'ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ' -ಕುಮಾರಸ್ವಾಮಿ

ಬೆಂಗಳೂರು, ಮೇ 1: ಕಾರ್ಮಿಕರ ದಿನಾಚರಣೆಗೆ ಮಾಜಿ ಮುಖ್ಯಮಂತ್ರಿ ಹೆಚ್‌ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ, ಶುಭಾಶಯ ತಿಳಿಸಿದ್ದಾರೆ.

ಕೊರೊನಾದಿಂದ ದೇಶದ ಕಾರ್ಮಿಕರು ಕಂಗಾಲಾಗಿದ್ದಾರೆ. ಕೆಲಸವಲ್ಲದೆ, ಹಣವಿಲ್ಲದೆ, ಅನೇಕ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಪರಿಸ್ಥಿತಿ ಬಂದಿದೆ. ಇಂತಹ ಕೆಟ್ಟ ಪರಿಸ್ಥಿತಿ ಆದಷ್ಟು ಬೇಗ ದೂರಗಲಿ ಎಂದು ಕುಮಾರಸ್ವಾಮಿ ಟ್ವಿಟ್ಟರ್‌ ಮೂಲಕ ಪ್ರಾರ್ಥನೆ ಮಾಡಿದ್ದಾರೆ.

''ಕರೋನಾ ಗಂಡಾಂತರಕಾರಿ ಪರಿಸ್ಥಿತಿಯಲ್ಲಿ ಕಾರ್ಮಿಕ ಬಂಧುಗಳ ಮೊಗದಲ್ಲಿ ನಗೆ ಮಾಸಿರುವುದು ವಾಸ್ತವ ಸತ್ಯ. ಕಂಡರಿಯದ ಈ ವಿಪತ್ತಿನ ಕಾಲವನ್ನು ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ.'' ಎಂದು ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

HD Kumaraswamy Wishes For Labours Day

''ಸೋತಿರುವ ದುಡಿಯುವ ಕೈಗಳಿಗೆ ಹೊಸ ಚೈತನ್ಯ ಬರಲಿ. ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಈ ಬಾರಿಯ ಕಾರ್ಮಿಕ ದಿನಾಚರಣೆ ಎದುರುಗೊಳ್ಳೋಣ. ಕಾರ್ಮಿಕರ ಭವಿಷ್ಯದ ಆತಂಕ ದೂರವಾಗಲಿ. ಎಲ್ಲರಿಗೂ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.'' ಎಂದು ಟ್ವೀಟ್ ಮಾಡಿದ್ದಾರೆ.

ಪ್ರತಿ ವರ್ಷ ಖುಷಿಯಿಂದ ಕಾರ್ಮಿಕ ದಿನ ಆಚರಣೆ ಮಾಡುತ್ತಿದ್ದ ಕಾರ್ಮಿಕರು ಈ ಬಾರಿ ದುಃಖದಲ್ಲಿ ಇದ್ದಾರೆ. ಕೊರೊನಾ ಭೀತಿ, ಲಾಕ್‌ಡೌನ್ ನಿಯಮಗಳ ನಡುವೆ ಅವರ ಬದುಕು ಸಂಕಷ್ಟದಲ್ಲಿ ಇದೆ. ಇದರಿಂದ 'ಇದನೆಲ್ಲ ಗೆದ್ದು ಬರುವ ದೃಢಸಂಕಲ್ಪ ಕಾರ್ಮಿಕರಲ್ಲಿ ಮನೆ ಮಾಡಲಿ' ಎಂದು ಕುಮಾರಸ್ವಾಮಿ ಶುಭ ಹಾರೈಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+