ಆರ್‌ಆರ್ ನಗರದಲ್ಲಿ ಬಿಜೆಪಿ ಸೋಲು: ಮುನಿರತ್ನ ಗೆಲುವಿಗೆ ಎಚ್ಡಿಕೆ ಹರ್ಷ
Recommended Video

ಬೆಂಗಳೂರು, ಮೇ 31: ಬಹಳ ಕುತೂಹಲಕ್ಕೆ ಕಾರಣವಾಗಿದ್ದ ಬೆಂಗಳೂರಿನ ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ ಚುನಾವಣೆ ಫಲಿತಾಂಶ ಹೊರ ಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿ 49ಕ್ಕೂ ಹೆಚ್ಚು ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅದಕ್ಕೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಗೆಲ್ಲಬಾರದು ಎಂದು ಏನು ಸೂಚನೆ ಕೊಟ್ಟಿದ್ದೆವೋ ಅದರಲ್ಲಿ ಯಶಸ್ಸು ಯಶಸ್ಸು ದೊರೆಯಲಿದೆ. ಆರ್‌ಆರ್ ನಗರ ಚುನಾವಣೆ ಬಗ್ಗೆ ಏನೂ ತಲೆಕೆಡಿಸಿಕೊಂಡಿರಲಿಲ್ಲ. ನಾವು ಕಾಂಗ್ರೆಸ್ ಗೆಲ್ಲಬೇಕಿತ್ತು ಎಂದು ಅಂದುಕೊಂಡಿದ್ದೆವು ಗೆದ್ದಿದೆ ಇದು ಎಲ್ಲರಿಗೂ ಸಂತಸ ತಂದಿದೆ ಎಂದು ಜೆಪಿ ನಗರದ ತಮ್ಮ ನಿವಾಸದಲ್ಲಿ ಹೇಳಿಕೆ ನೀಡಿದ್ದಾರೆ. ಪರೋಕ್ಷವಾಗಿ ಮೈತ್ರಿಕೂಟದ ಗೆಲುವು ಎಂದು ಹೇಳಿದ್ದಾರೆ.

ಮುನಿರತ್ನ ಅವರು 49 ಸಾವಿರಕ್ಕೂ ಹೆಚ್ಚು ಮತಗಳಿಂದ ಮುನಿರತ್ನ ಗೆಲುವುದು ಸಾಧಿಸಿದ್ದಾರೆ. ಮುನಿರತ್ನ ಬೆಂಬಲಿಗರು ರಸ್ತೆಯಲ್ಲೇ ಕುಣಿದು ಕುಪ್ಪಳಿಸಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ನಡೆಸುತ್ತಿದ್ದಾರೆ.












Click it and Unblock the Notifications