿನಲ್ಲಿಯೇ ರಾಜಾತಿಥ್ಯ ನೀಡುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ. ಇದಕ್ಕೆ ಪುಷ್ಠಿಕೊಡುವಂತೆ ಫೋಟೋ ಹಾಗೂ ವಿಡಿಯೋ ಒಂದು ನಿನ್ನೆ (ಆಗಸ್ಟ್ 25) ವೈರಲ್ ಆಗಿದೆ.
ಜೈಲಿನಲ್ಲಿರುವ ದರ್ಶನ್ ಅವರ ಲೇಟೆಸ್ಟ್ ಫೋಟೋವೊಂದು ವೈರಲ್ ಆಗಿದೆ. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋ ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಜೈಲಾಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಈ ಫೋಟೋ ವೈರಲ್ ಆಗುತ್ತಿದ್ದಂತೆ ದರ್ಶನ್ ಅಭಿಮಾನಿಯೊಬ್ಬ ಶೇರ್ ಮಾಡಿರುವ ಪೋಸ್‌ವೊಂದು ಸಖತ್ ವೈರಲ್ ಆಗುತ್ತಿದೆ. ಮಾಸ್ಟರ್ ರಾಖ್ ಹೆಚ್.ಹೆಚ್ ಎನ್ನುವ ಫೇಸ್‌ಬುಕ್ ಖಾತೆಯಿಂದ ಈ ಪೋಸ್ಟ್ ಹಂಚಿಕೊಳ್ಳಲಾಗಿದೆ.
'ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಬಯಲು ಮಾಡಲು ತಾವೇ ಆರೋಪ ಹೊತ್ತಂತೆ ನಾಟಕ ಮಾಡಿಕೊಂಡು ನಮ್ಮ ಬಾಸ್ ಜೈಲಿಗೆ ಹೋಗಿದ್ದಾರೆ. ಅಸಲಿಗೆ ರೇಣುಕಾ ಸ್ವಾಮಿ ಕೊಲೆ ಎನ್ನುವುದೇ ದೊಡ್ಡ ಸುಳ್ಳು. ಇದೆಲ್ಲಾ ಪ್ರೀ ಪ್ಲಾನ್. ಅಸಲಿಗೆ ನಮ್ಮ ಬಾಸ್ ದರ್ಶನ್ ಜೈಲಿಗೆ ಹೋಗಿರುವುದು ಅಕ್ರಮಗಳನ್ನು ಬಯಲು ಮಾಡಿ ಸಮಾಜಕ್ಕೆ ನ್ಯಾಯ ಕೊಡಲು. ಈಗಲಾದರೂ ಅರ್ಥ ಆಯ್ತಾ..?' ಎಂದು ಪ್ರಶ್ನಿಸಿದ್ದಾರೆ.

ಮಾಸ್ಟರ್ ರಾಖ್ ಹೆಚ್.ಹೆಚ್ ಎನ್ನುವ ಫೇಸ್‌ಬುಕ್ ಖಾತೆಯಿಂದ ಹಂಚಿಕೊಂಡ ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವಿವಿಧ ರೀತಿ ಕಮೆಂಟ್ ಮಾಡುತ್ತಿದ್ದಾರೆ. ಈ ಪೋಸ್ಟ್‌ನ ಸ್ಕ್ರೀನ್‌ಶಾಟ್‌ಗಳನ್ನು ತೆಗೆದು ವೈರಲ್ ಮಾಡಲಾಗುತ್ತಿದೆ. ದೇವರೇ ಈ ಪರಿ ಅಭಿಮಾನ, ತಪ್ಪು ತಿಳುವಳಿಕೆ ಗಳಿಗೆ ಏನು ಹೇಳಬೇಕು? ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಇದ್ದರೂ ಇರಬಹುದು ಸ್ವಾಗತಾರ್ಹ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಅಲ್ಲದೇ ಇನ್ನೂ ಕೆಲವರು ದರ್ಶನ್ ಫೋಟೋ ಹಾಗೂ ಮಾಸ್ಟರ್ ರಾಖ್ ಹೆಚ್.ಹೆಚ್ ಪೋಸ್ಟ್ ಶೇರ್ ಮಾಡಿ ನಮ್ಮ ಬಾಸ್ ಕಾರ್ಯ ಶ್ಲಾಘನೀಯ. ಸ್ಯಾಂಡಲ್‌ವುಡ್‌ನಲ್ಲಿ ಇಂತ ಪವರ್ ಯಾರಿಗಾದ್ರೂ ಇದ್ದರೆ ತೋರಿಸಿ ನೋಡೊಣ.. ಅದಕ್ಕೆ ಹೇಳೋದು ಜೈ ಡಿ ಬಾಸ್ ಅಂತಾ ಎಂದು ವ್ಯಂಗ್ಯವಾಗಿ ಫೋಸ್ಟ್‌ಗಳನ್ನು ಶೇರ್ ಮಾಡಲಾಗುತ್ತಿದೆ. ಒಟ್ಟಾರೆ ದರ್ಶನ್ ಮೇಲೆ ಮಾಸ್ಟರ್ ರಾಖ್ ಹೆಚ್.ಹೆಚ್ ಇಟ್ಟಿರುವ ಅಭಿಮಾನವನ್ನು ಎಲ್ಲರೂ ಕೊಂಡಾಡಿದ್ದಾರೆ.












Click it and Unblock the Notifications