ಬಿಜೆಪಿಗೆ ದೇವರ ಆಶೀರ್ವಾದ ಇದ್ದಿದ್ರೆ ಆಗಲೇ ಸರ್ಕಾರ ಮಾಡ್ತಿದ್ರು : ರೇವಣ್ಣ
ಬೆಂಗಳೂರು, ಸೆಪ್ಟೆಂಬರ್ 15: ಬಿಜೆಪಿಗೆ ದೇವರ ಆಶೀರ್ವಾದ ಇದ್ದಿದ್ದರೆ ಈಗಾಗಲೇ ಸರ್ಕಾರವನ್ನು ರಚನೆ ಮಾಡಿರುತ್ತಿದ್ದರು ಎಂದು ಸಚಿವ ಎಚ್‌ಡಿ ರೇವಣ್ಣ ಹೇಳಿದ್ದಾರೆ.
ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 104 ಬಿಜೆಪಿ ಶಾಸಕರಿಗೆ ದೇವರ ಆಶೀರ್ವಾದವಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ, ದೇವರ ಆಶೀರ್ವಾದ ಬಿಜೆಪಿ ಮೇಲಿದ್ದಿದ್ದರೆ ಈಗಾಗಲೇ ಅವರು ಅಧಿಕಾರ ಹಿಡಿಯಬೇಕಿತ್ತು, ಯಾಕೆ ಸರ್ಕಾರ ರಚನೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ಜೆಡಿಎಸ್ ಹೆಸರು ಹೇಳಿಕೊಂಡು ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಿದೆ, ನಮ್ಮಿಂದಲೇ 30 ಸೀಟುಗಳು ಬಿಜೆಪಿಗೆ ಬಂದಿವೆ, ಕುಮಾರಸ್ವಾಮಿಯವರು ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿರುತ್ತಾರೆ, ಯಾರೂ ಕೂಡ ಧೃತಿಗೆಡಬೇಕಿಲ್ಲ, ಯಾವ ಆಡಳಿತವನ್ನೂ ನಾವು ಹಾಸನಕ್ಕೆ ಶಿಫ್ಟ್ ಮಾಡಿಲ್ಲ, ಬೇಕಿದ್ದರೆ ಹೇಳಿಕೆ ಕೊಟ್ಟವರು ಹಾಸನಕ್ಕೆ ಬಂದು ನೋಡಲಿ ಎಂದು ಗರಂ ಆಗಿ ನುಡಿದರು.

ಆಪರೇಷನ್ ಕಮಲದ ಕುರಿತು ಮಾಧ್ಯಮದೊಂದಿಗೆ ಮಾತನಾಡಲು ಇಚ್ಛಿಸದ ರೇವಣ್ಣ ನಡೀರಿ, ನಡೀರಿ ನನಗೆ ಮಾತನಾಡೋಕೆ ಮೂಡಿಲ್ಲ ಎಂದು ಎದ್ದು ಹೊರಟೇ ಬಿಟ್ಟರು.












Click it and Unblock the Notifications